ರಾಯ್ಪುರ: ದಸರಾ (Dasara) ಆಚರಣೆಯ ವೇಳೆ ರಾವಣನ (Ravan) ಪ್ರತಿಕೃತಿ ಸುಟ್ಟಾಗ ಅದರ 10 ತಲೆಗಳು ಸುಡದೇ ಹೋಗಿದ್ದಕ್ಕೆ ಛತ್ತೀಸ್‌ಗಢದ (Chhattisgarh) ಧಮ್ತಾರಿ (Dhamtari) ನಾಗರಿಕ ಸಂಸ್ಥೆಯ ನೌಕರನನ್ನು ಅಮಾನತುಗೊಳಿಸಿ, ನಾಲ್ವರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಿರುವ ಘಟನೆ ವರದಿಯಾಗಿದೆ.
ಅಕ್ಟೋಬರ್ 5 ರಂದು ಧಮ್ತಾರಿಯ ರಾಮಲೀಲಾ ಮೈದಾನದಲ್ಲಿ ನಡೆದ ರಾವಣನ ಪ್ರತಿಕೃತಿ ದಹನ ಕಾರ್ಯಕ್ರಮದಲ್ಲಿ ರಾವಣನ ಮುಂಡ ಮಾತ್ರವೇ ಸುಟ್ಟು ಹೋಗಿದ್ದು, ತಲೆಗಳು ಸುಡದೇ ಹಾಗೇ ಉಳಿದು ಹೋಗಿತ್ತು.
Advertisement
Advertisement
ಈ ಕಾರ್ಯಕ್ರಮವನ್ನು ಸ್ಥಳೀಯ ನಾಗರಿಕ ಸಂಸ್ಥೆ ಆಯೋಜಿಸಿತ್ತು. ರಾವಣನ ಮೂರ್ತಿ ತಯಾರಿಕೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಧಮ್ತಾರಿ ಮುನ್ಸಿಪಲ್ ಕಾರ್ಪೊರೇಷನ್ (ಡಿಎಂಸಿ) ಗುಮಾಸ್ತ ರಾಜೇಂದ್ರ ಯಾದವ್ ಅವರನ್ನು ಅಮಾನತುಗೊಳಿಸಿದೆ. ಇದನ್ನೂ ಓದಿ: ನನಗೆ ವೋಟು ಹಾಕಬೇಡಿ – ರಸ್ತೆ ದುರಸ್ತಿ ಬಗ್ಗೆ ಮಾತನಾಡಲು ಹೋದ ಗ್ರಾಮಸ್ಥರಿಗೆ ಅಪ್ಪಚ್ಚು ರಂಜನ್ ತಿರುಗೇಟು
Advertisement
ರಾವಣನ ಪ್ರತಿಕೃತಿ ನಿರ್ಮಾಣದಲ್ಲಿ ಪಾತ್ರವಹಿಸಿದ್ದ ಸಹಾಯಕ ಎಂಜಿನಿಯರ್ ವಿಜಯ್ ಮೆಹ್ರಾ, ಉಪ ಎಂಜಿನಿಯರ್‌ಗಳಾದ ಲೋಮಸ್ ದೇವಾಂಗನ್, ಕಮಲೇಶ್ ಠಾಕೂರ್ ಹಾಗೂ ಕಮತಾ ನಾಗೇಂದ್ರ ಅವರಿಗೆ ಡಿಎಂಸಿ ಶೋಕಾಸ್ ನೋಟೀಸ್ ನೀಡಿದೆ.
Advertisement
ದಸರಾ ಅಥವಾ ವಿಜದಶಮಿಯಂದು (Vijayadashami) ವಾರ್ಷಿಕ ದುರ್ಗಾ ಪೂಜೆಯ ಉತ್ಸವದ ಕೊನೆಯಲ್ಲಿ ರಾವಣನ ಪ್ರತಿಕೃತಿಯನ್ನು ಸುಡಲಾಗುತ್ತದೆ. ದುಷ್ಟರ ವಿರುದ್ಧ ವಿಜಯವನ್ನು ಸಂಕೇತಿಸಲು ರಾವಣನ ಪ್ರತಿಕೃತಿಯನ್ನು ಹಲವು ರಾಜ್ಯಗಳಲ್ಲಿ ಸುಡಲಾಗುತ್ತದೆ. ಇದನ್ನೂ ಓದಿ: ಕರಾವಳಿ ಜನರ ಇಚ್ಛೆಯಿಂದ ನನಗೆ ಆನಂದವಾಗಿದೆ: ಮುತಾಲಿಕ್