– ಒಂದು ದಿನ ಕೆಎಲ್‌ಇ ಕಾಲೇಜು ಬಿವಿಬಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಜೊತೆ ಕಾಲ ಕಳೆದಿದ್ದ ಉದ್ಯಮಿ
– ಇಸ್ಕಾನ್ ಅಡುಗೆ ತಯಾರಿಕಾ ಘಟಕಕ್ಕೂ ಭೇಟಿ
ಹುಬ್ಬಳ್ಳಿ: ಟಾಟಾ ಉದ್ದಿಮೆ ಸಾಮ್ರಾಜ್ಯವನ್ನು ವಿಶ್ವ ಮಟ್ಟಕ್ಕೆ ಒಯ್ದಿದ್ದ ರತನ್ ಟಾಟಾ (Ratan Tata) ಅಸ್ತಂಗತರಾಗಿದ್ದಾರೆ. ಇವರು ನಡೆದು ಬಂದ ದಾರಿ ಇತರರಿಗೂ ಮಾದರಿ. ರತನ್ ಟಾಟಾ ಅವರಿಗೂ ವಾಣಿಜ್ಯ ನಗರಿ ಹುಬ್ಬಳ್ಳಿಗೂ ಅವಿನಾಭಾವ ಸಂಬಂಧವಿದೆ.
Advertisement
2013 ರಲ್ಲಿ ಹುಬ್ಬಳ್ಳಿಗೆ (Hubballi) ಬಂದಿದ್ದ ರತನ್ ಟಾಟಾ ಒಂದು ದಿನ ಇಲ್ಲಿನ ವಿದ್ಯಾರ್ಥಿಗಳ ಜೊತೆಗೆ ಕಾಲ ಕಳೆದು, ಅವರಿಗೆ ಸ್ಪೂರ್ತಿ ತುಂಬಿದ್ದರು. ಇದನ್ನೂ ಓದಿ: ಟಾಟಾ ಟ್ರಸ್ಟ್ ಅಧ್ಯಕ್ಷರಾಗಿ ನೋಯೆಲ್ ಟಾಟಾ ಆಯ್ಕೆ
Advertisement
Advertisement
ಕೆಎಲ್‌ಇ ವಿದ್ಯಾ ಸಂಸ್ಥೆಯ ಬಿವಿಬಿ ಕಾಲೇಜು ಆವರಣದಲ್ಲಿ 2013 ರ ಜನವರಿ 29 ರಂದು ದೇಶಪಾಂಡೆ ಫೌಂಡೇಶನ್ ‘ಟಿಪ್ಪಿಂಗ್ ಪಾಯಿಂಟ್’ ಎಂಬ ವಿಷಯದೊಂದಿಗೆ ಆಯೋಜಿಸಿದ್ದ ಮೂರು ದಿನಗಳ ಅಭಿವೃದ್ಧಿ ಸಂವಾದ-2013 ಅಧಿವೇಶನದಲ್ಲಿ ಒಂದು ದಿನ ಟಾಟಾ ಅವರು ಭಾಗಿಯಾಗಿದ್ದರು.
Advertisement
ಈ ವೇಳೆ ಇನ್ಫೋಸಿಸ್‌ನ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ, ಸುಧಾ ಮೂರ್ತಿ ಅವರೊಂದಿಗೆ ನವೋದ್ಯಮ ಸೇರಿದಂತೆ ಹಲವು ವಿಚಾರಗಳ ಕುರಿತು ಮುಕ್ತ ಮನಸ್ಸಿನಿಂದ ಸಂವಾದ ನಡೆಸಿದ್ದರು. ಇದನ್ನೂ ಓದಿ: ಸಕಲ ಸರ್ಕಾರಿ ಗೌರವಗಳೊಂದಿಗೆ ಉದ್ಯಮಿ ರತನ್ ಟಾಟಾ ಅಂತ್ಯಕ್ರಿಯೆ
ಇದಾದ ಬಳಿಕ ಹುಬ್ಬಳ್ಳಿ-ಧಾರವಾಡ ಮಧ್ಯದಲ್ಲಿನ ರಾಯಪುರದಲ್ಲಿರುವ ಇಸ್ಕಾನ್ ಕಿಚನ್‌ಗೆ ಭೇಟಿ ನೀಡಿ, ಅಲ್ಲಿನ ಆಹಾರ ತಯಾರಿಕೆ, ಸರಬರಾಜು ಬಗ್ಗೆ ಮಾಹಿತಿ ಪಡೆದುಕೊಂಡು ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದರು.