ಭಾರತೀಯ ಚಿತ್ರೋದ್ಯಮದಲ್ಲಿ ಅಪಾಯಕಾರಿ ಸ್ಟಂಟ್ ಮಾಡಿಸುವ ಮೂಲಕ ಹೆಸರಾಗಿರುವ ಕನ್ನಡದ ಖ್ಯಾತ ಸಾಹಸ ನಿರ್ದೇಶಕ ರವಿವರ್ಮ, ಇದೀಗ ಅಂಥದ್ದೇ ರಿಸ್ಕ್ ಶಾಟ್ ವೊಂದನ್ನು ಕಂಪೋಸ್ ಮಾಡಿದ್ದಾರೆ. ಎಲ್ಲ ರೀತಿಯ ಮುನ್ನೆಚ್ಚರಿಕೆ ತಗೆದುಕೊಂಡು ಅಪಾಯಕಾರಿ ಆಕ್ಷನ್ ಎಪಿಸೋಡನ್ನು ಪೂರ್ಣಗೊಳಿಸಿದ್ದಾರೆ.
ಪ್ರಭು ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಬಾಡಿ ಗಾಡ್’ ಸಿನಿಮಾದಲ್ಲಿ ಇಂಥದ್ದೊಂದು ರಿಸ್ಕಿ ಸಾಹಸಗಳನ್ನು ಮಾಡಿದ್ದೇನೆ ಎನ್ನುತ್ತಾರೆ ರವಿವರ್ಮ. “ನನ್ನ ಪ್ರತಿಯೊಂದು ಪ್ರಾಜೆಕ್ಟ್‌ಗಳು ನನಗೆ ವಿಭಿನ್ನ ಮತ್ತು ವಿಶೇಷವಾದದ್ದು. ಆದರೆ ಬಾಡಿಗಾಡ್ ಚಿತ್ರದ ಫೈಟ್ ಕಾನ್ಸೆಪ್ಟ್ ವಿಭಿನ್ನದಲ್ಲೇ ವಿಶೇಷವಾದದ್ದು. ನಾನು ಅದನ್ನು ಸವಾಲಾಗಿ ತೆಗೆದುಕೊಂಡು ಮೂರು ದಿನದಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ” ಎನ್ನುತ್ತಾರೆ.
ಈ ಚಿತ್ರದಲ್ಲಿ ಮನೋಜ್ ಮತ್ತು ನಿರ್ದೇಶಕ-ನಟ ಗುರುಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.