ಬಾಲಿವುಡ್ ಬೆಡಗಿ ರವೀನಾ ಟಂಡನ್ (Raveena Tandon) ಸದ್ಯ ಶೂಟಿಂಗ್‌ಗೆ ಬ್ರೇಕ್ ಹಾಕಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಪುತ್ರಿ ರಾಶಾ (Rasha) ಜೊತೆ ರವೀನಾ ಮಹಾರಾಷ್ಟ್ರದ (Maharashtra temple) ಗ್ರುಷ್ಣೇಶ್ವರ ಜ್ಯೋತಿರ್ಲಿಂಗ ಮಂದಿರ ಮತ್ತು ಶ್ರೀ ತ್ರಯಂಬಕೇಶ್ವರ ಶಿವ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ರವೀನಾ ಪುತ್ರಿ ರಾಶಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡೋಕೆ ಸಕಲ ತಯಾರಿ ನಡೆಯುತ್ತಿದೆ. ಒಂದಷ್ಟು ಸಿನಿಮಾ ಕಥೆಗಳ ಮಾತುಕತೆ ಕೂಡ ಆಗಿದೆ. ಸದ್ಯದಲ್ಲೇ ಅಧಿಕೃತ ಮಾಹಿತಿ ಹೋರಬೀಳಲಿದೆ. ಇದನ್ನೂ ಓದಿ:ತೆಲುಗು ನಟ ನಾನಿ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್
ಅಂದಹಾಗೆ, ರವೀನಾ ಟಂಡನ್ (Raveena Tandon) ನಟನೆಯ ‘ಪಾಟ್ನಾ ಶುಕ್ಲಾ’ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಕೆಜಿಎಫ್- 3 ಸೇರಿದಂತೆ ಹಲವು ಸಿನಿಮಾಗಳು ಅವರ ಕೈಯಲ್ಲಿವೆ.


