ಮುಂಬೈ: ಕೊನೆಗೂ ನಾಯಕ ವಿರಾಟ್ ಕೊಹ್ಲಿ ಆಸೆ ನೇರವೇರಿದ್ದು, ರವಿಶಾಸ್ತ್ರಿ ಅವರು ಟೀಂ ಇಂಡಿಯಾದ ಕೋಚ್ ಆಗಿ ಆಯ್ಕೆ ಆಗಿದ್ದಾರೆ. 2019ರವರೆಗೆ ಟೀಂ ಇಂಡಿಯಾದ ಕೋಚ್ ಆಗಿ ರವಿಶಾಸ್ತ್ರಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ.
ಬಿಸಿಸಿಐ ಆಡಳಿತ ಮಂಡಳಿಯ ಮುಖ್ಯಸ್ಥ ವಿನೋದ್ ರೈ ಅವರು ಮಂಗಳವಾರ ಸಂಜೆ ಒಳಗಡೆ ಕೋಚ್ ಆಯ್ಕೆಯನ್ನು ಅಂತಿಮಗೊಳಿಸಬೇಕೆಂದು ಕ್ರಿಕೆಟ್ ಸಲಹಾ ಸಮಿತಿ ಗೆ ಸೂಚಿಸಿದ್ದರು. ಈ ಸೂಚನೆ ಬಂದ ಕೂಡಲೇ ಬಿಸಿಸಿಐ ರವಿಶಾಸ್ತ್ರಿ ಅವರನ್ನು ಕೋಚ್ ಆಗಿ ನೇಮಿಸಿದೆ.
Advertisement
ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ಕೋಚ್ ಇಲ್ಲದೇ ತೆರಳಲಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು.
Advertisement
ಮುಂಬೈ ಬಿಸಿಸಿಐ ಕಚೇರಿಯಲ್ಲಿ ಸೋಮವಾರ ಕೋಚ್ ಹುದ್ದೆಗೆ ನಿರ್ದೇಶಕ ರವಿಶಾಸ್ತ್ರಿ, ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಟಾಮ್ ಮೂಡಿ, ಹಾಲಿ ಆಫ್ಘಾನಿಸ್ತಾನ ತಂಡದ ಕೋಚ್ ಲಾಲ್ ಚಂದ್ ರಜಪೂತ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ಕೋಚ್ ಮತ್ತು ನಿರ್ದೇಶಕರಾದ ರಿಚರ್ಡ್ ಫೈಬಸ್ ಅವರನ್ನು ಸಂದರ್ಶನ ಮಾಡಲಾಗಿತ್ತು.
Advertisement
ಈ ಹಿಂದೆ ರವಿಶಾಸ್ತ್ರಿ ಅವರು 8 ತಿಂಗಳ ಕಾಲ ಟೀಂ ಇಂಡಿಯಾದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. 2016ರ ವಿಶ್ವಕಪ್ ಬಳಿಕ ನಡೆದ ಕೋಚ್ ಸ್ಪರ್ಧೆಯಲ್ಲಿ ಕುಂಬ್ಳೆ ಅವರು ರವಿಶಾಸ್ತ್ರಿ ಅವರನ್ನು ಹಿಂದಿಕ್ಕಿ ಆಯ್ಕೆ ಆಗಿದ್ದರು.