ರಾಜ್ಯದಲ್ಲಿ ಡಿಸಿ, ಸಿಇಓ, ಕಮಿಷನರ್‌ಗಳಿಗೆ ರೇಟ್ ಫಿಕ್ಸ್ ಆಗಿದೆ: ಕಟೀಲ್ ಗಂಭೀರ ಆರೋಪ

NALINKUMAR KATEEL 1

ಬೆಳಗಾವಿ: ರಾಜ್ಯದಲ್ಲಿ ಡಿಸಿ, ಸಿಇಓ ಹಾಗೂ ಕಮಿಷನರ್‍ಗಳಿಗೆ ರೇಟ್ ಫಿಕ್ಸ್ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಗಂಭೀರ ಆರೋಪ ಮಾಡಿದ್ದಾರೆ.

ಬೆಳಗಾವಿ ಪೊಲೀಸ್ ಕಮಿಷನರ್ (Belagavi Police Commissioner) ನೇಮಕವಾಗದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಡಿಸಿಗಳಿಗೆ, ಸಿಇಓಗಳಿಗೆ, ಕಮಿಷನರ್ ಗಳಿಗೆ ರೇಟ್ ಫಿಕ್ಸ್ ಆಗಿದೆ. ರೇಟ್ ಕುದುರುವವರೆಗೂ ಯಾರು ನೇಮಕ ಆಗಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಸರ್ಕಾರಕ್ಕೆ ನಾಚಿಕೆ ಆಗಬೇಕು. ಇಂತಹ ಪ್ರದೇಶದಲ್ಲಿ ಕಮಿಷನರ್ ನೇಮಕ ಆಗದೇ ಇರೋದು ನಾಚಿಕ ವಿಷಯವಾಗಿದೆ. ಹೀಗಾದ್ರೆ ಕಾನೂನು ಸುವ್ಯವಸ್ಥೆ ಏನಾಗಬಹುದು. ಕಾನೂನು ಸುವ್ಯವಸ್ಥೆ ಕಾಪಾಡೊದು ಹೇಗೆ?. ರಾಜ್ಯದ ಅಭಿವೃದ್ಧಿ, ಶಾಂತಿ ಚಿಂತನೆ ಮಾಡುವುದುದು ಬಿಟ್ಟು ಇಂತಹ ವ್ಯವಹಾರದಲ್ಲಿ ಕುಳಿತಿದೆ. ಜನರ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ, ಲೋಕಸಭೆ ಚುನಾವಣೆ ಈ ರೀತಿ ಮಾಡ್ತಿದ್ದಾರೆ. 5 ವರ್ಷ ಸರ್ಕಾರ ನಡೆಸುತ್ತೇವೆ ಅಂತಾ ವಿಶ್ವಾಸವಿಲ್ಲ, ಈಗಲೇ ತುಂಬಿಕೊಳ್ಳುವ ವ್ಯವಸ್ಥೆ ಮಾಡುತ್ತಿದ್ದಾರೆ ಎಂದರು.

CongressFlags1 e1613454851608

ಇಲಾಖೆಗಳಲ್ಲಿನ ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ನಮಗೆ 40% ಸರ್ಕಾರ ಅಂತಾ ಹೇಳಿದರು. ಆದರೆ ಯಾವುದೇ ಪುರಾವೆ ಕೊಡಲಿಲ್ಲ. ಈಗ ಕಾಂಗ್ರೆಸ್ ನದ್ದು 80% ಸರ್ಕಾರವಾಗಿದೆ. ಎಲ್ಲ ಇಲಾಖೆಗಳ ವರ್ಗಾವಣೆ ದಂಧೆ ಅಂಗಡಿಗಳಲ್ಲಿ ಇಟ್ಟುಕೊಂಡಿದ್ದಾರೆ. ಇಂದು ಅಂಗಡಿಗಳ ವ್ಯಾಪಾರವಾಗಿದೆ, ಬಾಗಿಲು ತೆರೆದು ಕುಳಿತಿದ್ದಾರೆ. ಅಂಗಡಿಗಳಲ್ಲಿ ಫಿಕ್ಸ್ ಮಾಡಿದ್ದಾರೆ. ಒಂದೊಂದು ಇಲಾಖೆಗಳಲ್ಲಿ ರೇಟ್ ಫಿಕ್ಸ್ ಮಾಡಿದ್ದಾರೆ. ಇದು ವ್ಯಾಪಾರೀಕರಣ ಆಗುತ್ತಿದೆ ಎಂದರು.

ಬಿಜೆಪಿ (BJP) ಆರೋಪಕ್ಕೆ ಯಾವುದೇ ರೀತಿ ಸರ್ಕಾರ ತಲೆಕೆಡಿಸಿಕೊಳ್ಳದ ವಿಚಾರಕ್ಕೆ ಈ ಸರ್ಕಾರ ತಲೆಯಲ್ಲಿ ಅಂಹಕಾರ, ಮದ ತುಂಬಿರುವಾಗ ನಾವೇ ಶ್ರೇಷ್ಠರೆಂಬ ದುರಂಹಂಕಾರ ಇದೆ. ಜನರು ಇದಕ್ಕೆ ತಕ್ಕ ಪಾಠ ಕಲಿಸುತ್ತಾರೆ. ಒಳ್ಳೆಯ ಅಭಿವೃದ್ಧಿ ಕೆಲಸಕ್ಕೆ ಬಿಜೆಪಿ ಸಹಕಾರ ಇರುತ್ತದೆ. ನಾವು ರಾಜಕಾರಣ ಮಾಡಲ್ಲ ಎಂದರು. ಇದನ್ನೂ ಓದಿ: ರಾಂಗ್‌ ರೂಟ್‌ನಲ್ಲಿ ಬಂದ ಶಾಲಾ ಬಸ್‌ನಿಂದ ಕಾರಿಗೆ ಡಿಕ್ಕಿ – ಕಾರಿನಲ್ಲಿದ್ದ ಒಂದೇ ಕುಟುಂಬದ 6 ಮಂದಿ ಸಾವು

