ಪ್ರತಿಷ್ಠಿತ ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ನಿಧನಕ್ಕೆ ಗೆಳತಿ ಬಾಲಿವುಡ್‌ನ ಹಿರಿಯ ನಟಿ ಸಿಮಿ ಗರೆವಾಲ್ (Simi Garewal) ಎಕ್ಸ್‌ನಲ್ಲಿ ಫೋಟೋ ಒಂದನ್ನು ಹಂಚಿಕೊಂಡು ಭಾವುಕ ಪೋಸ್ಟ್ ಮಾಡಿದ್ದಾರೆ.
They say you have gone ..
It’s too hard to bear your loss..too hard.. Farewell my friend..#RatanTata pic.twitter.com/FTC4wzkFoV
— Simi_Garewal (@Simi_Garewal) October 9, 2024
ನೀವು ಹೋಗಿದ್ದೀರಿ ಎಂದು ಎಲ್ಲರೂ ಹೇಳುತ್ತಿದ್ದಾರೆ, ನೀವು ನಮ್ಮ ಜೊತೆಗೆ ಇಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ. ಹೋಗಿ ಬನ್ನಿ ನನ್ನ ಗೆಳೆಯ ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಪ್ರಸಿದ್ಧ ಕೈಗಾರಿಕೋದ್ಯಮಿ ರತನ್ ಟಾಟಾ ಅವರೊಂದಿಗಿನ ಸಂಬಂಧದ ಬಗ್ಗೆ 2011 ರಲ್ಲಿ ನೀಡಿದ ಸಂದರ್ಶನದಲ್ಲಿ ಖ್ಯಾತ ಹಿಂದಿ ಸಿನಿಮಾ ನಟಿ ಸಿಮಿ ಸ್ವತಃ ಬಹಿರಂಗಪಡಿಸಿದ್ದರು. ಇದನ್ನೂ ಓದಿ: ಮಧ್ಯಮ ವರ್ಗದ ಭಾರತೀಯರ ಕನಸು ನನಸು ಮಾಡಿದ್ದ ರತನ್ – ಮೊದಲ ದೇಶೀ ಕಾರು ಮಾರುಕಟ್ಟೆಗೆ ಬಂದಿದ್ದು ಯಾವಾಗ?
ಸಿಮಿ ಅವರು ಪರಿಪೂರ್ಣ ವ್ಯಕ್ತಿ, ಹಾಸ್ಯ ಪ್ರಜ್ಞೆ ಕೂಡ ಚೆನ್ನಾಗಿತ್ತು, ಸಭ್ಯರು, ಯಾವಾಗಲೂ ಅವರು ಶ್ರೀಮಂತಿಕೆ ತೋರಿಸಿಕೊಂಡವರಲ್ಲ ಎಂದು ಹೇಳಿದ್ದರು. ಇಷ್ಟು ಆತ್ಮೀಯವಾಗಿದ್ದರೂ ರತನ್ ಹಾಗೂ ಸಿಮಿಯ ಗೆಳೆತನ ಹೆಚ್ಚು ದಿನ ಉಳಿಯಲಿಲ್ಲ, ಸಿಮಿ ಬೇರೊಬ್ಬರನ್ನು ಮದುವೆಯಾದರು, ಸಾಕಷ್ಟು ವರ್ಷಗಳ ಕಾಲ ಸಿಮಿ ಹಾಗೂ ರತನ್ ಒಳ್ಳೆಯ ಸ್ನೇಹಿತರಾಗಿದ್ದರು.
ಸಂದರ್ಶನವೊಂದರಲ್ಲಿ ಸ್ವತಃ ರತನ್ ಟಾಟಾ ಅವರು ನಾಲ್ಕು ಬಾರಿ ಪ್ರೀತಿಯಲ್ಲಿ ಬಿದ್ದಿದ್ದರೂ ಅದು ಮದುವೆಯ ಹಂತವನ್ನು ತಲುಪಲಿಲ್ಲ ಎಂದು ಬಹಿರಂಗಪಡಿಸಿದ್ದರು. 1960 ರ ದಶಕದಲ್ಲಿ ಅಮೆರಿಕದಲ್ಲಿ ಕೆಲಸ ಮಾಡುವಾಗ ರತನ್ ಟಾಟಾ ಬೇರೊಬ್ಬ ಹುಡುಗಿಯನ್ನು ಇಷ್ಟಪಟ್ಟಿದ್ದರು. 1962ರ ಭಾರತ-ಚೀನಾ ಯುದ್ಧ ಸಮಯದಲ್ಲಿ ಅದು ಕೊನೆಗೊಂಡಿತ್ತು. ಏಕೆಂದರೆ ಯುದ್ಧದ ಸಮಯದಲ್ಲಿ ಆಕೆಗೆ ಅಮೆರಿಕವನ್ನು ಬಿಟ್ಟು ಭಾರತಕ್ಕೆ ಹೋಗಲು ಪೋಷಕರು ಅನುಮತಿ ನೀಡಿರಲಿಲ್ಲ. ಇದನ್ನೂ ಓದಿ: ಮೊದಲ ಉದ್ಯಮದಲ್ಲೇ ಯಶಸ್ಸು ಕಂಡಿದ್ದ ಉದ್ಯಮ ಸಾಮ್ರಾಟ