ಮಂಡ್ಯ: ಟ್ರಾಮಾ ಕೇರ್ ಸೆಂಟರ್‌ಗೆ ಮಂಡ್ಯದಲ್ಲಿ ಜಾಗ ಕೊಡಲು ಸಿದ್ಧರಿದ್ದೇವೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ (Ravikumar Ganiga) ಪರೋಕ್ಷವಾಗಿ ಕೇಂದ್ರ ಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ (HD Kumaraswamy) ಟಾಂಗ್ ಕೊಟ್ಟಿದ್ದಾರೆ.
ಟ್ರಾಮಾ ಕೇರ್ ಸೆಂಟರ್ (Trauma Care Center) ಸ್ಥಾಪನೆಗೆ ಜಾಗ ಕೊಡುವಂತೆ ಜಿಲ್ಲಾಧಿಕಾರಿಗೆ ಹೆಚ್.ಡಿ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಕೆಡಿಪಿ ಸಭೆಯಲ್ಲಿ ಮದ್ದೂರಿಗೆ ಟ್ರಾಮಾ ಕೇರ್‌ಸೆಂಟರ್ ಕೊಡಲು ಶಾಸಕ ಉದಯ್ ಕೇಳಿದ್ದರು. ಈಗ ಮಂಡ್ಯದಲ್ಲೇ ಟ್ರಾಮಾ ಕೇರ್ ಸೆಂಟರ್ ಮಾಡಲು ಸಂಸದರು ಜಾಗ ಕೇಳಿದರೆ ಕೊಡಲು ತಯಾರಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ದೆಹಲಿ ವಾಯು ಮಾಲಿನ್ಯ ಕುರಿತು ಚರ್ಚೆಗೆ ರಾಹುಲ್ ಮನವಿ – ಕೇಂದ್ರ ಸಮ್ಮತಿ

ಮಿಮ್ಸ್ ಪಕ್ಕದಲ್ಲಿರುವ ತಮಿಳು ಕಾಲೋನಿ ಜಾಗ ವಿವಾದ ನ್ಯಾಯಾಲಯದಲ್ಲಿದೆ. ಡಿಎಚ್‌ಓ ಕಚೇರಿ ಆವರಣದಲ್ಲಿ ಟ್ರಾಮಾ ಕೇರ್ ಸೆಂಟರ್ ತೆರೆಯಲು ಜಾಗದ ಲಭ್ಯತೆ ಇದೆ. ಹಾಗಾಗಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ಜಾಗ ನೀಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಸದನದಲ್ಲಿ ʻಗೃಹಲಕ್ಷ್ಮಿʼ ಕದನ – ಲಕ್ಷ್ಮಿ ಹೆಬ್ಬಾಳ್ಕರ್ ಸದನದ ಗೌರವ ಕಳೆದ್ರು: ಆರ್.ಅಶೋಕ್ ಕಿಡಿ
ಕೈಗಾರಿಕೆ ಸ್ಥಾಪನೆಗೆ ಜಾಗ ಕೊಡುತ್ತಿಲ್ಲವೆಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಬಸರಾಳು ಮತ್ತು ಉಮ್ಮಡಹಳ್ಳಿಯಲ್ಲಿ ಕೈಗಾರಿಕೆ ಸ್ಥಾಪನೆ ಜಾಗ ಗುರುತಿಸಲಾಗಿದೆ. ಜಾಗ ಕೇಳಿ ಮತ್ತೆ ಅರಣ್ಯ ಜಾಗ ತೋರಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಅರಣ್ಯ ಜಾಗ ಅಂತ ಯಾರು ಹೇಳಿದ್ದು. ಮೊದಲು ಯಾವ ಕಾರ್ಖಾನೆ ತರುತ್ತೀರಿ ಹೇಳಿ ಅಗತ್ಯಕ್ಕೆ ತಕ್ಕಂತೆ ಸೂ ಕ್ತ ಜಾಗ ನೀಡುತ್ತೇವೆ. ಜವಾಬ್ದಾರಿ ಸ್ಥಾನದಲ್ಲಿ ಕುಳಿದುಕೊಂಡು ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ ಎಂದು ಟಾಂಗ್ ಕೊಟ್ಟರು.

