ಉಡುಪಿ: ಹತ್ತು ವರ್ಷಗಳ ಹಿಂದೆ ಟಾಟಾ ಸಮೂಹದ ಮುಖ್ಯಸ್ಥರಾಗಿದ್ದ ರತನ್ ಟಾಟಾ (Ratan Tata) ಉಡುಪಿಗೆ (Udupi) ಆಗಮಿಸಿದ್ದರು.
ಹಿರಿಯಡ್ಕದಲ್ಲಿರುವ ಪುತ್ತಿಗೆ ಮೂಲ ಮಠಕ್ಕೆ (Puttige Matha) ಆಗಮಿಸಿದ ರತನ್ ಟಾಟಾ ಸ್ವಾಗತ ಗೋಪುರವನ್ನು ಲೋಕಾರ್ಪಣೆ ಮಾಡಿದ್ದರು. ಗ್ರಾಮೀಣ ಪರಿಸರದ ಮಠದಲ್ಲಿ ಅಮೂಲ್ಯ ಸಮಯವನ್ನು ಕಳೆದ ಅವರು ಮಠಕ್ಕೆ ಆಗಮಿಸಿ, ದೇವರ ದರ್ಶನ ಪಡೆದಿದ್ದರು. ಇದನ್ನೂ ಓದಿ: ಅವಕಾಶಕ್ಕಾಗಿ ಕಾಯಬೇಡಿ. ನೀವೇ ಸ್ವಂತ ಅವಕಾಶಗಳನ್ನು ಸೃಷ್ಟಿಸಿ: ರತನ್ ಟಾಟಾ ಪ್ರಸಿದ್ದ ಅಣಿಮುತ್ತುಗಳನ್ನು ಓದಿ
Advertisement
Advertisement
ಪುತ್ತಿಗೆ ಮಠಕ್ಕೆ ಬಂದಿದ್ದ ರತನ್ ಟಾಟಾ ಕರಾವಳಿಯ ಕಲೆ ಸಂಸ್ಕೃತಿ ಆಚರಣೆಗಳ ಬಗ್ಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿಯಿಂದ ಮಾಹಿತಿಗಳನ್ನು ಪಡೆದಿದ್ದರು. ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಅಷ್ಟಮಠಾಧೀಶರು ಎರಡು ವರ್ಷಗಳ ಕಾಲ ಸರತಿಯಲ್ಲಿ ಪೂಜೆಗೈವ ಪರ್ಯಾಯ ಮಹೋತ್ಸವದ ಬಗ್ಗೆ ಮಾಹಿತಿಯನ್ನು ಬಹಳ ಆಸಕ್ತಿಯಿಂದ ತಿಳಿದುಕೊಂಡಿದ್ದರು. ಪುತ್ತಿಗೆ ಮೂಲ ಮಠದಲ್ಲಿ ರತನ್ ಟಾಟಾವರಿಗೆ ಈ ಸಂದರ್ಭ ಪುರ ಗೌರವವನ್ನು ಸಲ್ಲಿಕೆ ಮಾಡಲಾಗಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಎಫ್16 ಯುದ್ಧ ವಿಮಾನ ಹಾರಿಸಿದ್ದ ರತನ್ ಟಾಟಾ
Advertisement
ತಮ್ಮ ಭಾಷಣದಲ್ಲಿ ರತನ್ ಟಾಟಾ ಈ ಪವಿತ್ರ ವಾತಾವರಣ ನನಗೆ ಇಷ್ಟವಾಯಿತು, ನಾನು ಧನ್ಯನಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಭ್ರಷ್ಟಾಚಾರ ನಿರ್ಮೂಲನೆ ಮಾಡೋದು ಹೇಗೆ? – ರತನ್ ಟಾಟಾ ನೀಡಿದ ಖಡಕ್ ಉತ್ತರ ಇದು
Advertisement
ಭೇಟಿ ಸಂದರ್ಭದಲ್ಲಿ ಭಗವದ್ಗೀತೆ (Bhagavad Gita) ಬಗ್ಗೆ ತಮಗಿರುವ ಆಸಕ್ತಿ ವ್ಯಕ್ತಪಡಿಸಿದ್ದರು. ಶ್ರೀ ಕೃಷ್ಣ ಮುಖ್ಯಪ್ರಾಣ ದೇವರು ರತನ್ ಟಾಟಾ ಅವರ ಆತ್ಮಕ್ಕೆ ಸದ್ಗತಿ ಕೊಡಲಿ ಎಂದು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಶ್ರದ್ಧಾಂಜಲಿ ಅರ್ಪಣೆ ಮಾಡಿದ್ದಾರೆ.