‘ಅನಿಮಲ್’ (Animal) ಬ್ಯೂಟಿ ರಶ್ಮಿಕಾ ಸದ್ಯ ‘ಪುಷ್ಪ 2’ (Pushpa 2) ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ವರ್ಕೌಟ್ ವಿಡಿಯೋ ಶೇರ್ ಮಾಡಿ ಅಭಿಮಾನಿಗಳಿಗೆ ಶಪಥ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna) ವರ್ಕೌಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಒಟಿಟಿಗೆ ಬಂದ ಫೈಟರ್: ಹೃತಿಕ್-ದೀಪಿಕಾ ಕಾಂಬಿನೇಷನ್ ಚಿತ್ರ
Advertisement
ನಾನು ವರ್ಕೌಟ್ ವಿಡಿಯೋ ಹಂಚಿಕೊಳ್ಳದೇ ಸ್ವಲ್ಪ ಸಮಯ ಆಯಿತು ಅಲ್ಲವೇ? ನಾನು ಸರಿಯಾಗಿ ವರ್ಕೌಟ್ ಮಾಡದೇ 4-5 ತಿಂಗಳಾಗಿತ್ತು. ಆದರೆ ನಾನೀಗ ಮತ್ತೆ ಮರಳಿದ್ದೇನೆ. ನಿಮಗೆ ಸ್ಫೂರ್ತಿ ನೀಡುವ ಉದ್ದೇಶದಿಂದ ಇನ್ಮುಂದೆ ಇಂಥ ಅನೇಕ ವಿಡಿಯೋಗಳನ್ನು ಹಂಚಿಕೊಳ್ಳುತ್ತೇನೆ ಎಂದು ರಶ್ಮಿಕಾ ಮಂದಣ್ಣ ಅವರು ಪೋಸ್ಟ್ ಮಾಡಿದ್ದಾರೆ.
Advertisement
View this post on Instagram
Advertisement
ಈ ಹಿಂದೆ ರಶ್ಮಿಕಾ, ಸದಾ ಒಂದಲ್ಲಾ ಒಂದು ವರ್ಕೌಟ್ ವಿಡಿಯೋ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಹೆಲ್ತ್ ಟಿಪ್ಸ್ ನೀಡುತ್ತಿದ್ದರು. ಈಗ ಗ್ಯಾಪ್ ನಂತರ ಮತ್ತೆ ವರ್ಕೌಟ್ ವಿಡಿಯೋ ಶೇರ್ ಮಾಡಿದ್ದಾರೆ.
Advertisement
ರಶ್ಮಿಕಾ ಮಂದಣ್ಣ ಅನಿಮಲ್ 2, ಪುಷ್ಪ 2, ರೈನ್‌ಬೋ, ಗರ್ಲ್‌ಫ್ರೆಂಡ್ ಸೇರಿದಂತೆ ಹಲವು ಸಿನಿಮಾಗಳಿವೆ.