ಬಂಗಾರ ಬಣ್ಣದ ಕಾಸ್ಟ್ಯೂಮ್ ಧರಿಸಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna), ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ‘ನಾನು ಗೋಲ್ಡನ್ ಗರ್ಲ್’ (Golden Girl) ಎಂದು ತಮ್ಮನ್ನು ತಾವೇ ಕರೆದುಕೊಂಡಿದ್ದಾರೆ. ಆ ಕಾಸ್ಟ್ಯೂಮ್ ನಲ್ಲಿ ಸಖತ್ ಸೆಕ್ಸಿಯಾಗಿ ರಶ್ಮಿಕಾ ಕಾಣಿಸಿದ್ದು, ಟ್ರೋಲ್ ಕೂಡ ಆಗುತ್ತಿದ್ದಾರೆ. ಗುಡ್ ಬೈ ಸಿನಿಮಾದ ಪ್ರಚಾರಕ್ಕಾಗಿ ಈ ಕಾಸ್ಟ್ಯೂಮ್ ಅನ್ನು ಧರಿಸಿದ್ದು, ಆ ಸಿನಿಮಾದ ಕೆಲ ಅಪ್ ಡೇಟ್ ಕೂಡ ನೀಡಿದ್ದಾರೆ.
Advertisement
ಮೊನ್ನೆಯಷ್ಟೇ ಅವರ ಹೊಸ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೇನಿದು ಹಾಟ್ ಅವತಾರ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು. ಅಲ್ಲದೇ, ಆ ಫೋಟೋಗಳಿಗೆ ನಾನಾ ರೀತಿಯ ಸಂದೇಶಗಳನ್ನೂ ಕಳುಹಿಸಿದ್ದರು. ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ಮೋದಿ, ಹೇಮಾ ಮಾಲಿನಿಗೆ ರಾಖಿ ಸಾವಂತ್ ಥ್ಯಾಂಕ್ಸ್ ಹೇಳಿದ್ದೇಕೆ?
Advertisement
Advertisement
ರಶ್ಮಿಕಾ ಮಂದಣ್ಣ ತಮಿಳು ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದು, ಯಾವುದಕ್ಕಾಗಿ ಈ ಫೋಟೋ ಶೂಟ್ ಮಾಡಿಸಿದ್ದಾರೆ ಎನ್ನುವ ವಿವರ ಸಿಕ್ಕಿಲ್ಲ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಶ್ಮಿಕಾ, ತಾವೇ ಟ್ರೋಲ್ ಮಾಡಲು ಪ್ರೇರೇಪಿಸಿದ್ದಾರೆ. ನೀಲಿ ಬಣ್ಣದ ಡೆನಿಮ್ ನಲ್ಲಿ ಸಖತ್ ಆಗಿಯೇ ಕಂಡಿದ್ದಾರೆ. ಅವರ ಈ ಲುಕ್ ಗೆ ಪಡ್ಡೆಗಳು ಫಿದಾ ಆಗಿದ್ದಾರೆ. ಕೆಲವರು ಅಚ್ಚರಿಯನ್ನೂ ವ್ಯಕ್ತ ಪಡಿಸಿದ್ದಾರೆ.
Advertisement
ರಶ್ಮಿಕಾ ಇದೀಗ ಕೇವಲ ದಕ್ಷಿಣದ ನಟಿಯಾಗಿ ಉಳಿದುಕೊಂಡಿಲ್ಲ. ಬಾಲಿವುಡ್ ಗೂ ಹಾರಿದ್ದಾರೆ. ಗುಡ್ ಬೈ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಮೆಚ್ಚುಗೆಯ ಮಹಾಮಳೆಯೇ ಸುರಿದಿದೆ. ಹಾಗಾಗಿಯೇ ಸಹಜವಾಗಿಯೇ ರಶ್ಮಿಕಾ ಖುಷಿಯಲ್ಲಿದ್ದರು. ಈ ಸಿನಿಮಾ ತಮಗೊಂದು ಬ್ರೇಕ್ ನೀಡಬಹುದು ಎನ್ನುವ ನಂಬಿಕೆಯೂ ಅವರದ್ದು.
ಗುಡ್ ಬೈ (Good Bye) ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಅಮಿತಾಭ್ ಬಚ್ಚನ್ (Amitabh Bachchan) ಜೊತೆ ರಶ್ಮಿಕಾ ನಟಿಸಿದ್ದಾರೆ. ಸ್ವತಃ ಅಮಿತಾಭ್ ಅವರೇ ರಶ್ಮಿಕಾ ಜೊತೆಗಿರುವ ಫೋಟೋವೊಂದನ್ನು ಈ ಹಿಂದೆ ಹಂಚಿಕೊಂಡಿದ್ದರು. ಈ ಸಿನಿಮಾದಲ್ಲಿ ಅಮಿತಾಭ್ ಗೆ ಮಗಳಾಗಿ ರಶ್ಮಿಕಾ ನಟಿಸಿದ್ದಾರೆ. ಇನ್ನಷ್ಟೇ ಸಿನಿಮಾ ರಿಲೀಸ್ ಆಗಲಿದ್ದು, ಆ ಸಿನಿಮಾದ ಪ್ರಚಾರದಲ್ಲೂ ರಶ್ಮಿಕಾ ತೊಡಗಿದ್ದಾರೆ.