ಬೆಂಗಳೂರು: ನಗರದ ಹೊರವಲಯದಲ್ಲಿ ನಡೆದಿರುವ ರೇವ್ ಪಾರ್ಟಿ (Rave Party) ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಹೆಬ್ಬಗೋಡಿ ಪೆÇಲೀಸ್ ಠಾಣೆ ಸಿಬ್ಬಂದಿಗೆ ತಲೆ ತಂಡ ಫಿಕ್ಸ್ ಆಗಿದೆ. ಹೆಬ್ಬಗೋಡಿ ಠಾಣೆಯ (Hebbagodi Police Station) ಮೂವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಇಬ್ಬರು ಕಾನ್ಸ್ ಟೇಬಲ್ ಹಾಗೂ ಓರ್ವ ಎಎಸ್‍ಐ ಸೇರಿ ಮೂವರನ್ನು ಸಂಸ್ಪೆಂಡ್ ಮಾಡಲಾಗಿದೆ. ರೇವ್ ಪಾರ್ಟಿ ಬಗ್ಗೆ ಮಾಹಿತಿ ಕಲೆ ಹಾಕಲು ವಿಫಲವಾಗಿರೋ ಆರೋಪದ ಮೇಲೆ ಎಎಸ್‍ಐ ನಾರಾಯಣಸ್ವಾಮಿ, ಬೀಟ್ ಪೊಲೀಸ್ ದೇವರಾಜ್ ಹಾಗೂ ಎಸ್‍ಐ ಗಿರೀಶ್ ಅಮಾನತಾಗಿದ್ದಾರೆ. ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಈ ಆದೇಶ ಹೊರಡಿಸಿದ್ದಾರೆ.
ರೇವ್ ಪಾರ್ಟಿ ಪ್ರಕರಣ: ನಗರದ ಹೊರವಲಯದಲ್ಲಿ ಬರ್ತ್‍ಡೇ ಪಾರ್ಟಿ ಹೆಸರಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಆದರೆ ಈ ಪಾರ್ಟಿ ಒಂದು ದಿನದ್ದಲ್ಲ, ಮೂರು ದಿನಗಳದ್ದು ಅನ್ನೋದು ತಡವಾಗಿ ಬೆಳಕಿಗೆ ಬಂದಿದೆ. ಶುಕ್ರವಾರ ಸಂಜೆಯಿಂದ ಆರಂಭವಾದ ಪಾರ್ಟಿ ಸೋಮವಾರ ಬೆಳಗ್ಗೆ ತನಕ ಫಿಕ್ಸ್ ಆಗಿತ್ತು. ಶುಕ್ರವಾರ, ಶನಿವಾರ ಬಿಂದಾಸ್ ಆಗಿ ಪಾರ್ಟಿ ಮಾಡಿದ್ದವರು, ಭಾನುವಾರ ರಾತ್ರಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತನಿಖೆ ವೇಳೆ 3 ದಿನ ಆಯೋಜಿಸಿದ್ದ ರೇವ್ ಪಾರ್ಟಿ ಅನ್ನೋ ರಹಸ್ಯ ಹೊರಬಿದ್ದಿದೆ.
ಶ್ರೀಮಂತರ ರೇವ್ ಪಾರ್ಟಿಯಲ್ಲಿ ಸೆಲೆಬ್ರಿಟಿಗಳು, ಟೆಕ್ಕಿಗಳು, ಹಣವಂತರೆಲ್ಲ ಭಾಗಿಯಾಗಿರೋದು ಕೂಡ ಬೆಳಕಿಗೆ ಬಂದಿದೆ. ರೇವ್ ಪಾರ್ಟಿ ಮಾಡಿದ್ದವರ ವಿರುದ್ಧ ಎಫ್ ಐಆರ್ ಮಾಡಿಕೊಂಡು ಈಗಾಗ್ಲೇ ಐದು ಮಂದಿಯನ್ನ ಅರೆಸ್ಟ್ ಮಾಡಿ, ಜೈಲಿಗೆ ಕಳಿಸಿದ್ದಾರೆ. ಜೈಲಿನಲ್ಲಿರೋ , ವಾಸು, ಅರುಣ್ ಕುಮಾರ್, ನಾಗಬಾಬ, ಗೋಪಾಲ್ ರೆಡ್ಡಿ ಸೇರಿ 6 ಮಂದಿಯನ್ನ ಸಿಸಿಬಿ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ಒಳಪಡಿಸಿದ್ದಾರೆ. ತನಿಖೆಯಿಂದ ರೇವ್ ಪಾರ್ಟಿ ರಹಸ್ಯ ಮತ್ತಷ್ಟು ಬಯಲಾಗುವ ಸಾದ್ಯತೆಗಳು ಹೆಚ್ಚಾಗಿವೆ.