ಸಿಡಿದೆದ್ದ ಜಯಂ ರವಿ: ಪರಿಹಾರಕ್ಕಾಗಿ 9 ಕೋಟಿ ಬೇಡಿಕೆ

Public TV
1 Min Read
jayam ravi

ಮಿಳು ನಟ ಜಯಂ ರವಿ (Jayam Ravi) ಇತ್ತೀಚೆಗೆ ತಮ್ಮ ಸಿನಿಮಾಗಳಿಗಿಂತ ವೈಯಕ್ತಿಕ ಕಾರಣಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಪತ್ನಿಯೊಂದಿಗೆ ಜಗಳ ಹಾಗೂ ವಿಚ್ಛೇದನ ವಿಚಾರವಾಗಿ ಜಯಂ ರವಿ ಸುದ್ದಿಯಾಗಿದ್ದರು. ಇದೀಗ ಸಿನಿಮಾ ನಿರ್ಮಾಪಕರು ಹಾಗೂ ನಿರ್ಮಾಣ ಸಂಸ್ಥೆಯ ವಿಚಾರವಾಗಿ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

ಜಯಂ ರವಿ ಜೊತೆ ಸಿನಿಮಾ ಮಾಡುವುದಾಗಿ 80 ದಿನಗಳ ಕಾಲ್‌ಶೀಟ್ ಪಡೆದು ಅನಾವಶ್ಯಕವಾಗಿ ಕಾಲಹರಣ ಮಾಡಿದೆ. ಕಾಲ್‌ಶೀಟ್ ಕೊಟ್ಟ ದಿನಾಂಕದಂದು ಯಾವುದೇ ಸಿನಿಮಾ ಮಾಡಿಲ್ಲ. ಹೀಗಾಗಿ, ಜಯಂ ರವಿ ಇದಕ್ಕೆ ಪರಿಹಾರವಾಗಿ ನಿರ್ಮಾಪಕರು 9 ಕೋಟಿ ಹಣ ನೀಡಬೇಕು ಅಂತಾ ಕೋರ್ಟ್ ಮುಂದೆ ಹೋಗಿದ್ದಾರೆ. ಇದನ್ನೂ ಓದಿ: ಸುಪ್ರೀಂ ಟೆನ್ಶನ್‌ ನಡ್ವೆಯೂ ʻಡೆವಿಲ್ʼ ಸಂಭ್ರಮಕ್ಕೆ ಸಜ್ಜಾದ ಡಿಬಾಸ್‌ ಫ್ಯಾನ್ಸ್

jayam ravi

ಅಂದಹಾಗೆ ನಟ ರವಿ ಮೋಹನ್ ಅವರು ಬಾಂಬೆ ಟಚ್ ಗೋಲ್ಡ್ ಯೂನಿವರ್ಸ್ ಪ್ರೈವೆಟ್ ಲಿಮಿಟೆಡ್ ಹೆಸರಿನ ನಿರ್ಮಾಣ ಸಂಸ್ಥೆಗೆ ಬರೋಬ್ಬರಿ 80 ದಿನಗಳ ಕಾಲ್‌ಶೀಟ್ ನೀಡಿದ್ದರಂತೆ. ಈ ಸಂಸ್ಥೆ ಸಿನಿಮಾವನ್ನ ಪ್ರಾರಂಭ ಕೂಡ ಮಾಡಿಲ್ಲ. ಅಲ್ಲದೇ ಆ ಕಾಲ್‌ಶೀಟ್ ಕೊಟ್ಟ ಟೈಂನಲ್ಲಿ ಜಯಂ ರವಿ ಬೇರೆ ಯಾವುದೇ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಕಾಲ್‌ಶೀಟ್ ಮೇಲೆ ಎರಡು ಸಿನಿಮಾಗಳ ಆಫರ್ ಕೂಡಾ ಬಂದಿದ್ದರೂ ಒಪ್ಪಿಕೊಳ್ಳಲಿಲ್ಲ.

ಸುಳ್ಳು ಭರವಸೆ ನೀಡಿ ಸಿನಿಮಾನೂ ಮಾಡದೇ ಇರೋ ಕಾರಣಕ್ಕೆ ಜಯಂ ರವಿ ಬಾಂಬೆ ಟಚ್ ಗೋಲ್ಡ್ ಯೂನಿವರ್ಸ್ ಪ್ರೈವೆಟ್ ಲಿಮಿಟೆಡ್ ಹೆಸರಿನ ನಿರ್ಮಾಣ ಸಂಸ್ಥೆ ವಿರುದ್ಧ ಹೈದರಾಬಾದ್ ಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದಾರಂತೆ. ಇದನ್ನೂ ಓದಿ: ಫೋಟೋಶೂಟ್ ಮೂಡ್‌ನಲ್ಲಿ ಪವಿತ್ರಾ ಗೌಡ

Share This Article