LatestBengaluru CityKarnatakaMain Post

ರಾಷ್ಟ್ರೋತ್ಥಾನ, ಬೇಸ್ ಸಂಸ್ಥೆಯ 9 ವಿದ್ಯಾರ್ಥಿಗಳು ಐಐಟಿಗೆ ಆಯ್ಕೆ

ಬೆಂಗಳೂರು: 2019-21ನೇ ಸಾಲಿನ ಜೆಇಇ ಫಲಿತಾಂಶ ಹೊರಬಂದಿದ್ದು, ರಾಷ್ಟ್ರೋತ್ಥಾನ ಹಾಗೂ ಬೇಸ್ ಸಂಸ್ಥೆಯ ಒಟ್ಟು 32 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದಿದ್ದು, ಅದರಲ್ಲಿ 9 ವಿದ್ಯಾರ್ಥಿಗಳು ಐಐಟಿ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ.

ರಾಷ್ಟ್ರೋತ್ಥಾನ, ಬೇಸ್ ಸಂಸ್ಥೆಯ 9 ವಿದ್ಯಾರ್ಥಿಗಳು ಐಐಟಿಗೆ ಆಯ್ಕೆ

ರಾಷ್ಟ್ರೋತ್ಥಾನ ಪರಿಷತ್ ಒಂದು ಸ್ವಯಂಸೇವಾ ಸಂಸ್ಥೆಯಾಗಿದ್ದು, ತಪಸ್ ಯೋಜನೆ ಮೂಲಕ ಸಮಾಜದಲ್ಲಿರುವ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿರುವ 10ನೇ ತರಗತಿ ಓದುತ್ತಿರುವ ಬಡ ಪ್ರತಿಭಾವಂತ ಮಕ್ಕಳನ್ನು ಪ್ರವೇಶ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿ ಎರಡು ವರ್ಷಗಳ ಪಿ.ಯು. ಶಿಕ್ಷಣದ ಜೊತೆ ಜೊತೆ ಐಐಟಿ-ಜೆಇಇ ಪ್ರವೇಶ ಪರೀಕ್ಷೆಗೆ ತರಬೇತಿ ನೀಡಿ ಅವರ ಭವ್ಯ ಭವಿಷ್ಯವನ್ನು ರೂಪಿಸುವಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಈ ಯೋಜನೆ ಸಂಪೂರ್ಣ ಉಚಿತವಾಗಿದ್ದು, ಐಐಟಿ-ಜೆಇಇ ಎನ್ನುವ ಪದವನ್ನೇ ಕೇಳಿರದ, ಕೇಳಿದ್ದರೂ ಪ್ರವೇಶ ಹೊಂದಲು ಪಡೆಯುವ ತರಬೇತಿಗೆ ತಗಲುವ ಅಷ್ಟು ದುಬಾರಿ ಶುಲ್ಕವನ್ನು ಭರಿಸುವ ಸಾಮರ್ಥ್ಯವಿರುವುದಿಲ್ಲ. ಐಐಟಿ ಓದುವ ಕನಸುಹೊಂದಿರುವ, ಓದುವ ಸಾಮರ್ಥ್ಯವುಳ್ಳ ಇಂತಹ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ, ಜೀವನ ಮೌಲ್ಯಗಳನ್ನೂ ತಿಳಿಸಿಕೊಟ್ಟು ಸಮಾಜಕ್ಕೆ ಒಬ್ಬ ಉತ್ತಮ ಪ್ರಜೆಯನ್ನು ಕೊಡುಗೆಯಾಗಿ ನೀಡುತ್ತಾ ಬಂದಿದೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಮತ ಪಡೆಯಲು ಸಿದ್ದರಾಮಯ್ಯ, ಕುಮಾರಸ್ವಾಮಿ RSS ಟೀಕೆ: ಪ್ರಹ್ಲಾದ ಜೋಶಿ

ಅದೇ ನಿಟ್ಟಿನಲ್ಲಿ 2019-21 ನೇ ತಂಡದ ಜೆಇಇ ಫಲಿತಾಂಶ ಹೊರಬಂದಿದ್ದು, ಒಟ್ಟು 32 ವಿದ್ಯಾರ್ಥಿಗಳಿದ್ದು ಅದರಲ್ಲಿ 9 ವಿದ್ಯಾರ್ಥಿಗಳು ಐಐಟಿ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ. 32 ವಿದ್ಯಾರ್ಥಿಗಳ ಒಂದು ತರಗತಿಯಲ್ಲಿ 9 ವಿದ್ಯಾರ್ಥಿಗಳು ಆಯ್ಕೆಯಾಗುವುದು ಕಷ್ಟಸಾಧ್ಯ. 2 ವರ್ಷಗಳ ಕಠಿಣ ಪರಿಶ್ರಮದಿಂದ ತಪಸ್‍ನಲ್ಲಿ ಬೇಸ್ ಸಂಸ್ಥೆಯವರು ನೀಡುವ ಶಿಕ್ಷಣ ಪಡೆದು ಈ ಸಾಧನೆ ಮಾಡಿದ್ದಾರೆ.

