ಬೆಂಗಳೂರು: ಪತ್ರಕರ್ತ ಸನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ರವಿ ಬೆಳಗೆರೆಗೆ ಸಿಸಿಬಿ ಪೊಲೀಸರು ವಿಚಾರಣೆ ವೇಳೆ ಸುಪಾರಿ ಬಗ್ಗೆ ಮೊದಲು ಪ್ರಶ್ನೆ ಕೇಳದೆ ಗೌರಿ ಹತ್ಯೆಗೆ ಸಂಬಂಧಿಸಿದಂತೆ ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೆಗ್ಗರವಳ್ಳಿ ಸುಪಾರಿ ಪ್ರಕರಣ ಬಿಟ್ಟು ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಸಿಸಿಬಿ ಪೊಲೀಸರು ಪ್ರಶ್ನೆ ಕೇಳಿದ್ದಾರೆ ಎನ್ನಲಾಗಿದೆ. ನಿಮಗೂ ಗೌರಿ ಲಂಕೇಶ್ಗೂ ಸಂಪರ್ಕ ಇತ್ತೇ? ಅದು ಯಾವ ರೀತಿಯ ಸಂಪರ್ಕ? ನಿಮ್ಮಿಬ್ಬರ ನಡುವೆ ಯಾವುದಾದರೂ ವಿಚಾರದಲ್ಲಿ ವೈಮನಸ್ಸು, ಅಸಮಾಧಾನ ಇತ್ತಾ? ಗೌರಿ ಲಂಕೇಶ್ ಬಳಿ ಯಾವ ವಿಚಾರಕ್ಕಾದ್ರೂ ನೀವು ಜಗಳ ಆಡಿದ್ರಾ? ಎಂದು ಸಿಸಿಬಿ ಪೊಲೀಸರು ಕೇಳಿದ ಸರಣಿ ಪ್ರಶ್ನೆಗಳಿಗೆ ಮಧ್ಯರಾತ್ರಿ ರವಿ ಬೆಳಗೆರೆ ಬೆಚ್ಚಿಬಿದ್ದಿದ್ದಾರೆ.
Advertisement
ರವಿ ಬೆಳಗೆರೆ ಜೊತೆಗಿನ ಗುದ್ದಾಟದ ಬಳಿಕ ಸುನೀಲ್ ಹೆಗ್ಗರವಳ್ಳಿಗೆ ಗೌರಿ ಲಂಕೇಶ್ ಆಶ್ರಯ ನೀಡಿದ್ದರು. ರವಿ ಎರಡನೇ ಪತ್ನಿ ಯಶೋಮತಿ ಜೊತೆಯೂ ಗೌರಿ ಲಂಕೇಶ್ ನಿಕಟ ಸಂಪರ್ಕ ಹೊಂದಿದ್ದರು. ಈ ವಿಚಾರ ತಿಳಿದು ರವಿ ಬೆಳಗೆರೆ ಗೌರಿ ಬಗ್ಗೆ ಸಿಟ್ಟಾಗಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಗೌರಿ ಹತ್ಯೆ ಬಗ್ಗೆ ರವಿ ಬೆಳಗೆರೆಯನ್ನು ಸಿಸಿಬಿ ಪೊಲೀಸರು ಪ್ರಶ್ನಿಸಿದ್ದು, ಹಲವು ದೃಷ್ಟಿಕೋನಗಳಲ್ಲಿ ರವಿ ಬೆಳಗೆರೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
Advertisement
https://www.youtube.com/watch?v=tvAkOpM6ZZo
Advertisement
https://www.youtube.com/watch?v=86k-IW3-boE
Advertisement
https://www.youtube.com/watch?v=kJ5uYUEgVeM
https://www.youtube.com/watch?v=bwXnj2XMWag