ಸಾಹಸ ಪ್ರೇಮಿಯಾಗಿದ್ದ ರತನ್ ಟಾಟಾ (Ratan Tata) ಅವರು ಬೆಂಗಳೂರಿನಲ್ಲಿ (Bengaluru) ಅಮೆರಿಕದ ಎಫ್ 16 ಫಾಲ್ಕನ್ (F-16 Fighting Falcon) ಯುದ್ಧ ವಿಮಾನವನ್ನು ಹಾರಿಸಿದ್ದರು. ಅದು 69ರ ವಯಸ್ಸಿನಲ್ಲಿ ಎನ್ನುವುದು ವಿಶೇಷ.
2007ರಲ್ಲಿ ನಡೆದ ಏರೋ ಇಂಡಿಯಾ (Aero India) ವೈಮಾನಿಕ ಪ್ರದರ್ಶನಲ್ಲಿ ಅಮೆರಿಕದ ಲಾಕ್‌ಹಿಡ್ ಮಾರ್ಟಿನ್ ಕಂಪನಿ ನಿರ್ಮಿಸಿದ 400 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಎಫ್-16 ಯುದ್ಧ ವಿಮಾನ ಭಾಗಿಯಾಗಿತ್ತು. ಈ ಯುದ್ಧ ವಿಮಾನವನ್ನು ರತನ್ ಟಾಟಾ ಹಾರಿಸಿದ್ದರು. ಈ ಮೂಲಕ ಎಫ್-16 ಹಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಇದನ್ನೂ ಓದಿ: ಹೋಗಿ ಬಾ ನನ್ನ ಗೆಳೆಯ – ರತನ್ ಟಾಟಾ ನಿಧನಕ್ಕೆ ಸ್ನೇಹಿತೆ ಸಿಮಿ ಭಾವುಕ ಪೋಸ್ಟ್
Advertisement
जब रतन टाटा ने उड़ाया था F-16 फाइटर जेट..#ratantata #fighterjet pic.twitter.com/8Nae7H2okg
— NDTV India (@ndtvindia) October 9, 2024
ರತನ್ ಟಾಟಾ ಅವರು ಜೆಟ್, ಹೆಲಿಕಾಪ್ಟರ್ ಹಾರಿಸಲು ಪರವಾನಗಿ ಹೊಂದಿದ್ದರು. ಸಹ ಪೈಲೆಟ್ ಮಾರ್ಗದರ್ಶನದಲ್ಲಿ ಟಾಟಾ ಅವರು ಸುಮಾರು 40 ನಿಮಿಷ ವಿಮಾನ ಹಾರಿಸಿದರು. ಹಾರಾಟದ ಅವಧಿಯಲ್ಲಿ ಎಫ್16 ವಿಮಾನ ಪ್ರತಿ ಗಂಟೆಗೆ 2000 ಕಿ.ಮೀ ವೇಗದಲ್ಲಿ ಸಂಚರಿಸಿತ್ತು. ಇದನ್ನೂ ಓದಿ: ಭಾರತೀಯನಾಗಿರುವುದೇ ಅದೃಷ್ಟ, ಭಾರತ ರತ್ನ ಅಭಿಯಾನವನ್ನು ನಿಲ್ಲಿಸಿ ಎಂದಿದ್ದ ರತನ್ ಟಾಟಾ
Advertisement
ಲ್ಯಾಂಡಿಂಗ್ ನಂತರ ಟಾಟಾ ಅವರನ್ನು ಲಾಕ್‌ಹೀಡ್ ಮಾರ್ಟಿನ್ ಅಧಿಕಾರಿಗಳು ರತನ್ ಟಾಟಾ ಅವರನ್ನು ಸ್ವಾಗತಿಸಿ F-16 ನ ಚಿಕ್ಕ ಪ್ರತಿಕೃತಿಯನ್ನು ನೀಡಿದರು. ಈ ಸಮಯದಲ್ಲಿ ಅಮೆರಿಕದ ರಕ್ಷಣಾ ದೈತ್ಯ ಲಾಕ್‌ಹಿಡ್ ಮಾರ್ಟಿನ್ ಭಾರತದೊಂದಿಗೆ ಶತಕೋಟಿ ಡಾಲರ್‌ಗಳ ಪ್ರಮುಖ ರಕ್ಷಣಾ ಒಪ್ಪಂದಕ್ಕಾಗಿ ಸ್ಪರ್ಧಿಸುತ್ತಿತ್ತು.
Advertisement
ಈ ಪ್ರಯಾಣದ ನಂತರ ಇದೊಂದು ಅದ್ಭುತ ಅನುಭವ ಎಂದು ರತನ್ ಟಾಟಾ ಬಣ್ಣಿಸಿದ್ದರು. ಫೈಟರ್ ಜೆಟ್ ಹಾರಿಸಿದ ಸುಮಾರು 10 ವರ್ಷದ ನಂತರ ಲಾಕ್‌ಹಿಟ್ ಮಾರ್ಟಿನ್ ಕಂಪನಿಯ ಜೊತೆ ಭಾರತದಲ್ಲಿ F-16 ಬ್ಲಾಕ್ 70 ಅನ್ನು ಉತ್ಪಾದಿಸಲು ಮಹತ್ವದ ಒಪ್ಪಂದಕ್ಕೆ ರತನ್ ಟಾಟಾ ಸಹಿ ಹಾಕಿದರು.
Advertisement