– ಈಗಿನವರು ಬೇಗ ಬೆಳೆಯಬೇಕು, ಹಣ ಗಳಿಸಬೇಕು ಅನ್ನೋ ಮನಸ್ಥಿತಿಯಲ್ಲಿದ್ದಾರೆಂದು ಬೇಸರ
ಕೊಡವ ಸಮುದಾಯ ಎಲ್ಲರನ್ನೂ ಬೆಂಬಲಿಸಿದೆ, ಈ ಕುರಿತು ನಮ್ಮ ಸಮುದಾಯದವರು ಮಾತನಾಡುತ್ತಾರೆ ಎಂದು ಹಿರಿಯ ನಟಿ ಪ್ರೇಮ (Actress Prema) ತಿಳಿಸಿದರು.
ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಮೊದಲು ಬಂದಿದ್ದು ನಾನೇ ಎಂಬ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹೇಳಿಕೆ ಸಂಬಂಧ `ಪಬ್ಲಿಕ್ ಟಿವಿ’ ಜೊತೆಗೆ ಮಾತನಾಡಿದ ಅವರು, ನಡೆದಿರುವ ವಿಷಯದ ಬಗ್ಗೆ ಜನರು ಕಾಮೆಂಟ್ಸ್ ಮೂಲಕ ಅಭಿಪ್ರಾಯ ತಿಳಿಸುತ್ತಿದ್ದಾರೆ, ನಾನೇನು ಹೇಳಬೇಕಾಗಿಲ್ಲ. ಒಬ್ಬೊಬ್ಬರ ಭಾವನೆಗಳು ಒಂದೊಂದು ರೀತಿಯಾಗಿರುತ್ತೆ. ಅವರು ಈ ಸಮುದಾಯದ ವಿಷಯವನ್ನು ಯಾಕೆ ಮಾತನಾಡಿದ್ರೋ ನನಗೂ ಗೊತ್ತಾಗಿಲ್ಲ. ಆದರೆ ನಮ್ಮ ಸಮುದಾಯವನ್ನು ನಾನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದರು.ಇದನ್ನೂ ಓದಿ: ರಶ್ಮಿಕಾ ಬೈ ಮಿಸ್ ಆಗಿ ಹೇಳಿರಬೇಕು, ಕ್ಷಮಿಸಿಬಿಡೋಣ: ನಟಿ ಹರ್ಷಿಕಾ ಪೂಣಚ್ಚ
ಕನ್ನಡ ಚಿತ್ರರಂಗಕ್ಕೆ ಕೊಡವ ಸಮುದಾಯದಿಂದ ನನಗಿಂತ ಮುಂಚೆ ಚಾಮರಾಜಪೇಟೆ ಮೂಲದ ಶಶಿಕಲಾ ಎಂಬುವವರು ಬಂದಿದ್ದರು. ಅವರು ಪೋಷಕ ಪಾತ್ರದಲ್ಲಿ ಮೊದಲು ಕಾಣಿಸಿಕೊಂಡಿದ್ದರು. ಅದಾದ ಬಳಿಕ ನಾನು ನಟಿಯಾಗಿ ಬಂದೆ. ನಂತ್ರ ಕೊಡವ ಸಮುದಾಯದ ಹಲವಾರು ಜನರು ಚಿತ್ರರಂಗಕ್ಕೆ ಬಂದಿದ್ದಾರೆ ಎಂದು ಹೇಳಿದರು.
ನಟಿ ರಶ್ಮಿಕಾ ಮಂದಣ್ಣ ಹೇಳಿಕೆ ಕುರಿತು ಮಾತನಾಡಲು ನಮ್ಮ ಕೊಡವ ಸಮುದಾಯವಿದೆ, ಅವರು ಚರ್ಚೆ ಮಾಡಿ, ಮಾತನಾಡುತ್ತಾರೆ. ಈ ಬಗ್ಗೆ ಮಾತಾಡುವಷ್ಟು ದೊಡ್ಡವಳು ನಾನಲ್ಲ. ಅಷ್ಟೊಂದು ದೊಡ್ಡ ವ್ಯಕ್ತಿಯೂ ನಾನಲ್ಲ. ನನಗಿನ್ನೂ ಕಲಿಯೋಕೆ ತುಂಬಾ ಇದೆ. ಆದರೆ ಮೊದಲಿನಿಂದಲೂ ಕೊಡವ ಸಮುದಾಯದವರು ಎಲ್ಲರನ್ನೂ ಬೆಂಬಲಿಸಿದ್ದಾರೆ ಎಂದರು.
ಈಗಿನವರ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ನಾನು ಮೊದಲಿನಿಂದಲೂ ನನಗೆ ಕೊಟ್ಟಿರುವ ಪಾತ್ರವನ್ನು ಸರಿಯಾಗಿ ನಿಭಾಯಿಸಿಕೊಂಡು ಬಂದಿದ್ದೇನೆ. ಅದರ ಹೊರತಾಗಿ ನಿರ್ದೇಶಕರಿಗೆ, ನಿರ್ಮಾಪಕರಿಗೆ ಯಾವತ್ತೂ ಯಾವುದೇ ರೀತಿಯಲ್ಲಿಯೂ ನೋಯಿಸಿಲ್ಲ. ಚಿತ್ರರಂಗದಲ್ಲಿ ನನಗಿಂತ ಕಲ್ಪನಾ, ಆರತಿ, ಮಂಜುಳಾ, ಭಾರತಿ ಇವರೆಲ್ಲರೂ ಅಗ್ರ ಸ್ಥಾನದಲ್ಲಿರುವ ನಟಿಯರು. ಇನ್ನೂ ನಾವೆಲ್ಲರು ರಾಜಕುಮಾರ್ ಸರ್, ವಿಷ್ಟುವರ್ಧನ್ ಸರ್ ಅವರನ್ನು ನೋಡಿಕೊಂಡು ಬೆಳೆದಿದ್ದೇವೆ. ಆದರೆ ಈಗಿನವರೂ ಬೇಗ ಬೆಳೆಯಬೇಕು, ಹಣ ಗಳಿಸಬೇಕು, ಕಾರು ತೆಗೆದುಕೊಳ್ಳಬೇಕು ಅನ್ನೋ ಮನಸ್ಥಿತಿಯಲ್ಲಿದ್ದಾರೆ. ಮೊದಲು ಯಾವುದೇ ಕೆಲಸದಲ್ಲಿಯೂ ಎಲ್ಲರೂ ತಮ್ಮದೇ ಆದ ಸ್ಥಾನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.ಇದನ್ನೂ ಓದಿ:ಕೊಡವ ಕಮ್ಯೂನಿಟಿಯಿಂದ ಇಂಡಸ್ಟ್ರಿಗೆ ಬಂದಿದ್ದು ನಾನೇ ಫಸ್ಟ್ – ರಶ್ಮಿಕಾ ಮತ್ತೊಂದು ಯಡವಟ್ಟು