ಬಾಲಿವುಡ್‌ನ (Bollywood) 90ರ ದಶಕದಲ್ಲಿ ತೆರೆಮೇಲೆ ಅಕ್ಷಯ್ ಕುಮಾರ್- ರವೀನಾ ಟಂಡನ್ (Raveena Tandon) ಜೋಡಿ ಕಮಾಲ್ ಮಾಡಿದ್ದರು. ತೆರೆಯ ಮೇಲೆ ಮಾತ್ರವಲ್ಲ ತೆರೆ ಹಿಂದೆ ಕೂಡ ಇಬ್ಬರೂ ಪ್ರೀತಿಸುತ್ತಿದ್ದರು. ಇಬ್ಬರ ಲವ್ವಿ-ಡವ್ವಿ ಮದುವೆ ಹಂತದವೆರೆಗೂ ಬಂದು ಮುರಿದು ಬಿದ್ದಿತ್ತು. ಇದೀಗ ಈ ಬಗ್ಗೆ `ಕೆಜಿಎಫ್ 2′ (KGF 2) ನಟಿ ರವೀನಾ ಮೌನ ಮುರಿದ್ದಾರೆ.
1994ರಲ್ಲಿ `ಮೊಹ್ರಾ’ ಎಂಬ ಸಿನಿಮಾದಲ್ಲಿ ಅಕ್ಷಯ್ ಕುಮಾರ್ (Akshay Kumar) ಮತ್ತು ರವೀನಾ ಜೋಡಿಯಾಗಿ ನಟಿಸಿದ್ದರು. ಚಿತ್ರದಲ್ಲಿ `ಟಿಪ್ ಟಿಪ್ ಬರ್ಸಾ ಪಾನಿ’ ಹಾಡು ಅಂದು ಪಡ್ಡೆಹುಡುಗರ ನಿದ್ದೆಗೆಡಿಸಿತ್ತು. ಈ ಜೋಡಿಯ ಕೆಮಿಸ್ಟ್ರಿಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದರು. ಇಬ್ಬರಿಗೂ ಒಂದೊಳ್ಳೆ ಜನಪ್ರಿಯತೆ ಕೂಡ ಈ ಸಿನಿಮಾ ತಂದುಕೊಟ್ಟಿತ್ತು. ತೆರೆಹಿಂದೆ ಸತಿ-ಪತಿಗಳಾಗಿ ಹೊಸ ಬಾಳಿಗೆ ಕಾಲಿಡಲು ಎಲ್ಲಾ ತಯಾರಿಯಾಗಿತ್ತು. ಹಲವು ಡೇಟಿಂಗ್‌ಗೆ ಮದುವೆಯೆಂಬ ಮುದ್ರೆ ಒತ್ತಲು ರೆಡಿಯಾಗಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದ ಈ ಸಂಬಂಧಕ್ಕೆ ಬ್ರೇಕ್ ಬಿದ್ದಿತ್ತು.
ಈಗ ಅಕ್ಷಯ್ ಜೊತೆಗಿನ ನಿಶ್ಚಿತಾರ್ಥ ಬ್ರೇಕಪ್ (Breakup) ಈ ಬಗ್ಗೆ ರವೀನಾ ಮಾತನಾಡಿದ್ದಾರೆ. ಎಲ್ಲರೂ ಮುಂದೆ ಸಾಗಿದ್ದಾರೆ ಆದರೆ ಜನರು ಮಾತ್ರ ಇನ್ನೂ ಮುರಿದ ನಿಶ್ಚಿತಾರ್ಥದ (Engagement) ಬಗ್ಗೆಯೇ ಯಾಕೆ ಮಾತನಾಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಆ ಸಮಯದಲ್ಲಿ ಬ್ರೇಕಪ್‌ನಿಂದ ಹೊರಬರಲು ತನಗೆ ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ. ಒಮ್ಮೆ ನಾನು ಅವರ ಜೀವನದಿಂದ ಹೊರಬಂದ ಬಳಿಕ ಮತ್ತೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದೆ. ಅವರು ಕೂಡ ಆಗಲೇ ಬೇರೆ ಯುವತಿ ಜೊತೆ ಡೇಟಿಂಗ್ ಮಾಡುತ್ತಿದ್ದರು. ಹಾಗಿದ್ದ ಮೇಲೆ ಅಸೂಯೆ ಎಲ್ಲಿಂದ ಬರುತ್ತೆ ಎಂದು ರವೀನಾ ಮಾತನಾಡಿದ್ದಾರೆ. ಇದನ್ನೂ ಓದಿ: ಹೊಸ ಕಥೆ ಇದ್ದರೆ ಜನ ಒಪ್ಪಿಕೊಳ್ತಾರೆ, `ಕಾಂತಾರ’ ಸಕ್ಸಸ್ ಬಗ್ಗೆ ಕಿಚ್ಚನ ಮಾತು
ನಾವು `ಮೊಹ್ರಾ’ ಸಮಯದಲ್ಲಿ ಹಿಟ್ ಪೇರ್ ಆಗಿದ್ದೆವು. ಈಗಲೂ ನಾವು ಭೇಟಿಯಾಗುತ್ತೇವೆ. ಮಾತನಾಡುತ್ತೇವೆ. ನಾವು ಮುಂದೆ ಸಾಗಿದ್ದೇವೆ. ಅನೇಕರು ವಿಚ್ಛೇದನ ಪಡೆದಿದ್ದಾರೆ ಅವರೂ ಮೂವ್ ಆನ್ ಆಗಿದ್ದಾರೆ. ಅದೇನು ದೊಡ್ಡ ವಿಷಯವಲ್ಲ ಎಂದು ಹೇಳಿದ್ದಾರೆ.
ಇನ್ನೂ ಅಕ್ಷಯ್ ಕುಮಾರ್ (Akshay Kumar) ಅವರು ಟ್ವಿಂಕಲ್ ಖನ್ನಾ (Twinkle Khanna) ಜೊತೆ ವೈವಾಹಿಕ ಬದುಕಿನಲ್ಲಿ ಖುಷಿಯಾಗಿದ್ದಾರೆ. ಇಬ್ಬರೂ ಮಕ್ಕಳು ಕೂಡ ಇದ್ದಾರೆ. ನಟಿ ರವೀನಾ ಅವರು ಉದ್ಯಮಿ ಅನಿಲ್ ಥಡಾನಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ. ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k