ಲಂಡನ್: ಆಗಸ್ಟ್ 1 ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾ ಮತ್ತೊಂದು ಅಘಾತವನ್ನು ಎದುರಿಸಿದ್ದು, ತಂಡದ ಪ್ರಮುಖ ಸ್ಪೀನರ್ ಆರ್ ಅಶ್ವಿನ್ ಗಾಯದ ಸಮಸ್ಯೆ ಸಿಲುಕಿದ್ದಾರೆ.
ಎಸ್ಸೆಕ್ಸ್ ತಂಡದ ವಿರುದ್ಧ ಏಕೈಕ ಅಭ್ಯಾಸ ಪಂದ್ಯಕ್ಕೂ ಮೊದಲು ಅಭ್ಯಾಸದ ವೇಳೆ ಅಶ್ವಿನ್ ತಮ್ಮ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಕೈ ಬೆರಳಿಗೆ ಗಾಯವಾದ ಕಾರಣ ಅಶ್ವಿನ್ 2ನೇ ದಿನದ ತರಬೇತಿಗೆ ಗೈರುಹಾಜರಿ ಆಗಿದ್ದರು. ಸದ್ಯ ಅಶ್ವಿನ್ ಅವರಿಗೆ ಸಣ್ಣ ಪ್ರಮಾಣದ ಗಾಯವಾಗಿದೆ ಎಂದು ಬಿಸಿಸಿಐ ವೈದ್ಯರು ತಿಳಿಸಿದ್ದಾರೆ. ಆಗಸ್ಟ್ 1 ರಂದು ಆರಂಭವಾಗುವ ಮೊದಲ ಪಂದ್ಯದಲ್ಲಿ ಅಶ್ವಿನ್ ಭಾಗವಹಿಸುವ ನಿರೀಕ್ಷೆ ಇದೆ.
Advertisement
Advertisement
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಆರಂಭದಲ್ಲೇ ಟೀಂ ಇಂಡಿಯಾ ಆಟಗಾರರು ಗಾಯದ ಸಮಸ್ಯೆ ಎದುರಿಸಿದ್ದರು. ತಂಡದ ಪ್ರಮುಖ ಬೌಲರ್ ಭುವನೇಶ್ವರ್ ಕುಮಾರ್ ಹಾಗೂ ಜಸ್‍ಪ್ರೀತ್ ಬುಮ್ರಾ ಗಾಯದ ಸಮಸ್ಯೆಗೆ ಸಿಲುಕಿದ್ದರು.
Advertisement
ಎಸ್ಸೆಕ್ಸ್ ತಂಡದ ವಿರುದ್ಧದ ಎರಡನೇ ದಿನದಾಟವನ್ನು ಮುಂದುವರಿಸಿದ ದಿನೇಶ್ ಕಾರ್ತಿಕ್ (82 ರನ್) ಅರ್ಧ ಶತಕ ಸಿಡಿಸಿ ಮಿಂಚಿದರು. ಮೊದಲ ದಿನದಾಟದಲ್ಲಿ 33 ರನ್ ಗಳಿಸಿದ್ದ ಪಾಂಡ್ಯ ಕೂಡ 51 ರನ್ ಗಳಿಸಿ ಅರ್ಧಶತಕ ಗಳಿಸಿ ತಂಡದ ಮೊತ್ತ 300 ಗಡಿದಾಟಲು ನೆರವಾದರು. ಬಳಿಕ ಬಂದ ರಿಷಭ್ ಪಂತ್ ಬಿರುಸಿನ ಆಟವಾಡಿ 33 ರನ್ ಗಳಿಸಿದರು. ಇದರೊಂದಿಗೆ ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 395 ರನ್ ಗಳಿಸಿ ಅಲೌಟ್ ಆಗಿದೆ.
Advertisement
ಎಸ್ಸೆಕ್ಸ್ ತಂಡ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 235 ರನ್ ಗಳಿಸಿದೆ. ಎಸ್ಸೆಕ್ಸ್ ತಂಡದ ಪರ ಟಾಮ್ ವೆಸ್ಟ್ಲಿ 57 ರನ್ ಹಾಗೂ ಮೈಕಲ್ ಪೆಪ್ಪರ್ 53 ರನ್ ಗಳಿಸಿ ಅರ್ಧಶತಕ ಗಳಿಸಿದ್ದಾರೆ. ಟೀಂ ಇಂಡಿಯಾ ಪರ ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮಾ ತಲಾ 2 ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ 1 ವಿಕೆಟ್ ಪಡೆದಿದ್ದಾರೆ. ಎಸ್ಸೆಕ್ಸ್ ವಿರುದ್ಧದ ಪಂದ್ಯದ ಆರಂಭಕ್ಕೂ ಮುನ್ನವೇ ಕ್ರೀಡಾಂಗಣ ಪಿಚ್ ಕುರಿತು ಟೀಂ ಇಂಡಿಯಾ ಆಕ್ಷೇಪ ವ್ಯಕ್ತಪಡಿಸಿತ್ತು, ಇದರಿಂದ 4 ದಿನಗಳ ಪಂದ್ಯವನ್ನು 3 ದಿನಗಳಿಗೆ ಕಡಿತಗೊಳಿಸಲಾಯಿತ್ತು.