ಕನ್ನಡದ ಹೆಸರಾಂತ ನಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ಅವರ ಮ್ಯಾನೇಜರ್ ನಿಂದಲೇ ಮೋಸವಾದ (Cheating) ಸುದ್ದಿ ಬೆಳಕಿಗೆ ಬಂದಿದೆ. ರಶ್ಮಿಕಾ ಜೊತೆ ಮೊದಲಿನಿಂದಲೂ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ವ್ಯಕ್ತಿಯೊಬ್ಬ ಹಣಕಾಸಿನ ವಿಷಯದಲ್ಲಿ ರಶ್ಮಿಕಾಗೆ ಮೋಸ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ರಶ್ಮಿಕಾ ಮಂದಣ್ಣರ ಎಲ್ಲ ವ್ಯವಹಾರಗಳನ್ನು ಇದೇ ಮ್ಯಾನೇಜರ್ (Manager) ನೋಡಿಕೊಳ್ಳುತ್ತಿದ್ದ ಎಂದು ಹೇಳಲಾಗುತ್ತಿದೆ. ರಶ್ಮಿಕಾ ಪ್ರವಾಸ, ಶೂಟಿಂಗ್ ಡೇಟ್, ಸಂಭಾವನೆ ಹೀಗೆ ನಟಿಯ ಸಿನಿಮಾ ಸಂಬಂಧಿ ಬಹುತೇಕ ಕೆಲಸಗಳು ಈ ಮ್ಯಾನೇಜರ್ ಮುಖಾಂತರವೇ ಆಗುತ್ತಿತ್ತು. ಅಂತಹ ವ್ಯಕ್ತಿಯೇ ರಶ್ಮಿಕಾಗೆ ಬರೋಬ್ಬರಿ 80 ಲಕ್ಷ ರೂಪಾಯಿ ವಂಚಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ‘ಜೋಶ್’ ನಟಿ ಸ್ನೇಹಾ ಆಚಾರ್ಯ
ರಶ್ಮಿಕಾಗೆ ಮ್ಯಾನೇಜರ್ ಮೋಸ ಮಾಡಿದ ಸುದ್ದಿ ಟಾಲಿವುಡ್ ಅಂಗಳದಲ್ಲಿ ಸಖತ್ ಸದ್ದು ಮಾಡುತ್ತಿದ್ದರೂ, ರಶ್ಮಿಕಾ ಮಾತ್ರ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ರಶ್ಮಿಕಾರ ಆಪ್ತರೇ ಹೇಳುವಂತೆ ಈಗಾಗಲೇ ಮ್ಯಾನೇಜರ್ ನನ್ನು ಕೆಲಸದಿಂದ ಕಿತ್ತು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಮ್ಯಾನೇಜರ್ ಗೆ ಗೇಟ್ ಪಾಸ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ರಶ್ಮಿಕಾ ಮ್ಯಾನೇಜರ್ ಯಾರು? ಎಂಬತ್ತು ಲಕ್ಷ ರೂಪಾಯಿಯನ್ನು ಆತ ಹೇಗೆ ವಂಚಿಸಿದ. ಮೋಸಕ್ಕೆ ಕಾರಣವೇನು ಹೀಗೆ ಹಲವಾರು ಪ್ರಶ್ನೆಗಳು ಮೂಡಿದ್ದರೂ, ಅನೇಕ ರೀತಿಯಲ್ಲಿ ಈ ಕುರಿತು ಚರ್ಚೆ ಆಗುತ್ತಿದ್ದರೆ ರಶ್ಮಿಕಾ ಮಾತ್ರ ದಿವ್ಯ ಮೌನ ತಾಳಿದ್ದಾರೆ.