ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನ ‘ಪುಷ್ಪ’ ಸಿನಿಮಾ ರಿಲೀಸ್ ಆಗಿ ಒಂದು ವರ್ಷ ಎರಡು ತಿಂಗಳು ಕಳೆದಿವೆ. ಆದರೂ, ಜನರು ಈ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಭಾರತದಲ್ಲಿ ಮಾತ್ರವಲ್ಲ, ನಾನಾ ದೇಶಗಳಲ್ಲೂ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಪ್ರೇಕ್ಷಕರು ಬಾಕ್ಸ್ ಆಫೀಸನ್ನು ಈಗಲೂ ಭರ್ತಿ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಪುಷ್ಪ ಸಿನಿಮಾ ರಷ್ಯಾದಲ್ಲಿ ರಿಲೀಸ್ ಆಗಿದ್ದು, ಏಳ ನೂರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಅದು ತುಂಬಿದ ಪ್ರದರ್ಶನ ಕಾಣುತ್ತಿದೆ.
Advertisement
ಭಾರತದಲ್ಲಿ ಈಗಾಗಲೇ ಭರ್ಜರಿ ಬೇಟೆ ಆಡಿರುವ ಪುಷ್ಪಾ ನೂರಾರು ಕೋಟಿಗಳನ್ನು ಬಾಚಿದೆ. ಶತದಿನೋತ್ಸವ ಆಚರಿಸಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಡಬ್ ಆಗಿ ರಿಲೀಸ್ ಆಗಿದೆ. ಓಟಿಟಿಯಲ್ಲೂ ಬಿಡುಗಡೆ ಆಗಿ ತನ್ನ ನಾಗಾಲೋಟವನ್ನು ಮುಂದುವರೆಸಿದೆ. ಆದರೂ, ಬಿಡುಗಡೆಯಾದ ಸ್ಥಳಗಳಲ್ಲಿ ಜನರು ಕ್ಯೂ ನಿಂತು ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ರಷ್ಯಾದಲ್ಲಿ ಈ ಸಿನಿಮಾ ಡಿಸೆಂಬರ್ 8ರಂದು ಬಿಡುಗಡೆ ಆಗಿದ್ದು, ಈವರೆಗೂ ಅದು 15 ಕೋಟಿಗೂ ಹೆಚ್ಚು ಹಣವನ್ನು ದೋಚಿದೆ. ಇದನ್ನೂ ಓದಿ:ಮಿಲ್ಕಿ ಬ್ಯೂಟಿ ತಮನ್ನಾ – ವಿಜಯ್ ವರ್ಮಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?
Advertisement
Advertisement
ಪುಷ್ಪ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ಕಂಡು, ನಿರ್ದೇಶಕ ಸುಕುಮಾರ್ ಪುಷ್ಪ 2 ಸಿನಿಮಾ ಮಾಡಲು ತಯಾರಿ ಮಾಡಿಕೊಂಡರು. ಈಗಾಗಲೇ ಒಂದು ಹಂತದ ಚಿತ್ರೀಕರಣವನ್ನೂ ಅವರು ಮಾಡಿ ಮುಗಿಸಿದ್ದಾರೆ. ಪುಷ್ಪ ಸಿನಿಮಾಗಿಂತಲೂ ಪುಷ್ಪ 2 ಸಿನಿಮಾಗೆ ಅತೀ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ತಾರಾಗಣದಲ್ಲೂ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಜೊತೆಗೆ ಮತ್ತೋರ್ವ ಸ್ಟಾರ್ ನಟಿ ಸಾಯಿ ಪಲ್ಲವಿ ಕೂಡ ತಾರಾಗಣದಲ್ಲಿ ಸೇರಿಕೊಂಡಿರುವುದು ಮತ್ತೊಂದು ವಿಶೇಷ.
Advertisement
ಈ ಸಿನಿಮಾ ಒಟ್ಟು ಭಾರತದಲ್ಲಿ ನಾಲ್ಕುನೂರು ಕೋಟಿಗೂ ಅಧಿಕ ಲಾಭವನ್ನು ಕಂಡಿದೆ. ಹೀಗಾಗಿಯೇ ಪುಷ್ಪ 2 ಸಿನಿಮಾಗೆ ನಟ ಅಲ್ಲು ಅರ್ಜುನ್ ನೂರು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಪುಷ್ಪ 2 ಸಿನಿಮಾವನ್ನು ಅದ್ದೂರಿಯಾಗಿಯೇ ನಿರ್ಮಾಣ ಮಾಡುತ್ತಿದ್ದು, ಕೆಲ ದೃಶ್ಯಗಳನ್ನು ಸೆರೆ ಹಿಡಿಯುವುದಕ್ಕಾಗಿ ಬ್ಯಾಂಕಾಕ್ ನಲ್ಲಿ ಬೃಹತ್ ಸೆಟ್ ಗಳನ್ನು ಹಾಕಲಾಗಿದೆ. ಜನವರಿ ಮೂರನೇ ವಾರದಿಂದ ಎರಡನೇ ಹಂತದ ಚಿತ್ರೀಕರಣ ಆರಂಭಿಸಲಿದ್ದಾರಂತೆ ಸುಕುಮಾರ್.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k