ಪತ್ನಿ ಮಹಾಲಕ್ಷ್ಮಿ (Mahalakshmi) ಜೊತೆ ರೊಮ್ಯಾಂಟಿಕ್ ಆಗಿರುವಂಥ ಮತ್ತೊಂದು ಫೋಟೋ ಶೇರ್ ಮಾಡಿದ್ದಾರೆ ನಿರ್ಮಾಪಕ ರವೀಂದರ್. ತಾವು ಉಳಿದುಕೊಂಡಿರುವ ಹೊಟೆಲ್ ಅನ್ನೇ ಅಲಂಕರಿಸಿ ಹೆಂಡತಿಗಾಗಿ ಸ್ವರ್ಗವನ್ನೇ ಧರೆಗೆ ತಂದಿದ್ದಾರೆ. ಮದುವೆಯ ನಂತರ ಮನೆದೇವರ ಆಶೀರ್ವಾದ ಪಡೆದ ಬಂದಿದ್ದ ಈ ಜೋಡಿ ಇದೀಗ ಹನಿಮೂನ್ (Honeymoon) ಮೂಡ್ ನಲ್ಲಿದ್ದಾರೆ. ಪ್ರತಿ ವಿಷಯವನ್ನೂ ಅಭಿಮಾನಿಗೆ ತಿಳಿಸಲು ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿದ್ದಾರೆ.
ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರನ್ (Ravinder Chandrasekaran) ಮದುವೆಯ (Wedding) ನಂತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಇನ್ಸ್ಟಾ ಮತ್ತು ಫೇಸ್ ಬುಕ್ ಸೇರಿದಂತೆ ಸೋಷಿಯಲ್ ಖಾತೆಗಳಲ್ಲಿ ಅವರು ನಿತ್ಯವೂ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಒಬ್ಬರಿಗೊಬ್ಬರು ಹೊಗಳುವ ಮತ್ತು ಟ್ರಾವೆಲ್ ಮಾಡುತ್ತಿರುವ ಫೋಟೋಗಳನ್ನೂ ಅಪ್ ಲೋಡ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ಸಂವಾದಿಸುತ್ತಿದ್ದಾರೆ. ಅಲ್ಲದೇ, ತಾವು ಹೊಸ ಬದುಕನ್ನು ಎಂಜಾಯ್ ಮಾಡುತ್ತಿರುವುದಾಗಿಯೂ ತಿಳಿಸಿದ್ದಾರೆ. ಇದನ್ನೂ ಓದಿ:ಬಂಧನದ ಭೀತಿಯಿಂದ ಕೇರಳಕ್ಕೆ ಎಸ್ಕೇಪ್ ಆದ್ರಾ ನಟಿ ಶ್ರೀಲೀಲಾ ತಾಯಿ?: ಮನೆಗೆ ಬೀಗ, ಮೊಬೈಲ್ ಆಫ್
ಈ ನಡುವೆ, ನನ್ನ ಪತಿ ದಪ್ಪ ಇದ್ದಾರೆ. ಹಾಗಂತ ಅವರನ್ನು ಅವಮಾನ ಮಾಡಬೇಡಿ ಎಂದು ನಟಿ ಮಹಾಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಗೆ ಬಂದು ಮನವಿ ಮಾಡಿಕೊಂಡಿದ್ದಾರೆ. ದಪ್ಪ ಇದ್ದಾರೆ ಅನ್ನುವ ಕಾರಣಕ್ಕೆ ಟ್ರೋಲ್ ಮಾಡುತ್ತಿದ್ದೀರಿ. ಕೆಟ್ಟದ್ದಾಗಿ ಕಾಮೆಂಟ್ ಮಾಡಲಾಗುತ್ತಿದೆ. ಇದರಿಂದಾಗಿ ಅವರಿಗೆ ನೋವಾಗುತ್ತದೆ. ನಮ್ಮ ಪಾಡಿಗೆ ನಮ್ಮನ್ನು ನೆಮ್ಮದಿಯಾಗಿ ಇರುವುದಕ್ಕೆ ಬಿಡಿ ಎಂದು ಮಹಾಲಕ್ಷ್ಮಿ ಮನವಿ ಮಾಡಿಕೊಂಡಿದ್ದಾರೆ.
ನಟಿ ಮಹಾಲಕ್ಷ್ಮಿ ಅವರನ್ನು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮದುವೆಯಾದ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಪ್ರತಿಯೊಂದು ಸಂಗತಿಯನ್ನೂ ಅವರು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಪ್ರೈವೆಟ್ ಜಟ್ ನಲ್ಲಿ ಹನಿಮೂನಿಗೆ ಹೋಗುವ ಮುನ್ನ ಅವರು ಮನೆದೇವರ ಗುಡಿಗೆ ಹೋಗಿ ಆಶೀರ್ವಾದ ಪಡೆದಿದ್ದಾರೆ. ಆ ಫೋಟೋವನ್ನೂ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.