ಚೆನ್ನೈ: ಐಪಿಎಲ್ ಟೂರ್ನಿಯಲ್ಲಿ ಮಂಕಡ್ ರನೌಟ್ ಮಾಡುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದ ಆರ್. ಅಶ್ವಿನ್ ಅವರು ಮತ್ತೊಮ್ಮೆ ತಮ್ಮ ವಿಶಿಷ್ಟ ಬೌಲಿಂಗ್ ಮೂಲಕ ಸುದ್ದಿಯಾಗಿದ್ದಾರೆ.
ತಮಿಳುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿರುವ ಅಶ್ವಿನ್, ಶುಕ್ರವಾರ ನಡೆದ ಸೂಪರ್ ಗಲ್ಲಿಸ್, ದಿಂದಿಗಲ್ ಡ್ರಾಗನ್ಸ್ (ಡಿಡಿ) ತಂಡಗಳ ನಡುವಿನ ಪಂದ್ಯದಲ್ಲಿ ವಿಶಿಷ್ಟ ಶೈಲಿಯಲ್ಲಿ ಬೌಲ್ ಮಾಡಿದರು. ಪರಿಣಾಮ ಸ್ಟ್ರೈಕ್ ನಲ್ಲಿದ್ದ ಬ್ಯಾಟ್ಸ್ ಮನ್ ಕೂಡ ಅಚ್ಚರಿಗೊಂಡಿದ್ದರು. ಡಿಡಿ ತಂಡದ ನಾಯಕರಾಗಿರುವ ಅಶ್ವಿನ್ ತಂಡ ಪಂದ್ಯದಲ್ಲಿ 10 ರನ್ ಜಯ ಪಡೆದಿತ್ತು. ಪಂದ್ಯದಲ್ಲಿ 2 ಎಸೆತಗಳಿಗೆ 17 ರನ್ ಗಳು ಬೇಕಾಗಿರುವ ಸಂದರ್ಭದಲ್ಲಿ ಅಶ್ವಿನ್ ವಿಶೇಷ ರೀತಿಯಲ್ಲಿ ಬೌಲ್ ಮಾಡಿದ್ದರು. ಮೊದಲು ಬ್ಯಾಟ್ ಮಾಡಿದ್ದ ಡಿಡಿ ತಂಡ 9 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತ್ತು.
Another leaf out of Ashwin's tricks ???????????? https://t.co/j8o3BEJCE4
— Bharath Kumar Reddy (@bharathbojja) July 19, 2019
ಅಶ್ವಿನ್ ಬೌಲ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಶ್ವಿನ್ ಬೌಲಿಂಗ್ ಮಾಡುವ ಸಂದರ್ಭದಲ್ಲಿ ಪೂರ್ಣ ಆ್ಯಕ್ಷನ್ ಮಾಡದೆ ಬೌಲ್ ಮಾಡಿದ್ದಾರೆ. ಈ ಎಸೆತ ಪಂದ್ಯದ ಫಲಿತಾಂಶದ ಮೇಲೆ ಹೆಚ್ಚು ಪ್ರಭಾವ ಉಂಟು ಮಾಡದಿದ್ದರು, ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಅಭಿಮಾನಿಗಳು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷ ಎಂದರೆ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಅರ್ಡರ್ ನಲ್ಲೂ ಗಮನ ಸೆಳೆದಿದ್ದ ಅಶ್ವಿನ್, ನಂ3 ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ 1 ಸಿಕ್ಸರ್, 5 ಬೌಂಡರಿಗಳ ನೆರವಿನಿಂದ 19 ಎಸೆತಗಳಲ್ಲಿ 37 ರನ್ ಗಳಿಸಿದರು.
https://twitter.com/IManish10_/status/1152282071529771011