ರಾಯಚೂರು: ನ್ಯಾಯಬೆಲೆ ಅಂಗಡಿಗೆ (Nyaya Bele Angadi) ನುಗ್ಗಿ ತಮ್ಮ ಪಾಲಿನ ಅಕ್ಕಿಯನ್ನ ಜನರೇ ಕೊಂಡೊಯ್ದ ಘಟನೆ ಮಾನ್ವಿಯ (Manvi) ಹಿರೇಕೊಟ್ನೆಕಲ್‍ನಲ್ಲಿ ನಡೆದಿದೆ. ಅಂಗಡಿ ಮಾಲೀಕನ ಕಳ್ಳಾಟಕ್ಕೆ ಬೇಸತ್ತು ಜನ ಅಂಗಡಿಗೆ ನುಗ್ಗಿ ತಮ್ಮ ಪಾಲಿನ ಅಕ್ಕಿಯನ್ನು ತೆಗೆದುಕೊಂಡು ಹೋಗಿದ್ದಾರೆ.
ಗ್ರಾಮದಲ್ಲಿ 400 ಕುಟುಂಬಗಳಿದ್ದು ನ್ಯಾಯ ಬೆಲೆ ಅಂಗಡಿಯಲ್ಲಿ 200 ಕುಟುಂಬಕ್ಕೆ ಮಾತ್ರ ಅಕ್ಕಿ ನೀಡಲಾಗಿದೆ. ಕಳೆದ ಎರಡು ತಿಂಗಳಿನಿಂದ ಇದೇ ರೀತಿ ಅಕ್ಕಿ ನೀಡುವಾಗ ವ್ಯತ್ಯಾಸವಾಗುತ್ತಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ನ್ಯಾಯಬೆಲೆ ಅಂಗಡಿ ಮಾಲೀಕ ಚನ್ನಬಸವಗೌಡನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಒಳಗೆ ತುಂಬಿಟ್ಟಿದ್ದ ಚೀಲಗಳಿಂದ ತಾವೇ ಅಕ್ಕಿಯನ್ನು ತೆಗೆದುಕೊಂಡು ತೆರಳಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ – ಪ್ರಧಾನಿ ಮೋದಿ ತಯಾರಿ ಏನು?
ಕಡಿಮೆ ದಾಸ್ತಾನು ಬಂದಿದೆ ಎಂದು ಮಾಲೀಕ ಅಕ್ಕಿ ನೀಡುವಲ್ಲಿ ವ್ಯತ್ಯಾಸ ಮಾಡುತ್ತಿದ್ದ. ಅಲ್ಲದೇ ಕಾಳ ಸಂತೆಯಲ್ಲಿ ಅಕ್ಕಿ ಮಾರಾಟ ಮಾಡುತ್ತಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನ್ಯಾಯಬೆಲೆ ಅಂಗಡಿ ಮಾಲೀಕನ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅಪಘಾತವಾದ ಕಾರಿಗೆ ವಿದ್ಯುತ್ ಶಾಕ್ – ಸಹಾಯಕ್ಕೆ ಬಂದ ಇಬ್ಬರು ಸಾವು
Web Stories