ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಆಗಾಗ ವಿಜಯ್ ದೇವರಕೊಂಡ (Vijay Devarakonda) ಜೊತೆಗಿನ ಒಡನಾಟದ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ಇಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನಲಾದ ಸುದ್ದಿ ಹರಿದಾಡುತ್ತಿದೆ. ಇದರ ನಡುವೆ ವಿಜಯ್ ಕುಟುಂಬಕ್ಕೆ ನಟಿ ‘ಪುಷ್ಪ 2’ (Pushpa 2) ತೋರಿಸಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ಪ್ರದರ್ಶನದ ವೇಳೆ ಕಾಲ್ತುಳಿತ: ವಿಷಾದ ವ್ಯಕ್ತಪಡಿಸಿದ ರಶ್ಮಿಕಾ ಮಂದಣ್ಣ
Advertisement
ಡಿ.5ರಂದು ರಾತ್ರಿ ಹೈದರಾಬಾದ್‌ನ ಎಎಂಬಿ ಸಿನಿಮಾಸ್‌ನಲ್ಲಿ ವಿಜಯ್ ದೇವರಕೊಂಡ ಫ್ಯಾಮಿಲಿ ಜೊತೆ ‘ಪುಷ್ಪ 2’ ಚಿತ್ರವನ್ನು ರಶ್ಮಿಕಾ ವೀಕ್ಷಿಸಿದ್ದಾರೆ. ವಿಜಯ್ ತಾಯಿ ಮಾಧವಿ ಮತ್ತು ಸಹೋದರ ಆನಂದ್ ದೇವರಕೊಂಡ ಅವರು ನಟಿಯ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ವಿಜಯ್ ಇಲ್ಲ. ಆದರೆ ವಿಜಯ್ ಒಡೆತನದ ‘ರೌಡಿ’ ಕಸ್ಟ್‌ಮೈಸ್ ಟೀ- ಶರ್ಟ್ ಅನ್ನು ರಶ್ಮಿಕಾ ಧರಿಸಿರೋದು ಅಭಿಮಾನಿಗಳ ಗಮನ ಸೆಳೆದಿದೆ.
Advertisement
Rashmika & Vijay Deverakonda‘s family spotted watching #Pushpa2TheRule in AMB…🌝💘#RashmikaMandanna #VijayDevarakonda pic.twitter.com/prGbMbHn7T
— Rashmika Lover’s❤️🩹 (@Rashuu_lovers) December 5, 2024
Advertisement
ಇನ್ನೂ ಇತ್ತೀಚೆಗೆ ನಟಿ ‘ಪುಷ್ಪ 2’ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮದುವೆ ಬಗ್ಗೆ ಸುಳಿವು ನೀಡಿದ್ದರು. ಅದಷ್ಟೇ ಅಲ್ಲ, ಇತ್ತ ವಿಜಯ್ ಕೂಡ ಸಂದರ್ಶನವೊಂದರಲ್ಲಿ ನನಗೆ 35 ವರ್ಷವಾಗಿದೆ. ನಾನು ಸಿಂಗಲ್ ಆಗಿದ್ದೇನೆ ಎಂದು ಭಾವಿಸುತ್ತೀರಾ? ಎಂದು ನಿರೂಪಕಿಯನ್ನು ಪ್ರಶ್ನಿಸಿದರು. ಈ ಮೂಲಕ ತಾವು ರಿಲೇಷನ್‌ಶಿಪ್‌ನಲ್ಲಿ ಇರೋದಾಗಿ ಸುಳಿವು ನೀಡಿದ್ದರು. ಈ ಬೆನ್ನಲ್ಲೇ ವಿಜಯ್ ಫ್ಯಾಮಿಲಿ ಜೊತೆ ರಶ್ಮಿಕಾ ಕಾಣಿಸಿಕೊಂಡಿರೋದು ಇಬ್ಬರ ರಿಲೇಷನ್‌ಶಿಪ್ ವದಂತಿಗೆ ಪುಷ್ಠಿ ಸಿಕ್ಕಂತಾಗಿದೆ. ಮುಂದಿನ ವರ್ಷ ವಿಜಯ್ ಜೊತೆ ನಟಿ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.
Advertisement
ಅಂದಹಾಗೆ, ‘ಪುಷ್ಪ 2’ ಸಿನಿಮಾ ಡಿ.5ರಂದು ರಿಲೀಸ್ ಆಗಿ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಗಳಿಸಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ನ್ಯಾಷನಲ್ ಕ್ರಶ್ ರಶ್ಮಿಕಾ, ಶ್ರೀಲೀಲಾ, ಡಾಲಿ, ತಾರಕ್ ಪೊನ್ನಪ್ಪ, ಅನಸೂಯ, ಫಹಾದ್ ಫಾಸಿಲ್, ಜಗಪತಿ ಬಾಬು ಸೇರಿದಂತೆ ಅನೇಕರು ನಟಿಸಿದ್ದಾರೆ.