ವಿದೇಶದಲ್ಲಿ ರಶ್ಮಿಕಾ ಹುಟ್ಟು ಹಬ್ಬ: ವಿಜಯ್ ದೇವರಕೊಂಡ ಭಾಗಿ

Public TV
2 Min Read
Rashmika Mandanna 2

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಈ ಬಾರಿಯ ಹುಟ್ಟು ಹಬ್ಬವನ್ನು ವಿದೇಶದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟು ಹಬ್ಬದ ಒಂದು ದಿನ ಅಬುಧಾಬಿಯಲ್ಲಿ ಅವರು ಕಾಣಿಸಿಕೊಂಡಿದ್ದರು. ಆದರೆ, ಹುಟ್ಟು ಹಬ್ಬದ ಪಾರ್ಟಿ ಯುಎಸ್‍ಎಗೆ ಶಿಫ್ಟ್ ಆಗಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಕಾರಣ ವಿಜಯ್ ದೇವರಕೊಂಡ (Vijay Devarakonda) ಎನ್ನುವ ಮಾತೂ ಕೇಳಿ ಬಂದಿದೆ.

Rashmika Mandanna 1

ಇಂದು ವಿಜಯ್ ದೇವರಕೊಂಡ ನಟನೆಯ  ಫ್ಯಾಮಿಲಿ ಸ್ಟಾರ್ ಸಿನಿಮಾ ರಿಲೀಸ್ ಆಗುತ್ತಿದೆ. ಯುಎಸ್.ಎನಲ್ಲಿ ಅದರ ಸ್ಪೆಷಲ್ ಶೋ ಆಯೋಜನೆ ಆಗಿದೆ. ಅದರಲ್ಲಿ ವಿಜಯ್ ದೇವರಕೊಂಡ ಕೂಡ ಭಾಗಿಯಾಗಿದ್ದಾರೆ. ಹಾಗಾಗಿ ಹುಟ್ಟು ಹಬ್ಬವನ್ನು ಯುಎಸ್.ಎನಲ್ಲಿ ಆಚರಿಸಲಾಗುತ್ತಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ರಶ್ಮಿಕಾ ಪೋಸ್ಟ್ ಮಾಡಿದ ಪೋಸ್ಟರ್ ನಲ್ಲಿ ನವಿಲು ಇದೆ. ವಿಜಯ್ ದೇವರಕೊಂಡ ಹಾಕಿರೋ ಪೋಸ್ಟ್ ನಲ್ಲೂ ಅದೇ ನವಿಲಿದೆ. ಹಾಗಾಗಿ ಇಬ್ಬರೂ ಒಟ್ಟಿಗೆ ಇದ್ದಾರೆ ಎಂದು ಊಹಿಸಲಾಗಿದೆ.

rashmika mandanna 3

ಇಂದು ರಶ್ಮಿಕಾ ಮಂದಣ್ಣ (Rashmika Mandanna) ಅವರ ಹುಟ್ಟು ಹಬ್ಬ. ಈ ಬಾರಿಯ ಹುಟ್ಟು ಹಬ್ಬಕ್ಕೆ ಹಲವಾರು ಸರ್ ಪ್ರೈಸ್ ಗಳಿವೆ. ಈ ಎಲ್ಲ ಸರ್ ಪ್ರೈಸ್ ಗಳ ಮಧ್ಯೆ ರಶ್ಮಿಕಾ ವಿದೇಶದಲ್ಲಿದ್ದಾರೆ. ಇದು ರಶ್ಮಿಕಾ ಅವರ 28ನೇ ವರ್ಷದ ಹುಟ್ಟು ಹಬ್ಬವಾಗಿದೆ. ತಮ್ಮ ಬರ್ತ್‌ಡೇ (Birthday) ದಿನವೇ ಅವರ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್ ಸಿಗಲಿದೆ ಎಂದು ಹೇಳಲಾಗುತ್ತಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ಪುಷ್ಪ ಬೆಡಗಿಯ ಹೊಸ ಸಿನಿಮಾದ ಅಪ್‌ಡೇಟ್ ಸಿಗಲಿದೆ.

rashmika mandanna 9

ಕನ್ನಡತಿ ರಶ್ಮಿಕಾ ಮಂದಣ್ಣ ತಮ್ಮ ಜನ್ಮದಿನದಂದು ತಾವು ಅಭಿನಯಿಸುತ್ತಿರುವ ಬಹುನಿರೀಕ್ಷಿತ ‘ದಿ ಗರ್ಲ್‌ಫ್ರೆಂಡ್’ (The Girlfriend) ಚಿತ್ರದ ಮೊದಲ ಟೀಸರ್ ರಿಲೀಸ್ ಆಗಲಿದೆ. ಈ ಚಿತ್ರದ ಕಥೆ ಏನು? ಇದು ಎಂತಹ ಸಿನಿಮಾ, ಇದರಲ್ಲಿ ನಟಿ ರಶ್ಮಿಕಾ ಮಂದಣ್ಣ ಮಾಡುತ್ತಿರುವ ಪಾತ್ರವಾದರೂ ಯಾವುದು ಎಂಬ ಕುತೂಹಲಕ್ಕೆ ಉತ್ತರ ಚಿತ್ರದ ಟೀಸರ್ ಮೂಲಕ ಸಿಗಲಿದೆ. ಈ ಸಿನಿಮಾ ಬಹುಭಾಷೆಗಳಲ್ಲಿ ತೆರೆಗೆ ಬರಲಿದೆ. ಎಲ್ಲಾ ಭಾಷೆಗಳಲ್ಲೂ ನಟಿ ರಶ್ಮಿಕಾನೇ ಧ್ವನಿ ನೀಡಿರೋದು ಮತ್ತೊಂದು ಹೈಲೆಟ್ ಆಗಿದೆ.

 

‘ದಿ ಗರ್ಲ್‌ಫ್ರೆಂಡ್’ ಸಿನಿಮಾ ಒಂದೇ ಅಲ್ಲ, ಇದರ ಜೊತೆಗೆ ಹೊಸ ಸಿನಿಮಾ ಅನೌನ್ಸ್ ಕೂಡ ಆಗಲಿದೆ. ಈ ವರ್ಷ ಏನೆಲ್ಲಾ ಅಪ್‌ಡೇಟ್ ಸಿಗಲಿದೆ ಎಂಬುದನ್ನ ಕಾದುನೋಡಬೇಕಿದೆ. ಸದ್ಯ ಪುಷ್ಪ 2, ಅನಿಮಲ್ ಪಾರ್ಕ್, ರೈನ್‌ಬೋ, ದಿ ಗರ್ಲ್‌ಫ್ರೆಂಡ್, ಚಾವಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ.

Share This Article