ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿ 7 ಗಂಟೆಯಿಂದ 9 ಗಂಟೆಗಳ ಕಾಲ ನಿದ್ದೆ ಮಾಡುತ್ತಾನೆ. ಆದರೆ ಆದರೆ ರಶ್ಮಿಕಾ ಮಂದಣ್ಣ (Rashmika Mandanna) ಭರ್ತಿ 17 ಗಂಟೆ ಸತತವಾಗಿ ನಿದ್ದೆಗೆ ಜಾರಿದ್ದರಂತೆ. ಈ ವಿಚಾರವನ್ನು ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಗರ್ಲ್‌ಫ್ರೆಂಡ್ (Girl Friend) ಚಿತ್ರಕ್ಕಾಗಿ ದೀಕ್ಷಿತ್ ಶೆಟ್ಟಿ ಜೊತೆ ನಟಿಸಿರುವ ರಶ್ಮಿಕಾ ಈ ಚಿತ್ರದ ಪ್ರಚಾರದ ವೇಳೆ ನಡೆದ ರ‍್ಯಾಪಿಡ್ ಫೈರ್ ಪ್ರಶ್ನೆಗೆ ಉತ್ತರಿಸುವ ವೇಳೆ 17 ಗಂಟೆಯ ನಿದ್ದೆಯ ವಿಚಾರ ಬಹಿರಂಗಪಡಿಸಿದ್ದಾರೆ.
ಸಿನಿಮಾ ಚಿತ್ರೀಕರಣ, ಪ್ರಚಾರ ಎಲ್ಲದರ ಮಧ್ಯೆ ರಶ್ಮಿಕಾ ಒಂದೊಂದು ದಿನ ಏನೂ ಮಾಡದೇ ವ್ಯರ್ಥವಾಗಿ ಸಮಯ ಕಳೆದಿರುವ ಉದಾಹರಣೆಯನ್ನ ದೀಕ್ಷಿತ್ ಜೊತೆ ಹೇಳಿಕೊಂಡಿದ್ದಾರೆ. ಒಂದೊಂದು ದಿನ ಯಾವ ಕೆಲಸವನ್ನೂ ಮಾಡದೆ ಆಕಾಶ, ಗೋಡೆ ನೋಡುತ್ತಾ ಸಮಯ ಕಳೆದುಬಿಡುತ್ತೇನೆ. ಏನನ್ನೂ ಮಾಡದೇ ಸುಮ್ಮನೆ ಕೂರುವ ಆ ಟ್ಯಾಲೆಂಟ್ ನನಗೆ ಇದೆ. ಒಂದು ಸಲ ಸುದೀರ್ಘ 17 ಗಂಟೆಗಳ ಕಾಲ ನಿದ್ದೆ ಮಾಡಿರುವ ರೆಕಾರ್ಡ್ ಮಾಡಿದ್ದೇನೆ ಎಂದಿದ್ದಾರೆ. ಇದಕ್ಕೆ ಏನೂ ಆಶ್ಚರ್ಯಪಡದ ನಟ ದೀಕ್ಷಿತ್ ನಾನು 16 ಗಂಟೆ ಸತತವಾಗಿ ನಿದ್ದೆ ಮಾಡಿದ್ದೇನೆ ಎಂದು ಮಾತನಾಡಿಕೊಂಡು ತಾರೆಗಳಿಬ್ಬರೂ ನಕ್ಕಿದ್ದಾರೆ.
ರಶ್ಮಿಕಾ ಟಾಲಿವುಡ್‌ನ ಬ್ಯುಸಿಯೆಸ್ಟ್ ನಟಿಯಾಗಿದ್ದು ಪ್ರಯಾಣ , ಚಿತ್ರೀಕರಣ ಎಂದು ಸದಾ ಕೆಲಸದ ಒತ್ತಡದಲ್ಲಿ ಇರುತ್ತಾರೆ. ಈ ನಡುವೆ ಒಂದೊಂದು ದೇಹ ಆಯಾಸವಾಗುವ , ಮನಸ್ಸು ಉತ್ಸಾಹ ಕಳೆದುಕೊಳ್ಳುವ ಪರಿಯನ್ನು ಉದಾಹರಣೆಯೊಂದಿಗೆ ಈ ರೀತಿ ವಿವರಿಸಿದ್ದಾರೆ.

