– ಪೊಲೀಸ್ ದಾಳಿಗೆ ಹೆದರಿ ಕಾಡಿನಲ್ಲೇ ಅವಿತ 30ಕ್ಕೂ ಹೆಚ್ಚು ಜನ
– ಬಂಧಿತರಿಗೆ ಮೆಡಿಕಲ್, ಹೇರ್ ಫಾಲಿಕಲ್ ಟೆಸ್ಟ್
ಬೆಂಗಳೂರು: ಸಿಲಿಕಾನ್ ಸಿಟಿ ಹೊರವಲಯದ ಆನೇಕಲ್ ಬಳಿ ನಡೆದ ರೇವ್ ಪಾರ್ಟಿ ಬಗ್ಗೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಈಗಗಲೇ ಇಬ್ಬರನ್ನು ಬಂಧಿಸಿದ್ದಾರೆ. 30 ಜನರನ್ನು ವಶಕ್ಕೆ ಪಡೆದಿದ್ದಾರೆ. ಇವರೆಲ್ಲರೂ ರೆಸಾರ್ಟ್ ಪಕ್ಕದ ಕಾಡಿನಲ್ಲೇ ಉಳಿದುಕೊಂಡಿದ್ದರು. ಇದರಲ್ಲಿ ಬಹುತೇಕರು ಕೇರಳ ಮೂಲದವರು. ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರು ಎಂದು ತಿಳಿದು ಬಂದಿದೆ.
Advertisement
30ಕ್ಕೂ ಹೆಚ್ಚು ಜನ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಪೊಲೀಸರು ದಾಳಿ ರೇಡ್ ಮಾಡುತ್ತಿದ್ದಂತೆ ಬಹುತೇಕ ಜನ ತಪ್ಪಿಸಿಕೊಂಡಿದ್ದಾರೆ. ರೇಡ್ ವೇಳೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಶಕ್ಕೆ ಪಡೆದ 30 ಜನರಿಗೆ ಮೆಡಿಕಲ್ ಟೆಸ್ಟ್ ಮಾಡಿಸಲಾಗುತ್ತಿದೆ. ಬ್ಲಡ್, ಯೂರಿನ್ ಹಾಗೂ ಹೇರ್ ಫಾಲಿಕಲ್ ಟೆಸ್ಟ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ರೇವ್ ಪಾರ್ಟಿ- ಅರೆನಗ್ನ ಸ್ಥಿತಿಯಲ್ಲಿ ಯುವತಿಯರ ಡ್ಯಾನ್ಸ್
Advertisement
ಹಿಮಾಚಲ ಪ್ರದೇಶ ಮೂಲದ ಉಗ್ರ ಆ್ಯಪ್ ಕ್ರಿಯೇಟ್ ಮಾಡಿ ಬುಕ್ ಮಾಡಿಸಿಕೊಳ್ಳುತ್ತಿದ್ದ. ಬೆಂಗಳೂರಿನ ಅಭಿಲಾಷ್ ಎಂಬಾತ ಪಾರ್ಟಿ ಆಯೋಜನೆ ಮಾಡುತ್ತಿದ್ದ. ಹೈ.ಏಪ್ ಡಾಟ್ ಕಾಮ್ ಆ್ಯಪ್ ಮೂಲಕ ಬುಕ್ ಮಾಡಿ, ಯುವಕ, ಯುವತಿಯರು ಬಂದಿದ್ದರು. ಅಲ್ಲದೆ ಐಸಿಕೆ ಲುಕ್ ಎನ್ನುವ ಆ್ಯಪ್ ಬಳಸಿ ಮಾಡೆಲ್ ಹಾಗೂ ಡಿಜೆಗಳನ್ನು ಬುಕ್ ಮಾಡಲಾಗುತ್ತಿತ್ತು.
Advertisement
Advertisement
ಅದೇ ರೀತಿ ನಿನ್ನೆ ರಾತ್ರಿ 8 ಗಂಟೆಗೆ ಪಾರ್ಟಿ ಪ್ರಾರಂಭವಾಗಿತ್ತು. ಆಯೋಜಕ ತಡರಾತ್ರಿ ಡಿಜೆ ಪ್ರಾರಂಭಮಾಡಿದ್ದ. ಈ ಪಾರ್ಟಿಗೆ ಗೋವಾ ಮೂಲದ ಡಿಜೆ ಬರಬೇಕಿತ್ತು. ತಡರಾತ್ರಿ ಪಾರ್ಟಿಗೆ ಬರಲು ಮಾತುಕತೆ ನಡೆದಿತ್ತು. ಕೊನೆ ಹಂತದಲ್ಲಿ ಆಯೋಜಕರಿಗೆ ಹಾಗೂ ಮಹಿಳೆಗೆ ಕಿರಿಕ್ ಆಗಿತ್ತು ಎನ್ನುವ ಮಾಹಿತಿ ಇದೆ. ಜಂಗಲ್ ಕ್ವೀನ್ ಎಂಬ ಮಾಡೆಲ್ ಪಾರ್ಟಿಗೆ ಬರಬೇಕಿತ್ತು. ಕೊನೆಗೆ ಈಕೆಯೇ ಪಾರ್ಟಿ ನಡೆಯುತ್ತಿರುವುದನ್ನು ಲೀಕ್ ಮಾಡಿರುವ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಕಾರು ಪಲ್ಟಿ – ಪಾರ್ಟಿಯಿಂದ ಬರುವಾಗ ಅಪಘಾತ?
