ರಶ್ಮಿಕಾ (Rashmika Mandanna) ಅಂತೂ ಬಾಲಿವುಡ್‌ನಲ್ಲಿ ಸೆಟ್ಲ್ ಆಗಿದ್ದಾರೆ. ಈಗಷ್ಟೇ ಆನಿಮಲ್ ಸಿನಿಮಾ ಮುಗಿಸಿದ್ದಾರೆ, ಇನ್ನು ವಿಜಯ್ ದೇವರಕೊಂಡ (Vijay Devarakonda) ಟರ್ಕಿಯಲ್ಲಿ ಶೂಟಿಂಗ್ ಮುಗಿಸಿ ಬಂದಿದ್ದಾರೆ. ಇಬ್ಬರೂ ಒಂದು ರಿಲ್ಯಾಕ್ಸ್ ಡಿನ್ನರ್ ಮಾಡಿದ್ದಾರೆ. ವಿಶೇಷ ಅಂದ್ರೆ ಡಿನ್ನರ್‌ಲ್ಲಿ ವಿಜಯ್ ಕುಟುಂಬಸ್ಥರೂ ಇದ್ದಾರೆ. ಮೊಬೈಲ್‌ನಲ್ಲಿ ಸೆರೆಯಾಗಿದ್ದಾರೆ. ಈ ಮೀಟಿಂಗ್ ರಹಸ್ಯ ಏನು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಕೆಲವೊಮ್ಮೆ ನೇರವಾಗಿ, ಇನ್ನೊಮ್ಮೆ ಸೀಕ್ರೇಟಾಗಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಜೊತೆ ಜೊತೆಯಾಗಿ ಕಾಣಿಸ್ಕೊಳ್ತಾರೆ. ಇದುವೇ ಅಭಿಮಾನಿಗಳಿಗೆ ಸಾಕಷ್ಟು ತಲೆನೋವು ಆಗಿರುವ ವಿಷಯ. ಕೋಸ್ಟಾರ್‌ಗಳು ಸಿನಿಮಾ ಮಾಡ್ತಿರುವಾಗ ಒಟ್ಟಿಗೆ ಕಾಣಿಸ್ಕೊಳ್ಳೋದೆಲ್ಲಾ ಸಾಮಾನ್ಯ. ಆದರೆ ಮುಗಿದ್ಮೇಲೂ ಜೊತೆಯಾಗಿ ಹಿತವಾಗಿ ಎಂದು ಸುತ್ತಾಡಿದ್ರೆ ಏನನ್ನೋದು? ಅದೇ ಆಗ್ಬಿಟ್ಟಿದೆ ಈಗ. ಹೈದ್ರಾಬಾದ್‌ನಲ್ಲಿ ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ಫ್ಯಾಮಿಲಿ (Family) ಸಮೇತ ಡಿನ್ನರ್ ಮಾಡುವ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ:ಕೆಂಪು ಬಣ್ಣದ ಸೀರೆಯಲ್ಲಿ ಗ್ಲ್ಯಾಮರಸ್ ಆಗಿ ಮಿಂಚಿದ ಮಾನ್ವಿತಾ
ರಶ್ಮಿಕಾ ನಿಂತಲ್ಲಿ ನಿಲ್ಲಲ್ಲ ಕೂತಲ್ಲಿ ಕೂರಲ್ಲ. ಹೀಗಾಗೇ ಈಗ ತಗ್ಲಾಕ್ಕೊಂಡಿದ್ದಾರೆ. ಊಟ (Dinner) ಮಾಡ್ತಾ ಕುರ್ಚಿಯಿಂದ ಎದ್ದು ನಿಂತಲ್ಲೇ ಸಣ್ಣದೊಂದು ಸ್ಟೆಪ್ ಹಾಕಿದ್ದಾರೆ. ಆಗಲೇ ದೂರದ ಟೇಬಲ್‌ನಲ್ಲಿದ್ದ ಹುಡುಗರ ಮೊಬೈನಲ್‌ನಲ್ಲಿ ಸೆರೆಯಾಗಿದ್ದು. ಪಕ್ಕದಲ್ಲಿ ನೋಡಿದ್ರೆ ಇದ್ದಿದ್ದು ವಿಜಯ್ ದೇವರಕೊಂಡ. ಅವರ ಪಕ್ಕದಲ್ಲಿ ಇಡೀ ದೇವರಕೊಂಡ ಫ್ಯಾಮಿಲಿ.
ಅದೇನೇ ಇದ್ರೂ ರಶ್ಮಿಕಾ ಹಾಗೂ ವಿಜಯ್ ಬಗ್ಗೆ ಗುಸುಗುಸು ಹೆಚ್ಚಾಗೋದಕ್ಕೂ ಹೀಗೆ ಕಾಣಿಸ್ಕೊಂಡಿದ್ದಕ್ಕೂ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಆದರೂ ಫ್ಯಾನ್ಸ್ ಕೇಳ್ತಿದ್ದಾರೆ. ಬೆಸ್ಟ್ ಫ್ರೆಂಡ್ಸ್ ಜೊತೆಯಾಗಿ ಊಟ ಮಾಡಿದ್ರೂ ತಪ್ಪೇನ್ರಪ್ಪಾ ಎಂದು. ಇದಕ್ಕೆ ರಶ್ಮಿಮಾ ಮತ್ತು ವಿಜಯ್ ದೇವರಕೊಂಡ ಅಷ್ಟೇ ಉತ್ತರ ನೀಡಬೇಕಿದೆ.