ಸರ್ಕಾರ ರಚನೆ ಆಗಿ ಕೆಲವೇ ದಿನಗಳಲ್ಲಿ ಹತ್ಯೆ ಆಗುತ್ತಿರುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಸರ್ಕಾರ ಇದ್ದಾಗ ನಿರಂತರ ಹತ್ಯೆಗಳು, ಗೋಂಡಾಗಿರಿ ರಾಜಕಾರಣ ದರೋಡೆ ಇವೆಲ್ಲವೂ ನಡೆಯುತ್ತವೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ 24 ಹಿಂದೂ ಕಾರ್ಯಕರ್ತರ ಹತ್ಯೆ ಆಗಿತ್ತು. ಯಾವಾಗ ಕಾಂಗ್ರೆಸ್ ಸರ್ಕಾರ ಬರುತ್ತೊ ಆಗಾಗ್ಗೆ ಇಂತಹ ಪ್ರಕರಣ ವೈಭವಿಕರೀಸುತ್ತೆ, ರಾರಾಜಿಸುತ್ತವೆ. ಇಂತಹ ಕೊಲೆಗಡುಕರು ದಂಗೆಕೋರರು ಕಾಂಗ್ರೆಸ್ ಬೆಂಬಲಿಸ್ತಾರೆ ಎಂದು ಹೇಳಿದರು.

ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ವಿಚಾರಕ್ಕೆ ಸಂಭ್ರಮಾಚರಣೆಯಲ್ಲಿ ಶಾಸಕರು ಗೆದ್ದಾಗ, ಪಕ್ಷದ ರ್ಯಾಲಿಗಳಲ್ಲಿ ಕೂಗಿದ್ರು ಸುಮ್ಮನೆ ಇರುತ್ತಾರೆ. ಅವರ ವಿರುದ್ಧ ದೇಶದ್ರೋಹ ಕೇಸ್ ಹಾಕ್ತಿಲ್ಲ. ನಾವು ಇದನ್ನ ಪ್ರಶ್ನೆ ಮಾಡುತ್ತಿದ್ದೇವೆ. ಕಾಂಗ್ರೆಸ್ ದೇಶವಿರೋಧಿ ಚಟುವಟಿಕೆ ನಡೆಸುವವರ ಪರವಾಗಿ ಇದೆ. ದೇಶಭಕ್ತರ ವಿರುದ್ಧ ಕೇಸ್ ಹಾಕುತ್ತಿದ್ದಾರೆ. ಎಲ್ಲ ವಿಷಯದಲ್ಲೂ ದ್ವೇಷದ ರಾಜಕಾರಣ ನಡೆಯುತ್ತಿದೆ. ಸಿದ್ರಾಮಣ್ಣ ಯಾವಾಗ ಯಾವಾಗ ಮುಖ್ಯಮಂತ್ರಿ ಆಗ್ತಾರೆ. ದ್ವೇಷದ ರಾಜಕಾರಣ ಜಾಸ್ತಿ ಆಗ್ತಿದೆ. ಪೊಲೀಸ್ ಇಲಾಖೆ ಅವರ ಕೈಯಲ್ಲಿ ಇರುವಾಗ ಪೊಲೀಸರಿಗೆ ಹೆಚ್ಚಿನ ಒತ್ತಡ ಇರುತ್ತದೆ. ಹಾಗಾಗಿ ಪಾರದರ್ಶಕವಾಗಿ ತನಿಖೆ ನಡೆಸಲು ಆಗೋದಿಲ್ಲ ಎಂದು ಕಟೀಲ್ ಹೇಳಿದರು.

ವಿರೋಧ ಪಕ್ಷದ ನಾಯಕರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮಲ್ಲಿ ಒಂದು ವ್ಯವಸ್ಥೆ ಇದೆ. ಈಗಾಗಲೇ ವಿಧಾನಸಭೆಯಲ್ಲಿ ಹೋರಾಟ ಮಾಡ್ತಿದ್ದಾರೆ. ನಮ್ಮಲ್ಲಿ ಪದ್ಧತಿಗಳಿವೆ ಅದರ ಆಧಾರದ ಮೇಲೆ ಆಯ್ಕೆ ಆಗುತ್ತದೆ. ಕಾಂಗ್ರೆಸ್ ಗೆ ರಾಷ್ಟ್ರೀಯ ಅಧ್ಯಕ್ಷರನ್ನ ಮಾಡಿರಲಿಲ್ಲ ಕೇವಲ ಟೀಕೆ ಮಾಡ್ತಾರೆ. ರಾಜ್ಯದಲ್ಲೂ 6 ತಿಂಗಳ ನಂತರ ಅಧ್ಯಕ್ಷರಾಗಿ ಡಿಕೆಶಿ ಆಗಿದ್ದಾರೆ. ಅವರ ಪರಿಸ್ಥಿತಿ ಏನಿತ್ತು ಅವಾಗ ಎಂದು ಪ್ರಶ್ನಿಸಿದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]