ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಮುಟ್ಟಿದ್ದೆಲ್ಲ ಚಿನ್ನ. ಇವರು ನಟಿಸಿರೋ `ಮಿಷನ್ ಮಜ್ನು’, `ಗುಡ್ ಬೈ’ ರಿಲೀಸ್ ಗೂ ಮುಂಚೆನೇ ಕಿರಿಕ್ ಬೆಡಗಿ ರಶ್ಮಿಕಾ, ಬಿಟೌನ್ ಸ್ಟಾರ್ ರಣಬೀರ್ ಕಪೂರ್‌ಗೆ ನಾಯಕಿಯಾಗುವ ಅವಕಾಶವ ಗಿಟ್ಟಿಸಿಕೊಂಡಿದ್ದಾರೆ. `ಪುಷ್ಪ’ ಸಕ್ಸಸ್ ನಂತರ ಸೌತ್ ಸಿನಿಮಾಗಳ ಜೊತೆಗೆ ಬಾಲಿವುಡ್ ಸಿನಿಮಾದಲ್ಲೂ ರಶ್ಮಿಕಾಗೆ ಬುಲಾವ್ ಬರುತ್ತಿದೆ. ರಣಬೀರ್ ಕಪೂರ್ ಜತೆ ನಟಿಸುತ್ತಾರೆ ಎಂದು ಹಲವು ದಿನಗಳಿಂದ ಸುದ್ದಿ ಆಗುತ್ತಿತ್ತು. ಇದೀಗ ಸುದ್ದಿ ನಿಜವಾಗಿದೆ. ಇದನ್ನೂ ಓದಿ: ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ
ಸದ್ಯ `ಬ್ರಹ್ಮಾಸ್ತ್ರ’ ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿಯಿರೋ ರಣಬೀರ್ ಕಪೂರ್ ಈಗ `ಅನಿಮಲ್’ ಚಿತ್ರದಲ್ಲಿ ನಟಿಸಲಿದ್ದಾರೆ. ಯುಗಾದಿ ಹಬ್ಬದಂದು ರಣಬೀರ್ ಕಪೂರ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎಂದು ಅಧಿಕೃತವಾಗಿ ಟ್ವೀಟರ್‌ನಲ್ಲಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅನೌನ್ಸ್ ಮಾಡಿದ್ದಾರೆ.
Happy Ugadi people ????
We welcome Rashmika Mandanna to the world of ANIMAL to play Geetanjali ????#Ranbirkapoor @AnilKapoor @iamRashmika@deol #BhushanKumar @TSeries @VangaPranay@VangaPictures#krishnakumar @MuradKhetani#Bhadrakalipictures @dop_santha @cowvala @anilandbhanu
— Sandeep Reddy Vanga (@imvangasandeep) April 2, 2022
ಫ್ರೆಶ್ ಲವ್ ಸ್ಟೋರಿ ಜೊತೆಗೆ ಫ್ರೆಶ್ ಜೋಡಿಯನ್ನು ತೋರಿಸಬೇಕು ಅಂತಾ ರಣಬೀರ್‌ಗೆ `ಪುಷ್ಪ’ ನಟಿ ರಶ್ಮಿಕಾ ಅವರನ್ನು ಫೈನಲ್ ಮಾಡಿದ್ದಾರಂತೆ ನಿರ್ದೇಶಕರು. ಈ ಸಿನಿಮಾದಲ್ಲಿ ರಶ್ಮಿಕಾ ಅವರು, ರಣಬೀರ್‌ಗೆ ಪತ್ನಿಯಾಗಿ ನಟಿಸಲಿದ್ದಾರೆ. ಅದು ಗೀತಾಂಜಲಿ ಪಾತ್ರದಲ್ಲಿ ಎನ್ನುವುದು ವಿಶೇಷ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.