ಹಾಂಕಾಂಗ್: ಇಲ್ಲಿ ನಡೆಯುತ್ತಿರುವ ಹಾಂಕಾಂಗ್ ಸಿಕ್ಸಸ್ ಕೂಟದ (Hong Kong Sixes 2024) ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡದ (Team India) ನಾಯಕ ರಾಬಿನ್ ಉತ್ತಪ್ಪ (Robin Uthappa) ಅವರ ಒಂದೇ ಓವರ್‌ನಲ್ಲಿ ರವಿ ಬೋಪಾರಾ (Ravi Bopara) ಅವರು 6 ಸಿಕ್ಸರ್ ಚಚ್ಚಿದ್ದಾರೆ.
???????????????????? ????????????! ⚠️
The skipper of England, Ravi Bopara is raining sixes in Hong Kong!????#HongKong #AsiasWorldCity #Cricket #ItsRainingSixes pic.twitter.com/mDckwXkeEP
— Hong Kong Sixes (@HongKongSixes) November 2, 2024
ಇಂಗ್ಲೆಂಡ್ ಇನಿಂಗ್ಸ್‌ನ ನಾಲ್ಕನೇ ಓವರ್ ನಲ್ಲಿ ಬೋಪಾರಾ ಈ ವಿಶೇಷ ಸಾಧನೆಗೈದಿದ್ದಾರೆ. 3 ಓವರ್‌ಗಳಲ್ಲಿ ಇಂಗ್ಲೆಂಡ್ ಕೇವಲ 36 ರನ್ ಮಾಡಿತ್ತು. ಆದರೆ ನಾಲ್ಕನೇ ಓವರ್ ನಲ್ಲಿ ಬೋಪಾರಾ, ಉತ್ತಪ್ಪ ಓವರ್ ನಲ್ಲಿ ರನ್ ಮಳೆ ಸುರಿಸಿದರು. ಆ ಓವರ್‌ನ ಮೊದಲ ಐದು ಎಸೆತಗಳಲ್ಲಿ ಬೋಪಾರ ಐದು ಸಿಕ್ಸರ್‌ಗಳನ್ನು ಸಿಡಿಸಿದರು, ನಂತರ ಉತ್ತಪ್ಪ ವೈಡ್ ಎಸೆದರು. ಆದರೂ ಅವರು ಅಂತಿಮ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿ ಓವರ್ ನಲ್ಲಿ 37 ರನ್ ಕಲೆಹಾಕಿದರು.
ಈ ಮೂಲಕ, ಬೋಪಾರಾ ಹಾಂಕಾಂಗ್ ಸಿಕ್ಸ್ 2024 ರಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ರಾಬಿನ್ ಉತ್ತಪ್ಪ ನಾಯಕತ್ವದಲ್ಲಿ ಭಾರತ ಇದುವರೆಗೆ ಆಡಿದ ಎಲ್ಲಾ ಪಂದ್ಯಗಳಲ್ಲಿ ಸೋಲು ಕಂಡಿದೆ.