ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಏನೇ ಮಾಡಿದ್ರೂ ಅದು ಟ್ರೆಂಡ್ ಆಗುತ್ತೆ. ನಟಿ ರಶ್ಮಿಕಾ ನಯಾ ಹೇರ್‌ಸ್ಟೈಲ್‌ನಲ್ಲಿ ಮಾಡಿಸಿರುವ ಫೋಟೋಶೂಟ್ ಹಲ್‌ಚಲ್ ಮಾಡ್ತಿದೆ. ರಶ್ಮಿಕಾ ಈ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಆದ್ರೆ ಇದು ಯಾವುದೇ ಸಿನಿಮಾಗಾಗಿ ಅಲ್ಲ, ಬದಲಾಗಿ ಮ್ಯಾಗಜಿನ್‌ವೊಂದಕ್ಕೆ ರಶ್ಮಿಕಾ ಮಾಡಿಸಿರುವ ಫೋಟೋಶೂಟ್.
ಹೌದು, `ಡರ್ಟಿ ಕಟ್ 25′ ಎನ್ನುವ ಮ್ಯಾಗಜಿನ್‌ನ ಮುಖಪುಟಕ್ಕೆ ನಟಿ ರಶ್ಮಿಕಾ ಮಾಡಿಸಿರುವ ಫೋಟೋಶೂಟ್ ಸದ್ಯ ಟ್ರೆಂಡಿಂಗ್‌ನಲ್ಲಿದೆ. ರಶ್ಮಿಕಾ ಗುರುತೇ ಸಿಗದಷ್ಟು ಮಟ್ಟಿಗೆ ಆ ಫೋಟೋಶೂಟ್‌ನಲ್ಲಿ ಕಾಣಿಸುತ್ತಿದ್ದಾರೆ. ಈ ಹಿಂದೆಂದೂ ಕಾಣಿಸಿಕೊಳ್ಳದ ಲುಕ್‌ನಲ್ಲಿ ರಶ್ಮಿಕಾ ಮಂದಣ್ಣ ಗಮನ ಸೆಳೆಯುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ನಟಿ ರಶ್ಮಿಕಾ ಮಂದಣ್ಣ ಬಗೆ ಬಗೆಯ ಸಿನಿಮಾಗಳನ್ನ ಮಾಡುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ನಟನೆಯ ಬಾಲಿವುಡ್‌ನ ಸಿಕಂದರ್ ಸಿನಿಮಾ ಸೋಲು ದೊಡ್ಡ ಹೊಡೆತವನ್ನೇ ಕೊಟ್ಟಿದೆ. ರಶ್ಮಿಕಾ ಇದೀಗ ಮಹಿಳಾ ಪ್ರಧಾನ ಸಿನಿಮಾಗಳನ್ನ ಮಾಡುವ ಛಲ ತೊಟ್ಟಿದ್ದಾರೆ. ಈಗಾಗಲೇ ಮೈಸಾ ಸಿನಿಮಾದ ಫಸ್ಟ್‌ಲುಕ್ ರಿಲೀಸ್ ಆಗಿದೆ. ರಕ್ತಸಿಕ್ತ ಅವತಾರದಲ್ಲಿ ರಶ್ಮಿಕಾ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
`ಡರ್ಟಿ ಕಟ್ 25′ ಮ್ಯಾಗಜಿನ್‌ನ ಮುಖಪುಟಕ್ಕೆ ರಶ್ಮಿಕಾ ಮಾಡಿಸಿರೋ ಹೊಸ ಫೋಟೋಶೂಟ್ ಸದ್ಯ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಮುಂದಿನ ದಿನಗಳಲ್ಲಿ ರಶ್ಮಿಕಾ ಯಾವ ರೀತಿಯ ಸಿನಿಮಾಗಳ ಆಯ್ಕೆ ಮಾಡಿಕೊಳ್ಳುತ್ತಾರೋ ಕಾದು ನೋಡಬೇಕಿದೆ.