ಬಳ್ಳಾರಿ : ಸಂಡೂರು ತಾಲೂಕಿನ ಯಶವಂತನಗರದ ಗುರು ಸಿದ್ದರಾಮೇಶ್ವರ ಮಹಾಶಿವಯೋಗಿಗಳ ರಥೋತ್ಸವ ಅದ್ಧೂರಿಯಾಗಿ ಸಂಭ್ರಮ ಸಡಗರದಿಂದ ಜರುಗಿತು.
Advertisement
ಯಶವಂತನಗರದ ಸಿದ್ದರಾಮೇಶ್ವರ ಮಠದ ಮಹಾರಥೋತ್ಸವ ಪ್ರತಿ ವರ್ಷ ಜ್ಯೇಷ್ಠ ಶುದ್ಧ ದಶಮಿಯಂದು ಅದ್ದೂರಿಯಾಗಿ ಜರುಗುತ್ತದೆ. ಮೈಸೂರು ಸಂಸ್ಥಾನ ಮಠಕ್ಕೆ ಸುತ್ತೂರ ಮಠ ಹೇಗೆ ಪರಂಪರೆಯಾಗಿದೆಯೋ ಯಶವಂತನಗರದ ಈ ಗುರುಸಿದ್ದರಾಮೇಶ್ವರ ಮಠ ಸಹ ಸಂಡೂರು ಮಹಾರಾಜರ ಪರಂಪರೆಯಾಗಿ ನಡೆದುಕೊಂಡು ಬಂದಿದೆ.
Advertisement
Advertisement
ಸಿದ್ದರಾಮೇಶ್ವರ ಮಠದ ಜಾತ್ರಾ ಮಹೋತ್ಸವದಲ್ಲಿ ನಾಡಿನ ಸಾವಿರಾರು ಭಕ್ತರು ಪಾಲ್ಗೊಂಡು ರಥವನ್ನು ಎಳೆದರು. ಈ ರಥೋತ್ಸವದಲ್ಲಿ ಜಾತಿ ಮತ ಮರೆತು ಎಲ್ಲ ಸಮಾಜದ ಬಾಂಧವರು ಒಂದಾಗಿ ಪಾಲ್ಗೊಳ್ಳುವುದು ಮತ್ತೊಂದು ವಿಶೇಷವಾಗಿದೆ.
Advertisement