ಉಡುಪಿ: ವಿದ್ಯಾರ್ಥಿಗಳಲ್ಲಿ (Students) ಜ್ಞಾನದ ಜೊತೆ ಬುದ್ಧಿವಂತಿಕೆಯೂ ಅಗತ್ಯ. ರಾಮನಿಗಿಂತ (Rama) ರಾವಣ (Ravana) ಜ್ಞಾನಿಯಾಗಿದ್ದ. ವಿವೇಕ ಇರುವುದರಿಂದ ಜನ ರಾಮನನ್ನು ಪೂಜಿಸುತ್ತಾರೆ. ಸಂಸ್ಕೃತಿ ಮತ್ತು ಸಂಪ್ರದಾಯ ಇಲ್ಲದ ನಾಗರಿಕ ಜೀವನಕ್ಕೆ ಅರ್ಥ ಇಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಮಣಿಪಾಲ (Manipal) ವಿವಿಯ ವಿದ್ಯಾರ್ಥಿಗಳಿಗೆ ಪಾಠ ಮಾಡಿದರು.
Advertisement
ನೀವು ಜ್ಞಾನವಂತರಾದರೆ ಸಾಲದು. ನಿಮ್ಮಲ್ಲಿ ಸಂಸ್ಕೃತಿ ಜೊತೆ ಬುದ್ಧಿವಂತಿಕೆ ಇರಬೇಕು ಎಂದು ರಾಜಕೀಯ ಜೀವನ ಆರಂಭಕ್ಕೂ ಮೊದಲು ಉತ್ತರಪ್ರದೇಶದಲ್ಲಿ ಉಪನ್ಯಾಸಕ ವೃತ್ತಿ ಮಾಡಿದ್ದ ರಾಜನಾಥ್ ಸಿಂಗ್ ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನು ಹೇಳಿದರು. ಇದನ್ನೂ ಓದಿ: ಆ ಕಾಲ ಹೋಯ್ತು.. ಭಾರತದ ತಂಟೆಗೆ ಬಂದ್ರೆ ಮುಖಮೂತಿ ನೋಡಲ್ಲ – ರಾಜನಾಥ್ ಸಿಂಗ್ ಎಚ್ಚರಿಕೆ
Advertisement
Advertisement
ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತದ ಹಲವಾರು ವರ್ಷಗಳಿಂದ ಸಾಧನೆ ಮಾಡಿಕೊಂಡು ಬಂದಿದೆ. ಈ ಬಗೆಗಿನ ನಮ್ಮ ಅಭಿಮಾನವನ್ನು ಕೆಲವರು ಹೆಚ್ಚುಗಾರಿಕೆ ಎಂದು ಟೀಕಿಸುತ್ತಾರೆ. ಇತಿಹಾಸವನ್ನು ತಿಳಿದುಕೊಳ್ಳದ ವ್ಯಕ್ತಿಗಳು ಇಂತಹ ಟೀಕೆಗಳನ್ನು ಮಾಡುತ್ತಾರೆ. ಭಾರತೀಯರು ಕೊಟ್ಟ ಶೂನ್ಯ ಇರದ ಗಣಿತವನ್ನು ಊಹಿಸಲು ಸಾಧ್ಯವಿಲ್ಲ. ಪೈಥಾಗೊರಸ್‌ನ ಪ್ರಮೇಯವನ್ನು ಬೋಧಾಯನ ಋಷಿ 300 ವರ್ಷಗಳ ಹಿಂದೆಯೇ ಹೇಳಿದ್ದರು. ಭಾರತದ ಆರ್ಥಿಕ ಸದೃಢತೆ ಗುಣಮಟ್ಟದ ಮಾನವ ಸಂಪನ್ಮೂಲಗಳಲ್ಲಿ ಇದೆ ಎಂದರು. ಇದನ್ನೂ ಓದಿ: ದತ್ತಪೀಠಕ್ಕೆ ಆಡಳಿತ ಮಂಡಳಿ ನೇಮಕ – ಹಿಂದೂಗಳ 5 ದಶಕಗಳ ಹೋರಾಟಕ್ಕೆ ಜಯ ಎಂದ ಸಿಟಿ ರವಿ