ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ (Pushpa 2) ಸಿನಿಮಾ ಡಿ.5ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಿದೆ. ಬಿಡುಗಡೆಯ ಬಳಿಕ ಪುಷ್ಪರಾಜ್ ಫೀವರ್ ಶುರುವಾಗಿದೆ. ಕೆಲ ಮಂದಿ ಸಿನಿಮಾವನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿದರೆ, ಇನ್ನೂ ಕೆಲವರು ಸಿನಿಮಾ ಒಂದು ರೇಂಜಿಗಿದೆ ಎಂದು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇದರೆಲ್ಲದರ ನಡುವೆ ‘ಪುಷ್ಪ 2’ ಸಿನಿಮಾದಲ್ಲಿ ಕನ್ನಡ ಕಲಾವಿದರ ದಂಡು ಹೈಲೆಟ್ ಆಗಿದೆ.
Advertisement
ಕನ್ನಡದ ‘ಕಿರಿಕ್ ಪಾರ್ಟಿ’ (Kirik Party) ನಟಿ ರಶ್ಮಿಕಾ ಮಂದಣ್ಣ (Rashmika Mandanna) ನ್ಯಾಷನಲ್ ಕ್ರಶ್ ಆಗಿ ಪರಭಾಷೆಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ಶ್ರೀವಲ್ಲಿ ಪಾತ್ರಕ್ಕೆ ಕೊಡಗಿನ ಬೆಡಗಿ ಜೀವ ತುಂಬಿದ್ದಾರೆ. ರಶ್ಮಿಕಾ ನಟನೆಯ ಜೊತೆ ಫೀಲಿಂಗ್ಸ್ ಡ್ಯಾನ್ಸ್‌ಗೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Advertisement
Advertisement
ಕನ್ನಡಿಗ ತಾರಕ್ ಪೊನ್ನಪ್ಪ (Tarak Ponnappa) ಅವರು ಅಲ್ಲು ಅರ್ಜುನ್ ಮುಂದೆ ತೊಡೆ ತಟ್ಟಿದ್ದಾರೆ. ಅಲ್ಲು ಅರ್ಜುನ್ ಮತ್ತು ತಾರಕ್ ನಡುವಿನ ಆ್ಯಕ್ಷನ್ ಸೀಕ್ವೆನ್ಸ್ ಸಿನಿಮಾದಲ್ಲಿ ರೋಚಕವಾಗಿದೆ. ತಾರಕ್ ನಟನೆ ಮತ್ತು ಅವರ ಲುಕ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಪರಭಾಷೆಗಳಲ್ಲಿ ಅವರಿಗೆ ಬೇಡಿಕೆ ಹೆಚ್ಚಾಗಿದೆ.
Advertisement
ಇನ್ನೂ ಕನ್ನಡದ ‘ಕಿಸ್’ ಬೆಡಗಿ ಶ್ರೀಲೀಲಾ (Sreeleela) ಅವರು ‘ಕಿಸ್ಸಿಕ್’ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಮಾದಕ ಲುಕ್ ಮತ್ತು ಡ್ಯಾನ್ಸ್‌ನಿಂದ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಶ್ರೀಲೀಲಾ ಕೂಡ ತೆಲುಗಿನ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.
ಡಾಲಿ ಧನಂಜಯ (Daali Dhananjay) ಅವರು ಜಾಲಿ ರೆಡ್ಡಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರಕ್ಕೂ ಸುಕುಮಾರ್ ಪ್ರಾಮುಖ್ಯತೆ ನೀಡಿದ್ದಾರೆ. ಎರಡನೇ ಭಾಗದಲ್ಲೂ ಡಾಲಿ ಎಂಟ್ರಿ ಕೊಟ್ಟಿದ್ದಾರೆ. ಆದರೆ ಪಾರ್ಟ್ 3ನಲ್ಲಿ ಅವರ ಪಾತ್ರ ಹೇಗೆಲ್ಲಾ ತಿರುವು ಪಡೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.
ನಂದ ಗೋಪಾಲ್ (Nanda Gopal) ಕೂಡ ‘ಪುಷ್ಪ 2’ನಲ್ಲಿ ನಟಿಸಿದ್ದಾರೆ. ಅವರ ಪಾತ್ರ ಚಿಕ್ಕದಾಗಿದೆ. ತೆರೆಯ ಮೇಲೆ ಹೆಚ್ಚು ಕಾಣಿಸಿಕೊಳ್ಳದೇ ಇದ್ದರೂ ಕನ್ನಡದ ನಟ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ.