ಮುಂಬೈ: ಉದ್ಯಮಿಯಾಗಿ ಸಾರ್ಥಕ ಬದುಕು ನಡೆಸಿದ ರತನ್ ಟಾಟಾ (Ratan Tata) ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ. ಅವರ ಸಾಧನೆಗಳು ಒಂದೊಂದೇ ಬೆಳಕಿಗೆ ಬರುತ್ತಿವೆ.
1991ರಲ್ಲಿ ಟಾಟಾ ಗ್ರೂಪ್ಸ್ ಅಧ್ಯಕ್ಷರಾಗಿ ನೇಮಕಗೊಂಡ ರತನ್ ಟಾಟಾ ಅವರು ಕೈ ಹಾಕಿದ್ದ ಮೊದಲ ಉದ್ಯಮದಲ್ಲಿ ಜಯಭೇರಿ ಬಾರಿಸಿದ್ದರು. ಇದನ್ನೂ ಓದಿ: ಮಧ್ಯಮ ವರ್ಗದ ಭಾರತೀಯರ ಕನಸು ನನಸು ಮಾಡಿದ್ದ ರತನ್ – ಮೊದಲ ದೇಶೀ ಕಾರು ಮಾರುಕಟ್ಟೆಗೆ ಬಂದಿದ್ದು ಯಾವಾಗ?
ಟಾಟಾ ಸಮೂಹದ ʻದಿ ನ್ಯಾಷನಲ್ ರೇಡಿಯೋʼ ಮತ್ತು ʻಎಲೆಕ್ಟ್ರಾನಿಕ್ ಕಂಪನಿ ಲಿಮಿಟೆಡ್ʼ (Electronic Company Limited) ಅಳಿವಿನಂಚಿನಲ್ಲಿತ್ತು. ಆಗಿನ ಟಾಟಾ ಗ್ರೂಪ್ ಅಧ್ಯಕ್ಷರಾಗಿದ್ದ ಜೆಆರ್‌ಡಿ ಟಾಟಾ ಅವರು ಕಂಪನಿಯ ಪುನಶ್ವೇತನದ ಆಸೆಯನ್ನು ಬಿಟ್ಟಿದ್ದರು. ಅಂತಹ ಸಂದರ್ಭದಲ್ಲಿ ಅಂದರೆ 1971ರಲ್ಲಿ ರತನ್ ಟಾಟಾ ಅವರು ನ್ಯಾಷನಲ್ ರೇಡಿಯೋ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿ ಲಿಮಿಟೆಡ್ (ಎನ್‌ಇಎಲ್‌ಸಿಒ)ಗೆ ನಿರ್ದೇಶಕರಾಗಿ ನೇಮಕಗೊಂಡರು.
ಕಂಪನಿಯ ಸಾಂಪ್ರದಾಯಿಕ ಪದ್ಧತಿಗಳಿಗೆ ಅಂಟಿಕೊಂಡು ಕುಳಿತುಕೊಳ್ಳದ ಅವರು ಆಧುನಿಕ ಹಾಗೂ ಉನ್ನತ ತಂತ್ರಜ್ಞಾನ ಹೊಂದಿದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತಯಾರಿಸಲು ಕೈ ಹಾಕಿದರು. ಇದರಿಂದ ಎನ್‌ಇಎಲ್‌ಸಿಒ ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಾ ಸಾಗಿತು. ರತನ್ ಟಾಟಾ ಅವರು ಬರುವ ಮುನ್ನ ಶೇ.2 ರಷ್ಟಿದ್ದ ಕಂಪನಿಯ ಮಾರುಕಟ್ಟೆ ಶೇರು ಶೇ.30ಕ್ಕೇರಿತು. ಹಾಗಾಗಿ ಕಂಪನಿ ನಷ್ಟದ ಭಯದಿಂದ ಆಚೆ ಬಂದಿತ್ತು. ಇದನ್ನೂ ಓದಿ: ರತನ್ ಟಾಟಾ ನಿಧನ; ಸರ್ಕಾರಿ ಗೌರವಗಳೊಂದಿಗೆ ಇಂದು ಅಂತ್ಯಕ್ರಿಯೆ – ಏಕನಾಥ್ ಶಿಂಧೆ
ಬಳಿಕ 1975ರ ತುರ್ತು ಪರಿಸ್ಥಿತಿಯಿಂದಾಗಿ ಕಂಪನಿ ವಹಿವಾಟಿನಲ್ಲಿ ಆರ್ಥಿಕ ಹಿನ್ನಡೆ ಕಂಡುಬಂದಿತು. ಸಮಸ್ಯೆ ಅರ್ಥಮಾಡಿಕೊಳ್ಳದ ಕಾರ್ಮಿಕ ಒಕ್ಕೂಟ ಧರಣಿಯಲ್ಲಿ ನಿರತವಾಯಿತು. ಇದರಿಂದ ಉತ್ಪಾದನೆ ಸ್ಥಗಿತವಾಗಿ ಕಂಪನಿಯನ್ನೇ ಮುಚ್ಚಬೇಕಾಯಿತು. ಇದನ್ನೂ ಓದಿ: ಅವಮಾನಿಸಿದ್ದ ಕಂಪನಿಯನ್ನೇ ಖರೀದಿಸಿ ಮೆರೆದಿದ್ದ ಯಶಸ್ವಿ ಉದ್ಯಮಿ ರತನ್ ಟಾಟಾ!