ಸಾಧನೆ ಮಾಡಿರುವ ಈ ಎಲ್ಲಾ ಮಕ್ಕಳು ಗ್ರಾಮೀಣ ಭಾಗದ ಆರ್ಥಿಕವಾಗಿ ಅಷ್ಟು ಸಶಕ್ತರಾಗಿರುವ ಕುಟುಂಬದಿಂದ ಬಂದವರಾಗಿದ್ದರೂ. ಪ್ರತಿಭೆಯಿಂದ ಇದನ್ನು ಸಾಧಿಸಿದ್ದಾರೆ. ಈ ಎಲ್ಲಾ ಮಕ್ಕಳಿಗೂ ರಾಷ್ಟ್ರೋತ್ಥಾನ ಪರಿಷತ್ ಹಾಗೂ ಬೇಸ್ ಮುಖ್ಯಸ್ಥರಿಂದ ಅಭಿನಂದನೆ ವ್ಯಕ್ತವಾಗಿದೆ. ಇದನ್ನೂ ಓದಿ: ಇಡೀ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಟ್ಟಿದ್ದು ದೇವೇಗೌಡ್ರು: ಹೆಚ್.ಡಿ. ರೇವಣ್ಣ

ಸಾಧನೆಗೈದ ವಿದ್ಯಾರ್ಥಿಗಳು
ಯಶವಂತಗೌಡ, ರಾಮನಗರ ಜಿಲ್ಲೆಯ, ಕನಕಪುರ ತಾಲ್ಲೂಕಿನ ಒಂದು ಪುಟ್ಟ ಗ್ರಾಮ ಗೂಗರೆದೊಡ್ಡಿಯ ನಿವಾಸಿ. ಬಾಲ್ಯದಲ್ಲೇ (ಇವನು ಹುಟ್ಟುವ ಮೊದಲೇ, ತಾಯಿ ಗರ್ಭವತಿಯಾಗಿದ್ದಾಲೆ) ತಂದೆಯನ್ನು ಕಳೆದುಕೊಂಡ ಮಗು. ತಾಯಿ ಧನಲಕ್ಷ್ಮಿ ಈ ಮಗುವನ್ನು ಸಮಾಜದಲ್ಲಿನ ಚುಚ್ಚುಮಾತಿನ ಮಧ್ಯೆ ಸಾಕಿದ್ದು, ಅವರು ಒಂದು ಸಂಸ್ಥೆಯಲ್ಲಿ ಗುಮಾಸ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈತ ತನ್ನ ಪ್ರತಿಭೆಯಿಂದ ಕಠಿಣ ಶ್ರಮದಿಂದ ಈ ಸಾಧನೆ ಮಾಡಿದ್ದಾನೆ.

ಲೋಹಿತ್ ತಳವಾರ, ಮೂಲತಃ ಹಾವೇರಿ ಜಿಲ್ಲೆಯವನು. ತಂದೆ ದರ್ಜಿ ಕೆಲಸ ಮಾಡುತ್ತಿದ್ದರೆ, ತಾಯಿ ಕೂಲಿ ಕೆಲಸ ನಿರ್ವಹಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಲೋಹಿತ್ ಧಾರವಾಡ ಜೆ.ಎನ್.ವಿ. ನಲ್ಲಿ ಕಲಿತು ನಂತರ ತಪಸ್‍ಗೆ ಆಯ್ಕೆಯಾಗಿ ಐಐಟಿಗೆ ಆಯ್ಕೆಯಾಗಿ ಪ್ರವೇಶ ಪಡೆಯಲು ನಿರಂತರ ಶ್ರಮದಿಂದ ಈ ಫಲಿತಾಂಶ ಪಡೆದಿದ್ದಾನೆ.

ಸಾಗರ್ ಹೆಚ್.ಆರ್, ಮೂಲತಃ ತೀರ್ಥಹಳ್ಳಿ ತಾಲೂಕಿನ ಹೊಸಕೇರಿ ಗ್ರಾಮದವನು. ತಂದೆ, ತಾಯಿ ಸಣ್ಣ ಕೃಷಿಕರು. 1 ರಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಪಡೆದು, ತಪಸ್‍ಗೆ ಆಯ್ಕೆಯಾಗಿ ಕನ್ನಡ ಮಾಧ್ಯಮ ಎಂದು ದೃತಿಗೆಡದೆ ತನ್ನ ಆಸಕ್ತಿಯನ್ನು ಹೆಚ್ಚುಮಾಡಿಕೊಂಡು, ತುಂಬಾ ಪರಿಶ್ರಮದಿಂದ ಈ ಫಲಿತಾಂಶವನ್ನು ಪಡೆದಿದ್ದಾನೆ. ಇದನ್ನೂ ಓದಿ: ನೀವೇ ಎತ್ತಾಕ್ತಿರಾ, ಇಲ್ಲಾ ನಾನೇ ಎತ್ತಿ ಹಾಕ್ಲಾ – ತೊಂದ್ರೆ ಕೊಡ್ತಿದ್ದ ವ್ಯಕ್ತಿಯ ವಿರುದ್ಧ ರೇವಣ್ಣ ಆಕ್ರೋಶ

ಇನ್ನುಳಿದ ಎಲ್ಲರೂ ತಮ್ಮ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಬೇಸ್ ಶಿಕ್ಷಕರು ತಿಳಿಸುವ ಪಾಠವನ್ನು ಮನದಟ್ಟುಮಾಡಿಕೊಂಡು, ಅದಕ್ಕನುಗುಣವಾಗಿ ಪರಿಶ್ರಮ ಹಾಕಿ ಉತ್ತಮ ಫಲಿತಾಂಶವನ್ನು ಪಡೆದಿದ್ದಾರೆ.

Related Articles

Leave a Reply

Your email address will not be published. Required fields are marked *