ಈ ಆಪ್ ಮೂಲಕ ಬುಕ್ ಮಾಡಿ ಪಾರ್ಟಿಗೆ ಬಂದಿದ್ದರು. ನಿಷೇಧಿತ ಪ್ರದೇಶದಲ್ಲಿ ಪಾರ್ಟಿ ನಡೆಯುತ್ತಿತ್ತು. ವೀಕೆಂಡ್ ಮಸ್ತಿಗೆ ಈ ಪ್ರದೇಶ ಹೇಳಿಮಾಡಿಸಿದಂತಿತ್ತು. ಕಾಡಿನ ಮಧ್ಯದಲ್ಲಿ ರೇವ್ ಪಾರ್ಟಿ ನಡೆಯುತ್ತಿತ್ತು. ಕಾಡಿನ ಮಧ್ಯದಲ್ಲಿ ಸುತ್ತಮುತ್ತ ಬಿದಿರು ಬೆಳೆದಿದ್ದು, ರೆಸಾರ್ಟ್ ಸುತ್ತಮುತ್ತ ಯಾರು ಬಂದರು ಗೊತ್ತಾಗಲ್ಲ. ಕಳೆದ ರಾತ್ರಿ ಸಹ ಬಿದಿರಿನ ಮಧ್ಯದಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು.
ಪಾರ್ಟಿ ಆಯೋಜನೆ ಮಾಡಿದ ಜಾಗದಲ್ಲಿ ಮದ್ಯದ ಬಾಟಲಿಗಳು, ಬಟ್ಟೆಗಳು ಪತ್ತೆಯಾಗಿವೆ. ರೆಸಾರ್ಟ್ ಗೆ ಯಾವುದೇ ಅನುಮತಿ ಇರಲಿಲ್ಲ. ಇಂತಹ ಜಾಗದಲ್ಲಿ ಹಸಿರು ವ್ಯಾಲಿ ಮಾಲೀಕ ಪಾರ್ಟಿಗೆ ಅವಕಾಶ ನೀಡಿದ್ದ. ಪಾರ್ಟಿ ಆಯೋಜನೆ ಮಾಡಲು ಹಿಮಾಚಲ ಪ್ರದೇಶ ಮೂಲದ ಉಗ್ರ ಎಂಬಾತನಿಗೆ ನೇತೃತ್ವ ನೀಡಲಾಗಿತ್ತು. ಪಾರ್ಟಿಗೆ ಬಂದಿದ್ದವರು ಬಹುತೇಕ ಕೇರಳ ಹಾಗೂ ಕರ್ನಾಟಕ ಮೂಲದವರು. ನಿಷೇಧಿತ ಪ್ರದೇಶ ಬನ್ನೇರುಘಟ್ಟ ಕಾಡಂಚಿನಲ್ಲಿ ಭರ್ಜರಿ ಪಾರ್ಟಿ ಮಾಡಲಾಗಿದೆ. ಪೊಲೀಸರು ರೈಡ್ ಮಾಡುವಾಗ ಡಿಜೆ ಹಾಕಿ ಕುಣಿದು ಕುಪ್ಪಳಿಸುತ್ತಿದ್ದರು. ಪಾರ್ಟಿಯಲ್ಲಿ ಭಾಗಿಯಾಗಿದ್ದ ಯುವಕ, ಯುವತಿಯರು, ವಾಹನಗಳು, ಡಿಜೆಗೆ ಬಳಸಿದ್ದ ಸೌಂಡ್ ಸಿಸ್ಟಮ್ ವಶಕ್ಕೆ ಪಡೆಯಲಾಗಿದೆ. ಮೂವತ್ತಕ್ಕೂ ಹೆಚ್ಚು ಯುವಕ, ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ.
ರಾತ್ರಿ ಪೊಲೀಸರು ದಾಳಿ ಮಾಡಿದ ವೇಳೆ ತಪ್ಪಿಸಿಕೊಂಡು ರೆಸಾರ್ಟ್ ಪಕ್ಕದ ಕಾಡಿನಲ್ಲೇ 30ಕ್ಕೂ ಹೆಚ್ಚು ಜನ ಉಳಿದಿದ್ದರು. ಆನೇಕಲ್ ಪೊಲೀಸರು ಬೆಳಗ್ಗೆ ಕಾರ್ಯಾಚರಣೆಗಿಳಿದಾಗ ಯುವಕರು ಗುಡ್ಡ ಹಾಗೂ ಕಾಡಿನಲ್ಲಿ ನಡೆದು ಬರುತ್ತಿದ್ದರು. ಬಹುತೇಕ ಯುವಕರು ಬೆಂಗಳೂರಿನ ಖಾಸಗಿ ಕಂಪನಿ ಹಾಗೂ ಕಾಲೇಜು ವಿದ್ಯಾರ್ಥಿಗಳು ಎಂಬ ಮಾಹಿತಿ ಲಭ್ಯವಾಗಿದೆ.