ನಿನ್ನೆಯಷ್ಟೇ ರಶ್ಮಿಕಾ ಮಂದಣ್ಣ(Rashmika Mandanna) ನಟನೆಯ ‘ಗರ್ಲ್ ಫ್ರೆಂಡ್’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಗೆ ಅತ್ಯುತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಟೀಸರ್ ನಲ್ಲಿ ಗಂಡು ಧ್ವನಿಯೊಂದು ನಿರೂಪಣೆ ಮಾಡಿದ್ದು, ಅದು ಥೇಟ್ ಕನ್ನಡದ ಪ್ರತಿಭಾವಂತ ನಟ ದೀಕ್ಷಿತ್ ಶೆಟ್ಟಿ (Dheekshith Shetty) ಅವರ ಧ್ವನಿಯಂತಿದೆ. ಪಕ್ಕಾ ಅದು ದೀಕ್ಷಿತ್ ಶೆಟ್ಟಿ ಅವರದ್ದೇ ಧ್ವನಿ ಆಗಿರುವುದರಿಂದ ಈ ಸಿನಿಮಾದಲ್ಲಿ ದೀಕ್ಷಿತ್ ಇರಲಿದ್ದಾರಾ ಎನ್ನುವ ಕುತೂಹಲ ಮೂಡಿದೆ.
ಈಗಾಗಲೇ ತೆಲುಗು ಸಿನಿಮಾ ರಂಗದಲ್ಲಿ ದೀಕ್ಷಿತ್ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಗರ್ಲ್ ಫ್ರೆಂಡ್ ಸಿನಿಮಾದಲ್ಲೂ ಅವರು ನಟಿಸಿರುವ ಸಾಧ್ಯತೆ ಇದೆ. ಈ ಮಾಹಿತಿಯನ್ನು ಸಿನಿಮಾ ತಂಡದವರು ಈವರೆಗೂ ಹಂಚಿಕೊಂಡಿಲ್ಲ. ಮುಂದೆ ಹಂಚಿಕೊಳ್ಳಬಹುದು. ಬಟ್, ಟೀಸರ್ ನಲ್ಲಿ ಕೇಳಿಸುವ ವಾಯ್ಸ್ ಸಖತ್ ಆಗಿ ಮೋಡಿ ಮಾಡುತ್ತಿದೆ.
‘ದಿ ಗರ್ಲ್‌ಫ್ರೆಂಡ್’ (The Girlfriend) ಮಹಿಳಾ ಪ್ರದಾನ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾದ ಸಣ್ಣ ಪ್ರೋಮೋ ಒಂದು ಈಗಾಗಲೇ ಬಿಡುಗಡೆ ಆಗಿದೆ. ಪ್ರೋಮೋ ಸಹ ಕುತೂಹಲ ಮೂಡಿಸುತ್ತಿದೆ. ನೀರಿನಲ್ಲಿ ಮುಳುಗಿರುವ ರಶ್ಮಿಕಾ ಮಂದಣ್ಣ ನಗುತ್ತಿರುತ್ತಾರೆ, ಆದರೆ ಹಠಾತ್ತನೆ ಬೇಸರದ ಮುಖಚಹರೆ ಪ್ರದರ್ಶಿಸುತ್ತಾರೆ, ಆತ್ಮಹತ್ಯೆಗೆ ಯತ್ನಿಸುತ್ತಿರುವಂತೆ ಕಣ್ಣು ಮುಚ್ಚಿಬಿಡುತ್ತಾರೆ. ರಶ್ಮಿಕಾ ನೀರಿಗೆ ಇಳಿದಿದ್ದು ಏಕೆ? ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು? ರಶ್ಮಿಕಾರನ್ನು ಕಾಪಾಡುವವರು ಯಾರು? ಇನ್ನೂ ಹಲವು ಪ್ರಶ್ನೆಗಳನ್ನು ಈ ಪ್ರೋಮೋ ಮೂಡಿಸುತ್ತಿದೆ.
ಸಿನಿಮಾದ ಪ್ರೋಮೋ ನೋಡಿದರೆ ಇದು ಮಹಿಳಾ ಪ್ರಧಾನ ಸಿನಿಮಾ ಎಂಬುದು ಖಾತ್ರಿ ಆಗುತ್ತಿದೆ. ತಮ್ಮ ಬಾಯ್‌ಫ್ರೆಂಡ್ ಜೊತೆಗಿನ ಪ್ರೇಮ ಸಂಬಂಧದಿಂದ ಗರ್ಲ್‌ಫ್ರೆಂಡ್ ರಶ್ಮಿಕಾ ಮಂದಣ್ಣ ಎದುರಿಸುವ ಭಾವನೆಗಳ ಏರಿಳಿತ, ಸಮಸ್ಯೆಗಳ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎನ್ನಲಾಗುತ್ತಿದೆ. ರಶ್ಮಿಕಾ ಎಕ್ಸ್‌ಪ್ರೆಶನ್ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರಾಹುಲ್ ರವೀಂದ್ರನ್ (Rahul Ravindran) ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾವನ್ನು ಅಲ್ಲು ಅರವಿಂದ್ ಪ್ರೆಸೆಂಟ್ ಮಾಡುತ್ತಿದ್ದು, ವಿದ್ಯಾ ಕೊಪ್ಪಿನೇಡಿ- ಧೀರಜ್ ಮೊಗಿಲಿನೇನಿ ಅವರುಗಳು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ಹೃದಯಂ’ ಚಿತ್ರದ ಖ್ಯಾತಿಯ ಮಲಯಾಳಂ ಸಂಗೀತ ನಿರ್ದೇಶನ ಹೆಷಾಮ್ ಅಬ್ದುಲ್ ವಹಾಬ್ ಅವರು ಸಂಗೀತ ನೀಡುತ್ತಿದ್ದಾರೆ.
ಇದೇ ಡಿ.1ಕ್ಕೆ ಅನಿಮಲ್ (Animal) ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ರಣ್‌ಬೀರ್‌ಗೆ ಜೋಡಿಯಾಗಿ ಬರುತ್ತಿದ್ದಾರೆ. ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.
Web Stories