ನವದೆಹಲಿ: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರು ರವಿದಾಸ್ ಜಯಂತಿಯ ಅಂಗವಾಗಿ ವಾರಣಾಸಿಯ ರವಿದಾಸ್ ದೇವಸ್ಥಾನದಲ್ಲಿ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿದರು.
15-16ನೇ ಶತಮಾನದ ಪೂಜ್ಯ ಕವಿ ಮತ್ತು ಸಮಾಜ ಸುಧಾರಕ ರವಿದಾಸ್ ಅವರ ಜನ್ಮಸ್ಥಳ ಸೀರ್ ಗೋವರ್ಧನಕ್ಕೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಅವರು ಭೇಟಿ ನೀಡಿ ನೀಡಿದ್ದರು. ಬಾಬತ್‍ಪುರದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಮಾಜಿ ಶಾಸಕ ಅಜಯ್ ರೈ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಬರಮಾಡಿಕೊಂಡರು. ನಂತರ ನಗರದ ಗುರು ರವಿದಾಸ್ ದೇವಸ್ಥಾನಕ್ಕೆ ತೆರಳಿದರು. ಅಲ್ಲಿ ದೇವಸ್ಥಾನದ ಭಕ್ತರಿಗೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಊಟವನ್ನು ಬಡಿಸಿದರು.
Advertisement
#WATCH | Congress leaders Rahul Gandhi and Priyanka Gandhi Vadra serve ‘langer’ at Ravidas Temple in Varanasi, UP pic.twitter.com/m7wconCzZ0
— ANI UP/Uttarakhand (@ANINewsUP) February 16, 2022
Advertisement
ಜಾತಿಯನ್ನು ಲೆಕ್ಕಿಸದೆ ಎಲ್ಲರಿಗೂ ಸಮಾನತೆ ಮತ್ತು ಘನತೆಗಾಗಿ ಪ್ರತಿಪಾದಿಸಿದ ಸಂತ ರವಿದಾಸ್ ಅವರನ್ನು ದಲಿತ ಐಕಾನ್ ಎಂದು ಪರಿಗಣಿಸಲಾಗಿದೆ. ಅವರು ಲಿಂಗ ಸಮಾನತೆಯನ್ನು ಪ್ರತಿಪಾದಿಸಿದ್ದರು. ಲಿಂಗ ಅಥವಾ ಜಾತಿಯ ಆಧಾರದ ಮೇಲೆ ಸಮಾಜದ ವಿಭಜನೆಯನ್ನು ವಿರೋಧಿಸಿದರು. ಇದನ್ನೂ ಓದಿ: ರಾಷ್ಟ್ರ ದ್ರೋಹಿ: ನಾನಲ್ಲ ರಾಷ್ಟ್ರದ್ರೋಹಿ ನೀನು – ವಿಧಾನಸಭೆಯಲ್ಲಿ ಡಿಕೆಶಿ vs ಈಶ್ವರಪ್ಪ
Advertisement
Advertisement
ಇಂದು ಮುಂಜಾನೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಕರೋಲ್ ಬಾಗ್‍ನಲ್ಲಿರುವ ಗುರು ರವಿದಾಸ್ ವಿಶ್ರಾಮ್ ಧಾಮ್ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅವರು ಭಕ್ತರೊಂದಿಗೆ ಸಂವಾದ ನಡೆಸಿ, ಶಾಬಾದ್ ಕೀರ್ತನೆಯಲ್ಲಿ ಭಾಗವಹಿಸಿದರು. ಇದನ್ನೂ ಓದಿ: ಸಂತ ರವಿದಾಸ್‌ಗೆ ಪ್ರಾರ್ಥನೆ ಸಲ್ಲಿಸಿದ ಮೋದಿ – ವೀಡಿಯೋ ವೈರಲ್