ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್ ಪೇಜ್ ನೋಡಿದವರು ಅಚ್ಚರಿ ಮತ್ತು ಕುತೂಹಲದಿಂದ ಆ ಪೋಸ್ಟ್ ಅನ್ನು ನೋಡಿದ್ದರು. ರಶ್ಮಿಕಾ ತಮ್ಮ ಹೆಸರನ್ನು ಉಲ್ಟಾ ಬರೆಯುವುದರ ಮೂಲಕ ಎಲ್ಲರಲ್ಲೂ ಪ್ರಶ್ನೆ ಮೂಡಿಸಿದ್ದರು. ಈ ರೀತಿ ಪೋಸ್ಟ್ ಮಾಡಲು ಕಾರಣ ಏನಿರಬಹುದು ಎನ್ನುವ ಚರ್ಚೆ ಕೂಡ ನಡೆಯಿತು. ಒಪ್ಪಿಕೊಂಡ ಸಿನಿಮಾಗಳು ದಬ್ಬಾಕಿಕೊಂಡವು ಅಂತ ಹಾಗೆ ಮಾಡಿದ್ರಾ ಎನ್ನುವ ಪ್ರಶ್ನೆ ಕೂಡ ಮೂಡಿತ್ತು. ಇನ್ನೂ ಕೆಲವರು ಟ್ರೋಲ್ ಗೆ ವ್ಯಂಗ್ಯ ಮಾಡಲು ಆ ರೀತಿ ಮಾಡಿದ್ರಾ ಎಂದು ಹೇಳಲಾಗಿತ್ತು.
Advertisement
ಆದರೆ, ರಶ್ಮಿಕಾ ತಮ್ಮ ಹೆಸರನ್ನು ಉಲ್ಟಾ ನೇತು ಹಾಕಿದ್ದಕ್ಕೆ ಕಾರಣ ಬೇರೆ ಇದೆ. ಅವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿ ಎಂದು ಹೇಳುವ ಅಭಿಯಾನವನ್ನು ಆರಂಭಿಸಿದ್ದು. ಅಕ್ಷರ ಬಾರದ ಹೆಣ್ಣುಮಕ್ಕಳಿಗೆ ಅಕ್ಷರಗಳು ಉಲ್ಟಾ ಕಾಣುತ್ತವೆ ಎಂದು ಹೇಳುವುದಕ್ಕಾಗಿ ಅವರು ತಮ್ಮ ಹೆಸರನ್ನು ಉಲ್ಟಾ ಬರೆದಿದ್ದರು. ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಶ್ಮಿಕಾ ಬಗ್ಗೆ ಟ್ರೋಲ್ ಮಾಡುತ್ತಿದ್ದವರೂ ಈಗ ಮೆಚ್ಚಿಕೊಂಡಿದ್ದಾರೆ.
Advertisement
Advertisement
ಹೌದು, ಓದು ಬಾರದ ಹೆಣ್ಣು ಮಕ್ಕಳ ಪರ ರಶ್ಮಿಕಾ ಅಭಿಯಾನ ಶುರು ಮಾಡಿದ್ದಾರೆ. ಪ್ರತಿ ಹೆಣ್ಣು ಮಗುವಿಗೂ ಶಿಕ್ಷಣ ಕೊಡಿ ಎಂದು ಸಾರುತ್ತಾರೆ. ಈ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ. ರಶ್ಮಿಕಾ ಅವರ ಈ ಅಭಿಯಾನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂತಹ ಕೆಲಸಗಳಿಗಾಗಿ ನಾವು ನಿಮ್ಮನ್ನು ಮೆಚ್ಚಿಕೊಳ್ಳುತ್ತೇವೆ ಎಂದು ವಿರೋಧಿಗಳು ಕೂಡ ಕಾಮೆಂಟ್ ಮಾಡಿದ್ದಾರೆ.
Advertisement
ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಸಲ್ಲದ ಕಾರಣಕ್ಕಾಗಿ ಟ್ರೋಲ್ ಆಗುತ್ತಿದ್ದರು. ಕಳೆದೊಂದು ತಿಂಗಳಿನಿಂದ ಸಿನಿಮಾ ರಂಗದಿಂದ ಬ್ಯಾನ್ ಮಾಡಿ ಅನ್ನುವ ಒತ್ತಾಯವೂ ಕೇಳಿ ಬಂತು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿದ್ದರು ರಶ್ಮಿಕಾ. ಇದೀಗ ಹೆಣ್ಣು ಮಕ್ಕಳ ಶಿಕ್ಷಣ ಅಭಿಯಾನದ ಮೂಲಕ ಎಲ್ಲರ ಮೆಚ್ಚಿಗೆಗೂ ಪಾತ್ರರಾಗಿದ್ದಾರೆ.