ಮುಂಬೈ: ಕೋಚ್ ಸ್ಥಾನಕ್ಕೆ ಆಯ್ಕೆಯಾದ 3 ತಿಂಗಳ ಅವಧಿಯಲ್ಲಿ ರವಿಶಾಸ್ತ್ರಿ ಅವರಿಗೆ 1.20 ಕೋಟಿ ರೂ. ವೇತನವನ್ನು ನೀಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹೇಳಿಕೊಂಡಿದೆ.
ವರ್ಷಕ್ಕೆ 8 ಕೋಟಿ ರೂ. ಸಂಭಾವನೆ ಪಡೆಯಲಿರುವ ರವಿಶಾಸ್ತ್ರಿ ಕೋಚ್ ಸ್ಥಾನಕ್ಕೆ ಆಯ್ಕೆಯಾಗಿ ಮೂರು ತಿಂಗಳು ಕಳೆದಿದೆ. ಹೀಗಾಗಿ ಜುಲೈ 18ರಿಂದ ಮತ್ತು ಅಕ್ಟೋಬರ್ 18 ರ ಅವಧಿಗೆ 1.20 ಕೋಟಿ ರೂ. ಹಣವನ್ನು ನೀಡಲಾಗಿದೆ ಎಂದು ಬಿಸಿಸಿಐ ತನ್ನ ವೆಬ್‍ಸೈಟ್‍ನಲ್ಲಿ ತಿಳಿಸಿದೆ.
Advertisement
ಇಲ್ಲಿಯವರೆಗೂ ಬಿಸಿಸಿಐ ಯಾವುದೇ ಕೋಚ್‍ಗೂ ಇಷ್ಟೊಂದು ಸಂಭಾವನೆ ನೀಡಿರಲಿಲ್ಲ. ಆದರೆ ಈಗ ಇಷ್ಟೊಂದು ಸಂಭಾವನೆ ಪಡೆಯುವ ಮೂಲಕ ರವಿಶಾಸ್ತ್ರಿ ಅತಿ ಹೆಚ್ಚು ಸಂಭಾವನೆ ಪಡೆದ ಕೋಚ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Advertisement
ಹಾಗೆಯೇ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೂ ಸಹ ಸಂಭಾವನೆ ನೀಡಲಾಗಿದ್ದು, ವಿದೇಶ ನೆಲದಲ್ಲಿ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ್ದಕ್ಕೆ 57.88 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ ಎಂದು ಬಿಸಿಸಿಐ ವೆಬ್‍ಸೈಟ್ ನಲ್ಲಿ ಹೇಳಿಕೊಂಡಿದೆ.