ಬೆಂಗಳೂರು: ರಾಷ್ಟ್ರೀಯ ಯುವ ಪ್ರತಿಷ್ಠಾನದ ಪ್ರಮೋದ್ ಶ್ರೀನಿವಾಸ್ ರಿಂದ ಆನ್ ಲೈನ್ ಕಲಿಕೆಗೆ ಸಮಸ್ಯೆಯಾಗ್ತಿದ್ದ ಮಕ್ಕಳಿಗೆ ಉಚಿತ ಟ್ಯಾಬ್‍ಗಳ ವಿತರಣೆ ಮಾಡಿದ್ರು. ಮೊಬೈಲ್ ಖರೀದಿಸಲಾಗದೇ ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನ, ಶಿಕ್ಷಣದಿಂದ ವಂಚಿತರಾಗ್ತಿದ್ದ ಬಡ ಮಕ್ಕಳಿಗೆ ಟ್ಯಾಬ್ ನೀಡುವ ಮೂಲಕ ಬಡ ಮಕ್ಕಳ ಪಾಲಿಗೆ ನೆರವಾಗಿದ್ದಾರೆ.
Advertisement
ರಾಷ್ಟ್ರೀಯ ಯುವ ಪ್ರತಿಷ್ಠಾನದ ಸಂಸ್ಥಾಪಕ, 29ರ ಹರೆಯದ ಪ್ರಮೋದ್ ಶ್ರೀನಿವಾಸ್, ಬಡ ಮಕ್ಕಳ ಜೀವನದಲ್ಲಿ ಹೊಸ ಭರವಸೆಯನ್ನು ತುಂಬಿದ್ದು, ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ಧೋಬಿ ಘಾಟ್‍ನಲ್ಲಿ ಮಕ್ಕಳ ಕಲಿಕಗಾಗಿ ಹಾಲ್ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ.
Advertisement
ಈ ಹಿಂದುಳಿದ ಪ್ರದೇಶದಲ್ಲಿ ಮಕ್ಕಳ ದುಃಸ್ಥಿತಿಯನ್ನು ನೋಡಿ ಸಂಕಟವಾಯಿತು. ಅಲ್ಲಿ ಪೋಷಕರು ದೈನಂದಿನ ಅಗತ್ಯಗಳನ್ನು ಪೂರೈಸಲು ಹೆಣಗಾಡುತ್ತಿದ್ದಾರೆ. ಹಾಗಾಗಿ ಕಲಿಕೆಗೆ ಅನುಕೂಲವಾಗುವಂತೆ ಅಂತರ್ಜಾಲ ಸಂಪರ್ಕದೊಂದಿಗೆ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಸುಮಾರು 20 ಮಕ್ಕಳಿಗೆ ಶಿಕ್ಷಣ ದೊರೆಯುವಂತೆ ಮಾಡಲು ನಿರ್ಧರಿಸಿದೆ. ಈ ಸಭಾಂಗಣವನ್ನು ಬಳಸಲು ನಾನು ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯ ಅನುಮತಿಗಳನ್ನು ಪಡೆದುಕೊಂಡೆ ಎಂದು ಇಂದಿನ ಆನ್‍ಲೈನ್ ತರಗತಿಗಳ ಉದ್ಘಾಟನೆಯಲ್ಲಿ ಪ್ರಮೋದ್ ತಿಳಿಸಿದರು.
Advertisement
Advertisement
ಆನ್‍ಲೈನ್ ತರಗತಿಗಳನ್ನು ಕರ್ನಾಟಕದ ಕಂದಾಯ ಸಚಿವರಾದ ಶ್ರೀ ಆರ್. ಅಶೋಕ್ ಉದ್ಘಾಟಿಸಿದರು. ವಾಸ್ತವವಾಗಿ, ಪ್ರಮೋದ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಶಿಕ್ಷಕರು ತರಗತಿಗಳನ್ನು ದಿನನಿತ್ಯವೂ ಪೋಸ್ಟ್ ಮಾಡಿದ ಬಳಿಕ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಿದ್ದಾರೆ. ಶಿಕ್ಷಕರು ತಮ್ಮ ಶಾಲಾ ಪಠ್ಯಕ್ರಮವನ್ನು ಅವಲಂಬಿಸಿ ಎಲ್ಲಾ ವಿಷಯಗಳಲ್ಲಿ ಮಕ್ಕಳಿಗೆ ಉಚಿತ ಬೋಧನೆಯನ್ನು ನೀಡುತ್ತಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ದೇವರ ಪೂಜೆ ಬಿಟ್ಟು ಹೋಗಲ್ಲ, ತಾಲಿಬಾನ್ ಉಗ್ರರು ಕೊಂದ್ರೂ ಪರ್ವಾಗಿಲ್ಲ: ಅರ್ಚಕ
ಅನೇಕ ಬಡ ಸಾಮಾಜಿಕ ಆರ್ಥಿಕ ಹಿನ್ನೆಲೆಯಿರುವ ಮಕ್ಕಳಿಗೆ ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ದೊರೆಯುವಂತೆ ಮಾಡುವುದು. ಇನ್ನೂ ಒಂದು ಸವಾಲಾಗಿದೆ. ಇದರ ಯಶಸ್ಸನ್ನು ನೋಡಿದ ನಂತರ, ಪ್ರಮೋದ್ ಇದನ್ನು ಇತರ ಕೆಲವು ಪ್ರದೇಶಗಳಿಗೂ ವಿಸ್ತರಿಸಲು ನಿರ್ಧರಿಸಿದ್ದಾರೆ.