ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಹಾರರ್-ಕಾಮಿಡಿ-ಥ್ರಿಲ್ಲರ್ ಜಾನರ್‌ನ ಥಮಾ ಸಿನಿಮಾದ ಫಸ್ಟ್ಲುಕ್ ಟೀಸರ್ ರಿಲೀಸ್ ಆಗಿದೆ. ಕೇವಲ ಸೌತ್‌ನಲ್ಲಷ್ಟೇ ಅಲ್ಲದೇ ಭಾರತೀಯ ಚಿತ್ರರಂಗದಲ್ಲಿ ನಟಿ ರಶ್ಮಿಕಾ ಮಂದಣ್ಣ ಗ್ಲಾಮರಸ್ ಪಾತ್ರಗಳ ಮೂಲಕ ಅಭಿಮಾನಿಗಳ ಮನಸ್ಸನ್ನ ಕದ್ದಿದ್ದಾರೆ. ಇದೀಗ ತಮ್ಮ `ಥಮ’ (Thama) ಸಿನಿಮಾದ ಮೂಲಕ ಬೆಚ್ಚಿಬೀಳಿಸೋಕೆ ಹೊಸ ಪ್ರಯೋಗ ಮಾಡಿದ್ದಾರೆ.
ಇದೇ ವರ್ಷ ದೀಪಾವಳಿಗೆ ಸಿನಿಮಾ ತೆರೆಗೆ ಬರಲಿದ್ದು, ಸಿನಿಮಾದ ಟೀಸರ್ ರಿಲೀಸ್ ಆಗಿದೆ. ರಶ್ಮಿಕಾ ವಿಭಿನ್ನವಾಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ಅತಿದೊಡ್ಡ ತಾರಾಗಣವಿದೆ. ಆಯುಷ್ಮಾನ್ ಖುರಾನಾ, ರಶ್ಮಿಕಾ ಮಂದಣ್ಣ, ಪರೇಶ್ ರಾವಲ್, ನವಾಜುದ್ದೀನ್ ಸಿದ್ದಿಕ್ ಸೇರಿದಂತೆ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ರಶ್ಮಿಕಾ ವಿಶೇಷವಾಗಿ ತಾಡಾಕಾ ಅನ್ನೋ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ತಮ್ಮ ವಿಭಿನ್ನ ಪ್ರಯತ್ನದಿಂದ ಮತ್ತಷ್ಟು ಗಮನ ಸೆಳೆಯುತ್ತಿದ್ದಾರೆ. ಇದನ್ನೂ ಓದಿ: ಶಿವರಾಜ್‌ಕುಮಾರ್ ನಟನೆಯ ಡ್ಯಾಡ್ ಚಿತ್ರಕ್ಕೆ ಚಾಲನೆ
ಮ್ಯಾಡ್‌ಡಾಕ್ ನಿರ್ಮಾಣ ಸಂಸ್ಥೆ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದು, ಈ ಮೊದಲು ಹಲವಾರು ಹಾರರ್ ಸಿನಿಮಾಗಳನ್ನ ನಿರ್ಮಾಣ ಮಾಡಿದೆ. ರಶ್ಮಿಕಾ ಮಂದಣ್ಣ ಪುಷ್ಪ-2, ಛಾವಾ ಚಿತ್ರಗಳ ಬಿಗ್ ಸಕ್ಸಸ್‌ನ ನಂತರ `ಥಮ’ ಸಿನಿಮಾ, ವಿಶ್ವದಾದ್ಯಂತ ದೀಪಾವಳಿಗೆ ಧಮಾಕಾ ಮಾಡಲು ಬರುತ್ತಿದೆ. ರಶ್ಮಿಕಾ ನಯಾ ಅವತಾರವನ್ನ ಅವರ ಭಕ್ತಗಣ, ಪ್ರೇಕ್ಷಕ ವರ್ಗ ಯಾವರೀತಿ ಸ್ವೀಕಾರ ಮಾಡುತ್ತೆ ಕಾದು ನೋಡ್ಬೇಕು.