ನನ್ನ ಜೀವನದಲ್ಲಿ ಬಂದಿದ್ದಕ್ಕೆ ಧನ್ಯವಾದಗಳು- ವಿಜಯ್‌ಗೆ ರಶ್ಮಿಕಾ ಪ್ರೇಮ ಸಂದೇಶ?

Public TV
1 Min Read
rashmika mandanna

ಸೌತ್‌ನ ಬೆಸ್ಟ್ ಜೋಡಿಗಳಲ್ಲಿ ಒಂದಾಗಿರುವ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ (Vijay Devarakonda) ಮತ್ತೆ ಸುದ್ದಿಯಲ್ಲಿದ್ದಾರೆ. ಬಾಯ್‌ಫ್ರೆಂಡ್ ವಿಜಯ್‌ಗೆ ಸೀಕ್ರೆಟ್ ಮೆಸೇಜ್ ತಲುಪಿಸುವ ಮೂಲಕ ‘ಪುಷ್ಪ’ ನಟಿ ಸದ್ದು ಮಾಡ್ತಿದ್ದಾರೆ.

rashmika mandanna 9

ಕೊಡಗಿನ ಬೆಡಗಿ ತನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪ್ರೀತಿ ತುಂಬಿದ ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದರು. ಅದರಲ್ಲಿ ನಾನು ನಿಮಗೆ ಹೇಳಲು ಒಂದು ವಿಷಯ ಬಯಸುತ್ತೇನೆ. ನನ್ನ ಜೀವನದಲ್ಲಿ ಬಂದಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದು ಹೃದಯದ ಇಮೋಜಿ ಹಾಕಿದ್ದರು. ರಶ್ಮಿಕಾ(Rashmika Mandanna) ಯಾರ ಹೆಸರನ್ನು ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿಲ್ಲ. ಆದರೆ ವಿಜಯ್ ದೇವರಕೊಂಡ ಕುರಿತು ರಶ್ಮಿಕಾ ಈ ಪೋಸ್ಟ್ ಮಾಡಿದ್ದಾರೆ ಎಂದು ಇದೀಗ ಚರ್ಚೆಗೆ ಗ್ರಾಸವಾಗಿದೆ.

rashmika mandanna

ರಶ್ಮಿಕಾ-ವಿಜಯ್ ಹಲವು ಬಾರಿ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ತಗ್ಲಾಕೊಂಡಿದ್ದಾರೆ. ಇಬ್ಬರೂ ಜೊತೆಯಾಗಿ ವಾಸಿಸುತ್ತಿದ್ದಾರೆ ಎಂದು ಕೂಡ ಸುದ್ದಿಯಿದೆ. ಆದರೆ ಡೇಟಿಂಗ್ ಬಗ್ಗೆ ಪ್ರಶ್ನೆ ಮಾಡಿದಾಗಲೆಲ್ಲಾ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದೇ ಉತ್ತರಿಸಿದ್ದಾರೆ. ಇದನ್ನೂ ಓದಿ:ಯಶ್ ಜೊತೆಗಿನ ಸ್ನೇಹ, ಜೀವನ ಪೂರ್ತಿ ಮುಂದುವರೆಯಲಿದೆ: ಪ್ರಶಾಂತ್ ನೀಲ್

ಇನ್ನೂ ಇತ್ತೀಚೆಗೆ ತೆರೆಕಂಡ ‘ಖುಷಿ’ (Kushi Film) ಸಿನಿಮಾದ ಪ್ರಚಾರದ ವೇಳೆ ವಿಜಯ್ ದೇವರಕೊಂಡ ಸದ್ಯದಲ್ಲೇ ಮದುವೆ ಆಗೋದಾಗಿ ಗುಡ್ ನ್ಯೂಸ್ ಕೊಟ್ಟಿದ್ದರು. ಆ ಹುಡುಗಿ ರಶ್ಮಿಕಾ ಮಂದಣ್ಣ ಎಂದೇ ಸುದ್ದಿಯಾಗಿತ್ತು. ಇದುವರೆಗೂ ಈ ಬಗ್ಗೆ ಯಾವುದೇ ಬಿಟ್ಟು ಕೊಟ್ಟಿಲ್ಲ. ವಿಜಯ್ ಕಡೆಯಿಂದ ಅಧಿಕೃತ ಅಪ್‌ಡೇಟ್ ಸಿಗುವವರೆಗೂ ಕಾದುನೋಡಬೇಕಿದೆ.

Share This Article