ಚೆನ್ನೈ: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಚೆನ್ನೈನಲ್ಲಿ ಕುರಿ ಕಾಯುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ರಶ್ಮಿಕಾ ಹಳ್ಳಿ ಹುಡುಗಿಯಂತೆ ಲಂಗ ದಾವಣಿ ಧರಿಸಿ, ಕೈಯಲ್ಲಿ ಉದ್ದನೆಯ ಕೋಲು ಹಿಡಿದು ಕುರಿಗಳನ್ನು ಕಾಯುತ್ತಿದ್ದಾರೆ. ಈ ವೇಳೆ ಅವರು ಕೈಯಲ್ಲಿ ಕೋಲು ಹಿಡಿದುಕೊಂಡು ಕ್ಯಾಮೆರಾಗೆ ಪೋಸ್ ಕೂಡ ನೀಡಿದ್ದಾರೆ.
Advertisement
ತಮಿಳು ಚಿತ್ರಕ್ಕಾಗಿ ರಶ್ಮಿಕಾ ಕುರಿ ಕಾಯುತ್ತಿದ್ದಾರೆ. ಈ ಮೂಲಕ ಸಿನಿಮಾದ ಪಾತ್ರಕ್ಕಾಗಿ ರಶ್ಮಿಕಾ ಸಂಪೂರ್ಣ ಬದಲಾಗಿದ್ದಾರೆ. ಈ ಫೋಟೋ ನೋಡುತ್ತಿದ್ದರೆ ಚಿತ್ರದಲ್ಲಿ ರಶ್ಮಿಕಾ ಡಿ ಗ್ಲಾಮ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
Advertisement
ಕುರಿ ಕಾಯುತ್ತಿರುವ ಫೋಟೋಗಳ ಜೊತೆಗೆ ರಶ್ಮಿಕಾ ತರಕಾರಿ ಮಾರುವ ಫೋಟೋ ಕೂಡ ರಿವೀಲ್ ಆಗಿದೆ. ಅಭಿಮಾನಿಗಳಿಗೆ ತಮಿಳು ಚಿತ್ರದಲ್ಲಿ ರಶ್ಮಿಕಾ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲವಿತ್ತು. ಆದರೆ ಈಗ ರಿವೀಲ್ ಆಗಿರುವ ಫೋಟೋಗಳ ಮೂಲಕ ರಶ್ಮಿಕಾ ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಮಿಂಚಲಿದ್ದಾರೆ.
Advertisement
ತಮಿಳು ನಟ ಕಾರ್ತಿಗೆ ರಶ್ಮಿಕಾ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ `ಸುಲ್ತಾನ್’ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಈ ಚಿತ್ರಕ್ಕೆ ಭಾಗ್ಯರಾಜ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.