ರತನ್ ಟಾಟಾ ದೂರದೃಷ್ಟಿಯ ಉದ್ಯಮಿ, ಅಸಾಧಾರಣ ವ್ಯಕ್ತಿ: ಪ್ರಧಾನಿ ಮೋದಿ ಸಂತಾಪ

Public TV
1 Min Read
pm modi and ratan tata

ನವದೆಹಲಿ: ಭಾರತದ ಖ್ಯಾತ ಉದ್ಯಮಿ, ಟಾಟಾಸನ್ಸ್‌ನ ಗೌರವ ಅಧ್ಯಕ್ಷ ರತನ್‌ ಟಾಟಾ (Ratan Tata) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಮೋದಿ (Narendra Modi), ರತನ್ ಟಾಟಾ ಅವರು ದೂರದೃಷ್ಟಿಯ ಉದ್ಯಮಿ. ಸಹಾನುಭೂತಿಯುಳ್ಳ ಆತ್ಮ ಮತ್ತು ಅಸಾಧಾರಣ ಮನುಷ್ಯ. ಅವರು ಭಾರತದ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರತಿಷ್ಠಿತ ವ್ಯಾಪಾರ ಸಂಸ್ಥೆಗಳಿಗೆ ಸ್ಥಿರ ನಾಯಕತ್ವವನ್ನು ನೀಡಿದರು ಎಂದು ಸ್ಮರಿಸಿದ್ದಾರೆ.

ರತನ್‌ ಟಾಟಾ ಅವರ ಕೊಡುಗೆ ಬಹಳ ದೂರ ಸಾಗಿದೆ. ಬೋರ್ಡ್ ರೂಮಿನ ಆಚೆಗೆ ಅವರು ತಮ್ಮ ನಮ್ರತೆ, ದಯೆ ಮತ್ತು ನಮ್ಮ ಸಮಾಜವನ್ನು ಉತ್ತಮಗೊಳಿಸಿದವರು. ಅವರ ಅಚಲ ಬದ್ಧತೆಗೆ ಧನ್ಯವಾದಗಳು ಎಂದು ಮೋದಿ ನೆನೆದಿದ್ದಾರೆ.

ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ರತನ್ ಟಾಟಾ ದೂರದೃಷ್ಟಿ ಹೊಂದಿದ ವ್ಯಕ್ತಿ. ಅವರು ವ್ಯಾಪಾರ ಮತ್ತು ಲೋಕೋಪಕಾರ ಎರಡರಲ್ಲೂ ಶಾಶ್ವತವಾದ ಗುರುತು ಬಿಟ್ಟಿದ್ದಾರೆ. ಅವರ ಕುಟುಂಬ ಮತ್ತು ಟಾಟಾ ಸಮುದಾಯಕ್ಕೆ ನನ್ನ ಸಂತಾಪಗಳು ಎಂದು ಪೋಸ್ಟ್‌ ಹಾಕಿ ದುಃಖ ವ್ಯಕ್ತಪಡಿಸಿದ್ದಾರೆ.

Share This Article