ಇಂದೋರ್: ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಇಂದು ಮೂರು ವಿಕೆಟ್ ಪಡೆಯುವ ಮೂಲಕ ಕಪಿಲ್ ದೇವ್ ಅವರ ಸಾಧನೆಯನ್ನು ಹಿಂದಿಕ್ಕಿದ್ದಾರೆ.
ಪೀಟರ್ ಹ್ಯಾಂಡ್ಸಕೊಂಬ್ (Peter Handscomb), ಅಲೆಕ್ಸ್ ಕಾರೈ (Alex Carey) ಮತ್ತು ನಾಥನ್ ಲಿಯಾನ್ (Nathan Lyon) ಅವರನ್ನು ಔಟ್ ಮಾಡುವ ಮೂಲಕ ಈ ಸಾಧನೆ ಗೈದಿದ್ದಾರೆ. ಅಂತರಾಷ್ಟ್ರೀಯ ಪಂದ್ಯದಲ್ಲಿ ಇಂದಿನ ಮೂರು ವಿಕೆಟ್‍ಗಳು ಸೇರಿ 689 ವಿಕೆಟ್ ಅಶ್ವಿನ್ ಪಡೆದಿದ್ದಾರೆ.
ಅನಿಲ್ ಕುಂಬ್ಳೆ (Anil Kumble) 953 ವಿಕೆಟ್ ಹಾಗೂ ಹರ್ಬಜನ್ ಸಿಂಗ್ 7ಂ7 ವಿಕೆಟ್ ಪಡೆದು ಮೊದಲೆರಡು ಸ್ಥಾನದಲ್ಲಿದ್ದಾರೆ. ಈ ಮೊದಲು ಕಪಿಲ್‍ದೇವ್ 687 ವಿಕೆಟ್ ಪಡೆದಿದ್ದರು. ಇದನ್ನೂ ಓದಿ: ಮತ್ತೆ ಕಿರುತೆರೆಗೆ ಮರಳಿದ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ
ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ (Australia) ಇಂದು 88 ರನ್ ಮುನ್ನಡೆ ಪಡೆದು 197 ರನ್‍ಗಳಿಗೆ ಆಲೌಟ್ ಆಯ್ತು. ಇದನ್ನೂ ಓದಿ: ನಾಗಾಲ್ಯಾಂಡ್‍ಗೆ ಮೊದಲ ಶಾಸಕಿಯಾಗಿ NDPP ಅಭ್ಯರ್ಥಿ ಎಂಟ್ರಿ