ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಅಂಬಾನಿ ಮನೆ ಮಗನ ಮದುವೆಯಲ್ಲಿ ಪುಷ್ಪರಾಜ್ ಸ್ಟೈಲಿನಲ್ಲಿ ಮಿಂಚಿದ್ದಾರೆ. ನಗು ನಗುತ್ತಲೇ ರೆಡ್ ಕಾರ್ಪೆಟ್‌ಗೆ ಶ್ರೀವಲ್ಲಿ ಎಂಟ್ರಿ ಕೊಟ್ಟಿದ್ದಾರೆ. ನಟಿಯ ಸುಂದರ ಫೋಟೋಗಳು ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಅನಂತ್ (Anant Ambani) ಮತ್ತು ರಾಧಿಕಾ ಮದುವೆ ಜು.12ರಂದು ಅದ್ಧೂರಿಯಾಗಿ ನಡೆದಿದೆ. ಬಳಿಕ ಜು.13ರಂದು ಸಂಜೆ ನಡೆದ ಶುಭ ಅಶೀರ್ವಾದ್ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರ ದಂಡೇ ಭಾಗಿಯಾಗಿದೆ. ಇದರಲ್ಲಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಹಾಜರಿ ಹಾಕಿದ್ದಾರೆ.
ಈ ಕಾರ್ಯಕ್ರಮದ ರೆಡ್ ಕಾರ್ಪೆಟ್‌ನಲ್ಲಿ ನೀಲಿ ಬಣ್ಣದ ಸೀರೆಯುಟ್ಟು ರಶ್ಮಿಕಾ ಕಂಗೊಳಿಸಿದ್ದಾರೆ. ಪಾಪರಾಜಿಗಳ ಮನವಿ ಮೇರೆಗೆ ಪುಷ್ಪರಾಜ್ ಸ್ಟೈಲ್ ಮಾಡಿ ಮುದ್ದಾದ ನಗು ಬೀರಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಇದನ್ನೂ ಓದಿ:ಕಾಲಿಗೆ ನಮಸ್ಕರಿಸಲು ಬಂದ ತಲೈವಾಗೆ ಅಮಿತಾಭ್ ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತಾ?
ಅಂದಹಾಗೆ, ಪುಷ್ಪ 2 (Pushpa 2), ಅನಿಮಲ್ ಪಾರ್ಕ್, ಕುಬೇರ, ರೈನ್‌ಬೋ, ದಿ ಗರ್ಲ್‌ಫ್ರೆಂಡ್, ಸಿಖಂದರ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ರಶ್ಮಿಕಾ ಮಂದಣ್ಣ ಕೈಯಲ್ಲಿವೆ.