ಚಿಕ್ಕಬಳ್ಳಾಪುರ: ಇಲಿಗಳ ಕಾಟದಿಂದ ಹೈರಾಣಾದ ಪೊಲೀಸರು ಇಲಿಗಳ ಕಾಟ ತಪ್ಪಿಸಲು ಬೆಕ್ಕಿನ ಮೊರೆ ಹೋದ ವಿಚಿತ್ರ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
Advertisement
ನಗರ ಹೊರವಲಯದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ದು, ಪೊಲೀಸ್ ಠಾಣೆಯಲ್ಲಿನ ದಾಖಲೆಗಳನ್ನು ತಿಂದು ತೇಗಿ ಹಾಳು ಮಾಡುತ್ತಿವೆ. ಇದರಿಂದ ಇಲಿಗಳ ಕಾಟಕ್ಕೆ ಹೈರಾಣಾದ ಪೊಲೀಸರು ಈಗ ಬೆಕ್ಕೊಂದನ್ನು ಸಾಕುತ್ತಿದ್ದಾರೆ. ಈ ಮೂಲಕ ಇಲಿಗಳನ್ನು ಮಟ್ಟಹಾಕಲು ಮುಂದಾಗಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ಅಪಘಾತ- 9 ಮಂದಿ ದುರ್ಮರಣ
Advertisement
Advertisement
ಪೊಲೀಸ್ ಠಾಣೆಯಲ್ಲಿ ಪೊಲೀಸರ ಜೊತೆ ರಾಜಾರೋಷವಾಗಿ ಒಡಾಡುತ್ತಿರುವ ಬೆಕ್ಕು ಇಲಿಗಳ ಬೇಟೆ ಶುರು ಮಾಡಿದೆ. ಬೆಕ್ಕಿನ ಧ್ವನಿ ಕೇಳಿ ಇಲಿಗಳು ಪರಾರಿಯಾಗ್ತಿದ್ದು, ಪೊಲೀಸರ ಪ್ಲಾನ್ ಸಕ್ಸಸ್ ಆಗಿದೆ. ಪೊಲೀಸರು ಕಳೆದ 1 ತಿಂಗಳ ಹಿಂದೆ ಬೆಕ್ಕಿನ ಮರಿ ಒಂದನ್ನು ತಂದು ಸಾಕಲು ಪ್ರಾರಂಭಿಸಿದರು ಇದೀಗ ಈ ಬೆಕ್ಕಿನ ಮರಿ ದೊಡ್ಡದಾಗಿದ್ದು ಇಲಿಗಳ ಬೇಟೆ ಶುರು ಮಾಡಿದೆ. ಈ ಮೂಲಕ ಪೊಲೀಸರ ತಲೆನೋವು ದೂರ ಆಗಿದೆ. ಇಲಿಗಳ ಕಾಟಕ್ಕೆ ಬೇಸತ್ತು ಹೋಗಿದ್ದ ಪೊಲೀಸರಿಗೆ ಬೆಕ್ಕು ರಿಲೀಫ್ ಕೊಡುತ್ತಿದೆ. ಇದನ್ನೂ ಓದಿ: 4ನೇ ಮಹಡಿಯಿಂದ ತಳ್ಳಿ ಪತ್ನಿಯನ್ನೇ ಕೊಂದ ಪತಿ