ಮುಂಬೈ: ಬಾಲಿವುಡ್ ಮಸ್ತ್ ಗರ್ಲ್ ಖ್ಯಾತಿಯ ನಟಿ ರವೀನಾ ಟಂಡನ್, ಸರಿಯಾದ ಸಮಯಕ್ಕೆ ಕಾರ್ ಸಿಗದಿದ್ದಕ್ಕೆ ಆಟೋದಲ್ಲಿ ಮದುವೆ ಮನೆ ತಲುಪಿದ್ದಾರೆ.
ಮದುವೆ ಸೀಸನ್ ಆರಂಭಗೊಂಡಿದ್ದು, ಸೆಲೆಬ್ರಿಟಿಗಳು ತಮ್ಮ ಆಪ್ತರ ವಿವಾಹ ಕಾರ್ಯಕ್ರಮಗಳಿಗೆ ತೆರಳುತ್ತಾರೆ. ಮದುವೆ ಸೀಸನ್ ಆಗಿದ್ದರಿಂದ ಮೊದಲೇ ವಾಹನಗಳನ್ನು ಬುಕ್ ಮಾಡಿಕೊಳ್ಳಬೇಕು. ಇಲ್ಲವಾದ್ರೆ ಕೊನೆ ಕ್ಷಣದಲ್ಲಿ ತೊಂದರೆ ಆಗುತ್ತದೆ. ಇಂತಹ ಸಮಸ್ಯೆಯಲ್ಲಿಯೇ ಬಾಲಿವುಡ್ ನಟಿ ರವೀನಾ ಟಂಡನ್ ಸಿಲುಕಿದ್ದರು. ಕೊನೆಗೆ ಕಾರ್ ಸಿಗದಿದ್ದರಿಂದ ಮಗಳ ಜೊತೆ ಆಟೋ ಹತ್ತಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
Advertisement
https://www.instagram.com/p/B9KBWFJHyrs/
Advertisement
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿಕೊಂಡಿರುವ ರವೀನಾ, ನಾನು ಬೇಗನೇ ಸಿಕ್ಕ ಆಟೋದಲ್ಲಿ ಕುಳಿತುಕೊಂಡೆ. ಕಾರ್ ಗಾಗಿ ಕಾಯುವ ಸಮಯ ನನ್ನ ಬಳಿ ಇರಲಿಲ್ಲ. ನನ್ನ ಸಂಬಂಧಿ ಮೆಹಂದಿ ಕಾರ್ಯಕ್ರಮಕ್ಕೆ ತಡವಾಗುತ್ತಿತ್ತು. ಬಹುತೇಕರು ತಲುಪಿದ್ದರಿಂದ ಆಟೋದಲ್ಲಿ ಪ್ರಯಾಣ ಬೆಳೆಸಿದೆ. ಮುಂಬೈ ಆಟೋವಾಲಾಗಳು ಯಾವ ಆಪ್ತ ಬಾಂಧವರಿಗಿಂತ ಕಡಿಮೆ ಏನಿಲ್ಲ ಎಂದು ಬರೆದುಕೊಂಡಿದ್ದಾರೆ.
Advertisement
https://www.instagram.com/p/B9KDp_-nRPY/
Advertisement
ಇನ್ನೊಂದು ವಿಡಿಯೋದಲ್ಲಿ ಹಿರಿಯ ಆಟೋ ಚಾಲಕ, ರವೀನಾರಿಗೆ ನಾನು ನಿಮ್ಮ ಹಲವು ಸಿನಿಮಾಗಳನ್ನು ನೋಡಿದ್ದೇನೆ. ಸದ್ಯ ಸಿನಿಮಾಗಳ ಹೆಸರು ನೆನಪಿಗೆ ಬರುತ್ತಿಲ್ಲ. ಶಾರೂಖ್ ಖಾನ್, ಸಂಜಯ್ ದತ್ ಜೊತೆ ನಟಿಸಿರುವ ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ರವೀನಾ ಟಂಡನ್, ನಿಮ್ಮನ್ನು ಭೇಟಿಯಾಗಿದ್ದು ಖುಷಿಯಾಯ್ತು. ಇನ್ನೊಮ್ಮೆ ಸಿಗೋಣ ಎಂದು ಹೇಳಿ ಹೊರಟಿದ್ದಾರೆ.
https://www.instagram.com/p/B9M40MFHpJS/
ಮತ್ತೊಂದು ಪೋಸ್ಟ್ ನಲ್ಲಿ ಮದುವೆ ಕಾರ್ಯಕ್ರಮ ಮತ್ತು ಪತಿ ಅನಿಲ್ ಟಡಾನಿ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಾರ್ ಗಾಗಿ ಕಾಯದೇ ಸಾಮಾನ್ಯರಂತೆ ಆಟೋದಲ್ಲಿ ಪ್ರಯಾಣ ಬೆಳೆಸಿ ರವೀನಾ ಟಂಡನ್ ಸರಿಯಾದ ಸಮಯಕ್ಕೆ ಮೆಹಂದಿ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ.
https://www.instagram.com/p/B9L_ABdnTMA/