Connect with us

Cricket

ಕೊಹ್ಲಿ ಭಾರತೀಯ ಕ್ರಿಕೆಟ್‍ನ ಬಾಸ್: ರವಿಶಾಸ್ತ್ರಿ

Published

on

ನವದೆಹಲಿ: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟಿನ ಬಾಸ್ ಎಂದು ಟೀಂ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.

ಸ್ಕೈ ಕ್ರಿಕೆಟ್ ಪಾಡ್‍ಕ್ಯಾಸ್ಟ್ ಕಾರ್ಯಕ್ರಮದಲ್ಲಿ ಶಾಸ್ತ್ರಿ ಇಂಗ್ಲೆಂಡ್‍ನ ಮಾಜಿ ನಾಯಕ ನಾಸರ್ ಹುಸೇನ್ ಮತ್ತು ಮೈಕೆಲ್ ಅಥರ್ಟನ್ ಮತ್ತು ರಾಬ್ ಕೀ ಅವರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಕೊಹ್ಲಿ ಭಾರತೀಯ ಕ್ರಿಕೆಟಿನ ಬಾಸ್, ಜೊತೆಗೆ ನಾಯಕನ ಹೊರೆಯನ್ನು ಹೊರಹಾಕಲು ಅವರಿಗೆ ಸಹಾಯ ಸಿಬ್ಬಂದಿ ಇದ್ದಾರೆ ಎಂದು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಅವರು ತವರು ನೆಲದಲ್ಲಿ 12 ಟೆಸ್ಟ್ ಅನ್ನು ಗೆಲ್ಲುವ ಮೂಲಕ ವಿಶ್ವದಾಖಲೆ ನಿರ್ಮಿಸಿ ಭಾರತೀಯರ ಹೃದಯದಲ್ಲಿದ್ದಾರೆ. ಒಂದು ತಂಡದಲ್ಲಿ ನಾಯಕ ಯಾವಗಲೂ ಬಾಸ್ ಆಗಿ ಇರುತ್ತಾರೆ. ಕೋಚಿಂಗ್ ಸಿಬ್ಬಂದಿಯ ಕೆಲಸ ನನ್ನ ಪ್ರಕಾರ ಕ್ರಿಕೆಟ್ ಮೈದಾನದಲ್ಲಿ ಹುಡುಗರನ್ನು ಧೈರ್ಯಶಾಲಿಯಾಗಿ, ಸಕಾರತ್ಮಕವಾಗಿ ಮತ್ತು ಭಯಪಡದೇ ಆಡುವಂತೆ ಸಿದ್ಧ ಮಾಡುವುದು ಎಂದು ನಾನು ನಂಬುತ್ತೇನೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ತಂಡದ ನಾಯಕ ತಂಡವನ್ನು ಮುನ್ನೆಡೆಸುತ್ತಿರುತ್ತಾನೆ. ತಂಡದ ಜವಾಬ್ದಾರಿ ನಮಗೂ ಇರುತ್ತದೆ. ಆದರೆ ಮೈದಾನದ ಮಧ್ಯೆದಲ್ಲಿ ಅವರ ಆಟವನ್ನು ಅವರಿಗೆ ಆಡಲು ಬಿಡಬೇಕು. ತಂಡದ ನಾಯಕ ಮೈದಾನದ ಮಧ್ಯೆದಲ್ಲಿ ನಿಂತು ಎಲ್ಲವನ್ನು ಮಾಡುತ್ತಿರುತ್ತಾನೆ. ಅವನಿಗೆ ಎಲ್ಲವನ್ನು ಎದುರಿಸಲು ನಾವು ಪ್ರೋತ್ಸಾಹಿಸಬೇಕು. ಆಗ ನಾಯಕ ತಂಡವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಪಂದ್ಯವನ್ನು ಮುನ್ನೆಡೆಸುತ್ತಾನೆ ಎಂದು ಶಾಸ್ತ್ರಿ ಕೋಚ್ ಅನುಭವವನ್ನು ವಿವರಿಸಿದ್ದಾರೆ.

ಇದೇ ವೇಳೆ ಕೊಹ್ಲಿ ಅವರು ಫಿಟ್ನೆಸ್ ಮತ್ತು ಅವರು ತಂಡದ ಇತರ ಆಟಗಾರನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಮಾತನಾಡಿರುವ ರವಿಶಾಸ್ತ್ರಿ, ಫಿಟ್ನೆಸ್ ಬಗ್ಗೆ ಮಾತನಾಡುವುದಾದರೆ ಕೊಹ್ಲಿ ನಾಯಕತ್ವದ ಮುಂಚೂಣಿಗೆ ಬರುತ್ತಾರೆ. ಫಿಟ್ನೆಸ್ ವಿಚಾರದಲ್ಲಿ ಅವರು ಗೊಂದಲ ಮಾಡಿಕೊಳ್ಳುವುದಿಲ್ಲ. ಕೊಹ್ಲಿ ಬೆಳಗ್ಗೆ ಎದ್ದು ಇತರ ಆಟಗಾರರಿಗೆ ನೀವು ಈ ಪಂದ್ಯ ಆಡಬೇಕು ಎಂದರೆ ಫಿಟ್ ಆಗಿ ಇರಬೇಕು. ಯಾವುದೇ ಪರಿಸ್ಥಿತಿಯಲ್ಲೂ ತಂಡಕ್ಕೆ ನೆರವಾಗಬೇಕು ಎಂದು ಎಚ್ಚರಿಕೆ ನೀಡುತ್ತಾರೆ ಎಂದು ತಿಳಿಸಿದ್ದಾರೆ.

ಸದ್ಯ ಭಾರತ ತಂಡದಲ್ಲಿ ವಿಶ್ರಾಂತಿ ಪಡೆಯದೇ ನಿರಂತರವಾಗಿ ಆಟವಾಡುತ್ತಿರುವ ಕೆಲ ಆಟಗಾರಲ್ಲಿ ಕೊಹ್ಲಿ ಅವರು ಒಬ್ಬರು. ನಾನು ಕೇವಲ ತರಬೇತಿ ನೀಡಬಹುದು. ಆದರೆ ಕೊಹ್ಲಿ ತನ್ನ ಆಹಾರ ಕ್ರಮದಲ್ಲಿ ಫಿಟ್ ಆಗಿ ಇರಲು ಬಹಳ ತ್ಯಾಗ ಮಾಡಿದ್ದಾರೆ. ಈ ಕಟ್ಟು ನಿಟ್ಟಿನ ಅವರ ನಿಯಮಗಳು ಬೇರೆ ಆಟಗಾರರನ್ನು ಹುರಿದುಂಬಿಸುತ್ತದೆ ಎಂದು ರವಿಶಾಸ್ತ್ರಿ ಕೊಹ್ಲಿ ಅವರನ್ನು ಹಾಡಿಹೊಗಳಿದ್ದಾರೆ.

Click to comment

Leave a Reply

Your email address will not be published. Required fields are marked *